ಫೇಸ್‍ಬುಕ್‍ನಿಂದ ಈಗ ಹಿಂದೂ ಜನಜಾಗೃತಿ ಸಮಿತಿಯ ‘ಹಿಂದಿ’ ಪುಟಕ್ಕೂ ನಿರ್ಬಂಧ !

  • ಫೇಸ್‍ಬುಕ್‍ನ ಹಿಂದುದ್ವೇಷ ಸರಣಿ ಮುಂದುವರಿಕೆ !

  • ಅಮೇರಿಕಾದ `ಫೋರಮ್ ಫಾರ್ ಹಿಂದೂ ಅವೇಕನಿಂಗ್’ ಪುಟಕ್ಕೂ ನಿರ್ಬಂಧ !

  • ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಅಧಿವೇಶನ’, ಹಾಗೆಯೇ ‘ಸನಾತನ ಪ್ರಭಾತ’ ಮತ್ತು ‘ಸನಾತನ ಶಾಪ್’ ಪುಟಗಳ ಮೇಲಿನ ನಿಷೇಧ ಮುಂದುವರಿಕೆ !

  • ಫೇಸ್‍ಬುಕ್‍ಗೆ ಕಳುಹಿಸಿದ ಪತ್ರಗಳಿಗೆ ಯಾವುದೇ ಉತ್ತರವಿಲ್ಲ !

* ಫೇಸ್‍ಬುಕ್‍ನ ಹಿಂದುದ್ವೇಷ ನೋಡಿದರೆ, ಅದು ನಾಳೆ ಎಲ್ಲಾ ಹಿಂದುತ್ವನಿಷ್ಠ ಸಂಘಟನೆಗಳ ಮತ್ತು ನಾಯಕರ ಪುಟಗಳನ್ನು ಬಂದ್ ಮಾಡಿದರೆ, ಅದರಲ್ಲಿ ಅಚ್ಚರಿಯೇನಲ್ಲ ! ಇಂದು ಹಿಂದೂ ಜನಜಾಗೃತಿ ಸಮಿತಿಯ ಮೇಲೆ ಬಂದಿರುವ ವಿಪತ್ತು ನಾಳೆ ಇತರ ಹಿಂದುತ್ವನಿಷ್ಠ ಸಂಘಟನೆಗಳ ಮೇಲೆ ಬಾರಬಾರದು ಎಂದು ಎಲ್ಲ ಸಂಘಟನೆಗಳು ಒಗ್ಗೂಡಿ ಫೇಸ್‍ಬುಕ್‍ಅನ್ನು ನ್ಯಾಯಸಮ್ಮತ ರೀತಿಯಲ್ಲಿ ವಿರೋಧಿಸಬೇಕು !

* ‘ಹಿಂದೂ ಜನಜಾಗೃತಿ ಸಮಿತಿ’ ಮತ್ತು ‘ಸನಾತನ ಪ್ರಭಾತ’ ಇವು ಪತ್ರಗಳನ್ನು ಕಳುಹಿಸಿದ ನಂತರವೂ ಫೇಸ್‍ಬುಕ್ ಉದ್ದೇಶಪೂರ್ವಕವಾಗಿ ಉತ್ತರಿಸುವುದಿಲ್ಲ ಎಂಬುದು ಇದರಿಂದ ಗೋಚರಿಸುತ್ತದೆ. ಮೂಲತಃ ಫೇಸ್‍ಬುಕ್ ಪುಟವನ್ನು ಮುಚ್ಚುವ ಹಿಂದಿನ ಕಾರಣವನ್ನು ನೀಡುವುದು ಅಪೇಕ್ಷಿತವಿತ್ತು; ಆದರೆ, ಫೇಸ್‍ಬುಕ್‍ನಂತಹ ಜಾಗತಿಕ ಸಂಸ್ಥೆಯು ಕೂಡ ಇಂತಹ ಕ್ರಮ ಕೈಗೊಂಡಿಲ್ಲ. ಈ ರೀತಿ ಜಗತ್ತಿನಾದ್ಯಂತ ಎಲ್ಲಿಯೂ ನಡೆಯುವುದು ಕಂಡುಬರುವುದಿಲ್ಲ. ಇದರಿಂದ ಫೇಸ್‍ಬುಕ್‍ನ ಮನಸ್ಸಿಗೆ ಬಂದಂತೆ ವರ್ತಿಸುವ ಮತ್ತು ಮೊಂಡುತನವನ್ನು ಬಹಿರಂಗಪಡಿಸುತ್ತದೆ. ಇಂತಹ ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸರಕಾರವು ಕಟ್ಟುನಿಟ್ಟಿನ ನಿರ್ಬಂಧ ಹೇರುವುದು ಅತ್ಯಂತ ಅವಶ್ಯಕವಾಗಿದೆ.

* ಫೇಸ್‍ಬುಕ್‍ನ ಕ್ರೈಸ್ತ ಪ್ರೀತಿ ಮತ್ತು ಹಿಂದ್ವೇಷದಿಂದ ಅದು ಈ ಪುಟಗಳನ್ನು ನಿರ್ಬಂಧಿಸಲಿಲ್ಲವಲ್ಲ ? ಹಿಂದೂಗಳ ಮನಸ್ಸಿನಲ್ಲಿ ಇಂತಹ ಅನುಮಾನಗಳು ಬಂದರೆ ಆಶ್ಚರ್ಯಪಡಬೇಕಾಗಿಲ್ಲ !

ಮುಂಬಯಿ – ಫೇಸ್‍ಬುಕ್‍ನಿಂದ ಹಿಂದೂ ಜನಜಾಗೃತಿ ಸಮಿತಿಯ ‘ಹಿಂದೂ ಅಧಿವೇಶನ’, ಹಾಗೆಯೇ `ಸನಾತನ ಪ್ರಭಾತ’ ಪತ್ರಿಕೆಯ `ಸನಾತನ ಪ್ರಭಾತ’ ಮತ್ತು ಸನಾತನದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪನ್ನಗಳನ್ನು ಮಾರಾಟ ಮಾಡುವ `ಸನಾತನ ಶಾಪ್’ ಈ ಫೇಸ್‍ಬುಕ್ ಪುಟಗಳನ್ನೂ ಸಹ ಬಂದ್ ಮಾಡಿದನಂತರ ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ, ಸನಾತನ ಪ್ರಭಾತ ಹಾಗೂ ಸನಾತನ ಸಂಸ್ಥೆಯವರಿಂದ ಪತ್ರಗಳನ್ನು ಕಳುಹಿಸಲಾಗಿದೆ; ಆದರೆ ಈ ಬಗ್ಗೆ ಫೇಸ್‍ಬುಕ್‍ನಿಂದ ಯಾವುದೇ ಉತ್ತರ ಬಂದಿಲ್ಲ. ಇಷ್ಟು ಸಾಕಾಗದೇ ಈಗ ಫೇಸ್‍ಬುಕ್ ಸಮಿತಿಯ ಹಿಂದಿ ಪುಟವನ್ನು ಬಂದ್ ಮಾಡಿದೆ. ಅಲ್ಲದೆ, ಅಮೇರಿಕಾದ ಹಿಂದುತ್ವನಿಷ್ಠ ಸಂಘಟನೆಯಾದ `ಫೋರಮ್ ಫಾರ್ ಹಿಂದೂ ಅವೇಕನಿಂಗ್’ (ಎಫ್.ಎಚ್.ಎ.) ಪುಟವನ್ನು ಬಂದ್ ಮಾಡಿದೆ. ಅನೇಕ ಹಿಂದುತ್ವನಿಷ್ಠ ಹಾಗೂ ಧರ್ಮಪ್ರೇಮಿಗಳು ಫೇಸ್‍ಬುಕ್‍ನ ಈ ಹಿಂದುದ್ವೇಷದ ನಿಲುವಿಗೆ ಕಾನೂನುರೀತ್ಯಾ ನಿಷೇಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ಹಿಂದೂ ಅಧಿವೇಶನ, ಸಮಿತಿಯ ಹಿಂದಿ ಪುಟ, ಎಫ್.ಎಚ್.ಎ., ಸನಾತನ ಪ್ರಭಾತ ಮತ್ತು ಸನಾತನ ಶಾಪ್ ಇವುಗಳ ಮೇಲಿನ ನಿರ್ಬಂಧದಿಂದ ಭಾರತದಾದ್ಯಂತ ಅದೇರೀತಿ ವಿದೇಶದ ಲಕ್ಷಾಂತರ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳಿಗಾದ ಹಾನಿ!

೧. ‘ಹಿಂದೂ ಅಧಿವೇಶನ’ ಈ ಫೇಸ್‍ಬುಕ್ ಪುಟದಲ್ಲಿ ೧೪ ಲಕ್ಷ ೪೫ ಸಾವಿರ ಸದಸ್ಯತ್ವವಿತ್ತು. ಈ ಪುಟವು ‘ವೆರಿಫೈಡ್ ಪೇಜ್'(ಸಂಘಟನೆಯಿಂದ ಅಧಿಕೃತವಾಗಿ ಅನುಮೋದನೆ ಇರುವ ಪೇಜ್) ಆಗಿತ್ತು. ಜೊತೆಗೆ ಸಮಿತಿಯ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪುಟಗಳು ಸಹ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಹೆಚ್ಚಿನ ಪುಟಗಳನ್ನು ಅಂದರೆ ೩೫ ರಾಜ್ಯಗಳ ಮತ್ತು ಜಿಲ್ಲಾ ಮಟ್ಟದ ಪುಟಗಳನ್ನು ಸಹ ಫೇಸ್‍ಬುಕ್ ನಿರ್ಬಂಧಿಸಿದೆ. ಈ ಎಲ್ಲಾ ಪುಟಗಳಿಂದ, ರಾಷ್ಟ್ರ ಮತ್ತು ಧರ್ಮದ ಆಗುಹೋಗುಗಳ ಬಗ್ಗೆ ಅದೇರೀತಿ ಧರ್ಮಶಿಕ್ಷಣದ ನಿಯಮಿತ ಪೋಸ್ಟ್‍ಗಳನ್ನು ಮಾಡಲಾಗುತ್ತಿತ್ತು, ಈ ಎಲ್ಲ ಪೋಸ್ಟಗಳನ್ನು ಕಾನೂನಿನ ಚೌಕಟ್ಟಿನೊಳಗೆ ಮಾಡಲಾಗುತ್ತಿದೆ ಎಂದು ಸಮಿತಿಯು ತನ್ನ ಅಭಿಪ್ರಾಯವನ್ನು ಮಂಡಿಸಿದೆ. ಈ ಪುಟಗಳಿಂದ, ದೇಶಪ್ರೇಮಿಗಳು ಮತ್ತು ಧರ್ಮಪ್ರೇಮಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿತ್ತು. ಇದನ್ನು ನಿರ್ಬಂಧಿಸಿದ್ದರಿಂದ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಹಣದಿಂದಲೂ ಎಣಿಸಲಾಗದಷ್ಟು ಸೈದ್ಧಾಂತಿಕ ಹಾನಿ ಹಿಂದೂಗಳಿಗಾಗಿದೆ.

. ಹಿಂದೂ ಜನಜಾಗೃತಿ ಸಮಿತಿಯ ಹಿಂದಿ ಪುಟದ ಸದಸ್ಯರ ಸಂಖ್ಯೆ ೨ ಲಕ್ಷ ೫ ಸಾವಿರಕ್ಕೂ ಹೆಚ್ಚು ಇತ್ತು. ಈ ಪುಟಗಳಿಂದಲೂ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಮಾಹಿತಿಯನ್ನು ಹಿಂದೂಗಳಿಗೆ ನೀಡಲಾಗುತ್ತಿತ್ತು.

. ಅಮೇರಿಕಾದ ಹಿಂದುತ್ವನಿಷ್ಠ ಸಂಘಟನೆಯಾದ ಫೋರಮ್ ಫಾರ್ ಹಿಂದೂ ಅವೇಕನಿಂಗ್ (ಎಫ್.ಎಚ್.ಎ.)ಯ ಪುಟದ ಸದಸ್ಯರ ಸಂಖ್ಯೆ ೬ ಲಕ್ಷಕ್ಕೂ ಹೆಚ್ಚು ಇತ್ತು. ಇದರಿಂದ ಹಿಂದೂಗಳಿಗೆ ಧರ್ಮ ಮತ್ತು ಸಾಧನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿತ್ತು. ಧರ್ಮಕ್ಕಾಗಿ ಕೃತಿಶೀಲರಾಗಲು ಮಾರ್ಗದರ್ಶನವನ್ನು ನೀಡಲಾಗುತ್ತಿತ್ತು. ವಿಶೇಷವಾಗಿ ಅಮೆರಿಕಾ ಮತ್ತು ಇತರ ದೇಶಗಳಲ್ಲಿನ ಹಿಂದೂಗಳಿಗೆ ಇದರ ಮೂಲಕ ಮಾರ್ಗದರ್ಶನವನ್ನು ನೀಡಲಾಗುತ್ತಿತ್ತು.

. ಸನಾತನ ಪ್ರಭಾತ ವರ್ತಮಾನ ಪತ್ರಿಕೆಗಳಿಂದ ಹಿಂದೂಗಳಿಗೆ ರಾಷ್ಟ್ರ ಮತ್ತು ಧರ್ಮ ಸಹಿತ ಸಾಧನೆಯ ಬಗ್ಗೆಯೂ ಮಾರ್ಗದರ್ಶನ ಮಾಡಲಾಗುತ್ತಿತ್ತು. `ಸನಾತನ ಪ್ರಭಾತ’ನ ಫೇಸ್‍ಬುಕ್ ಪುಟದಲ್ಲಿ ೭೫೦೦ ಕ್ಕೂ ಹೆಚ್ಚು ಸದಸ್ಯರ ಸಂಖ್ಯೆ ಇತ್ತು. ಈ ಪುಟದಿಂದ ರಾಷ್ಟ್ರ ಮತ್ತು ಧರ್ಮದ ಮೇಲಾಗುವ ಆಘಾತಗಳು, ಹಾಗೆಯೇ ಧರ್ಮಶಿಕ್ಷಣಗಳು ಮತ್ತು ಸಂತರ ವಿಚಾರಗಳನ್ನು ನಿಯಮಿತವಾಗಿ ಪ್ರಸಾರ ಮಾಡಲಾಗುತ್ತಿತ್ತು. ಅದನ್ನೂ ಬಂದ್ ಮಾಡಿದ್ದರಿಂದ ಹಿಂದೂಗಳಿಗೆ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಮಾಹಿತಿ ಸಿಗದಂತಾಗಿದೆ. ಇದಕ್ಕೆ ಫೇಸ್‍ಬುಕ್ ಹೊಣೆಯಾಗಿದೆ. (ಫೇಸ್‍ಬುಕ್‍ನ ಈ ಸ್ವೇಚ್ಛಾಚಾರ ಅಂದರೆ ಪತ್ರಿಕೋದ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆಯಾಗಿದೆ ! – ಸಂಪಾದಕ)

. ‘ಸನಾತನ ಶಾಪ್’ ಪುಟದ ಸದಸ್ಯರ ಸಂಖ್ಯೆ ೫೬೦೦ ರಷ್ಟಿತ್ತು. ಈ ಪುಟದಿಂದ ವಿವಿಧ ವಿಷಯಗಳ ಕುರಿತು ಸನಾತನದ ೫ ಗ್ರಂಥಗಳಿಗೆ ಸಂಬಂಧಿಸಿದಂತೆ ಪೋಸ್ಟ್‍ಗಳನ್ನು ಮಾಡಲಾಗುತ್ತಿತ್ತು. ಇವುಗಳಲ್ಲಿ ಆಯುರ್ವೇದ, ಅಧ್ಯಾತ್ಮ, ಸಾಧನೆ, ಆಪತ್ಕಾಲ, ಹಬ್ಬಗಳು, ಬಾಲಸಂಸ್ಕಾರ ಇತ್ಯಾದಿಗಳು ಒಳಗೊಂಡಿದ್ದವು.

ಫೇಸ್‍ಬುಕ್ ನಿರ್ಬಂಧ ಹೇರಿದ ಹಿಂದುತ್ವನಿಷ್ಠ ಮುಖಂಡರ ಮತ್ತು ಸಂಘಟನೆಗಳ ಪುಟಗಳು !

೨೦೧೨ ರಲ್ಲಿಯೂ ಹಿಂದೂ ಜನಜಾಗೃತಿ ಸಮಿತಿಯ ಅಧಿಕೃತ `ಪುಟ’ದ ಮೇಲೆ ಯಾವುದೇ ಕಾರಣವನ್ನು ನೀಡದೇ ನಿರ್ಬಂಧ ಹೇರಲಾಗಿತ್ತು. ಪ್ರಖರ ಹಿಂದುತ್ವನಿಷ್ಠ ಮತ್ತು ಭಾಜಪದ ಶಾಸಕರಾದ ಟಿ. ರಾಜಾಸಿಂಹ ಇವರ ಅಧಿಕೃತ ಫೆಸಬುಕ್ ಪುಟವನ್ನೂ ಯಾವುದೇ ಕಾರಣವನ್ನು ನೀಡದೇ ಫೇಸಬುಕ್ ನಿರ್ಬಂಧ ಹೇರಿತ್ತು. ಹಾಗೆಯೇ ಸನಾತನ ಸಂಸ್ಥೆಯ ಅಧಿಕೃತ ಪುಟಗಳ ಮೇಲೆಯೂ ಕಳೆದ ವರ್ಷ ಇದೇ ರೀತಿಯಲ್ಲಿ ಅನ್ಯಾಯದಿಂದ ನಿರ್ಬಂಧವನ್ನು ಹೇರಲಾಯಿತು. ಅಷ್ಟೇ ಅಲ್ಲದೇ, ಸಂಸ್ಥೆಯ ಜಾಲತಾಣದ ಯಾವುದೇ ಸಂಪರ್ಕ ಕೊಂಡಿಯನ್ನು ಯಾರೂ ಫೇಸಬುಕ್‍ನಲ್ಲಿ ಪೋಸ್ಟ್ ಸಹ ಮಾಡಲು ಸಾಧ್ಯವಾಗುವುದಿಲ್ಲ. ಹಿಂದುತ್ವನಿಷ್ಠ ಸಂಪಾದಕರಾದ ಶ್ರೀ. ಸುರೇಶ ಚವ್ಹಾಣಕೆ ಇವರ ‘ಸುದರ್ಶನ ನ್ಯೂಜ್’ನ ಹಾಗೆಯೇ ‘ಆಪ್ ಇಂಡಿಯಾ’ ಈ ರಾಷ್ಟ್ರವಾದಿ ಮತ್ತು ಹಿಂದುತ್ವನಿಷ್ಠ ‘ನ್ಯೂಜ್ ಪೋರ್ಟಲ್’ ಇವರ ‘ಫೇಸಬುಕ್ ಪುಟ’ವನ್ನು ಕೆಲವು ಕಾಲಾವಧಿಯ ಹಿಂದೆ ನಿಷೇಧಿಸಲಾಗಿದೆ.


ಫೇಸಬುಕ್‍ನ ಹಿಂದುದ್ವೇಷದ ದ್ವಿಮುಖನೀತಿ !

ಫೇಸಬುಕ್ ಮುಂದುವರಿಸಿದ ಜಿಹಾದಿ ಭಯೋತ್ಪಾದನೆ, ನಕ್ಸಲ್‍ವಾದಿ ಮತ್ತು ಹಿಂದುದ್ವೇಷಿಗಳ ಪುಟಗಳು !

ಡಾ. ಝಾಕೀರ ನಾಯಿಕ ಇವರ ೪ ಫೇಸಬುಕ್ ಪುಟಗಳು ಚಾಲನೆಯಲ್ಲಿ : ಲಕ್ಷಗಟ್ಟಲೆ ಅನುಯಾಯಿಗಳು ಇದನ್ನು ಹಿಂದೂಗಳು ಏನೆಂದು ಅರ್ಥೈಸಬೇಕು ? ಸಮಾಜದಲ್ಲಿ ಹಗೆತನ ಮತ್ತು ಹಿಂಸಾತ್ಮಕ ವಿಚಾರಗಳನ್ನು ಹರಡುವವರ, ಆ ರೀತಿ ಪ್ರತ್ಯಕ್ಷ ಕೃತಿ ಮಾಡುವವರ ಕುರಿತು ಫೇಸಬುಕ್‍ಗೆ ಕುತೂಹಲವಿದೆ, ಎಂದು ತಿಳಿಯಬೇಕೇನು ? ಈ ಪುಟಗಳ ಮೇಲೆ ನಿರ್ಬಂಧ ಹೇರದ ಕುರಿತು ಮತ್ತು ಹಿಂದೂ ಜನಜಾಗೃತಿ ಸಮಿತಿ, ಸನಾತನ ಪ್ರಭಾತ ಮುಂತಾದವುಗಳ ಪುಟಗಳನ್ನು ನಿರ್ಬಂಧಿಸುವ ಕುರಿತು ಕಾರಣಗಳನ್ನು ಫೇಸಬುಕ್ ಜನತೆಗೆ ನೀಡಬೇಕು ಅಥವಾ ಕೇಂದ್ರಸರಕಾರವು ಹಿಂದೂಗಳ ಮೇಲಿನ ಈ ಅನ್ಯಾಯದ ಕಾರ್ಯಾಚರಣೆಯ ಬಗ್ಗೆ ಫೇಸಬುಕ್‍ಗೆ ಉತ್ತರ ನೀಡಲು ಬೆಂಬತ್ತಬೇಕು.

ಜಿಹಾದಿ ಸಂಘಟನೆ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಆಯ್), ರಝಾ ಅಕ್ಯಾಡಮಿ, ಜಿಹಾದಿ ಆತಂಕವಾದಿಗಳ ಆದರ್ಶವಾಗಿರುವ ಮತ್ತು ಭಾರತದಿಂದ ಪಲಾಯನಗೈದ ಡಾ. ಝಾಕೀರ ನಾಯಿಕ ಇವರ ಫೇಸಬುಕ್ ಪುಟಗಳು ಇಂದಿಗೂ ನಿರಂತರವಾಗಿ ಮುಂದುವರೆದಿವೆ. ಡಾ. ಝಾಕೀರ ಇವರ ‘ಇಸ್ಲಾಮಿಕ್ ರಿಸರ್ಚ ಫೌಂಡೇಶನ್’ ಈ ಸಂಸ್ಥೆಯ ಮೇಲೆ ನಿರ್ಬಂಧವನ್ನೇ ಹೇರಲಾಗಿದೆ. ಇಷ್ಟೇ ಅಲ್ಲದೇ, ಝಾಕೀರ ನಾಯಿಕ ಇವರ ಒಂದಲ್ಲ, ಆದರೆ ೪ ಫೇಸಬುಕ್ ಪುಟಗಳಿವೆ. ಲಕ್ಷಾವಧಿ ಜನರು ಅವರ ಅನುಯಾಯಿಗಳಾಗಿದ್ದಾರೆ. ಹಾಗೆಯೇ ಹಿಂದೂ ಧರ್ಮದಲ್ಲಿನ ಪದ್ಧತಿಗಳು, ಪರಂಪರೆ, ಶ್ರದ್ಧೆ ಇವುಗಳನ್ನು ನಾಶಮಾಡಲು ಪಣತೊಟ್ಟ ಮತ್ತು ನಕ್ಸಲ್ ವಾದಿಗಳೊಂದಿಗೆ ಸಂಬಂಧವಿರುವ `ಅಂಧಶ್ರದ್ಧಾ ನಿರ್ಮೂಲನೆ ಸಮಿತಿ’ಯ ಫೇಸಬುಕ್ ಪುಟಗಳು ಸಹ ಮುಂದುವರೆದಿವೆ.

ಇಷ್ಟೇ ಅಲ್ಲದೇ, ಹಿಂದುದ್ವೇಷಿಗಳು ಮತ್ತು ನಕ್ಸಲ್‍ವಾದಿಗಳೊಂದಿಗೆ ಸಂಬಂಧವಿದೆ ಎಂಬ ಆರೋಪವಿರುವ ಬೆಂಗಳೂರಿನ ಪತ್ರಕರ್ತೆ ಗೌರಿ ಲಂಕೇಶ ಇವರ ಸ್ಮರಣಾರ್ಥ ಆರಂಭಿಸಲಾದ ಫೇಸಬುಕ್ ಪುಟಗಳನ್ನು ಸಹ ಫೇಸಬುಕ್ ಜುಲೈ ೨೦೨೦ ರಲ್ಲಿ ನಿರ್ಬಂಧ ಹೇರಿತ್ತು. ಈ ಕುರಿತು ಸಾಮ್ಯವಾದಿಗಳು ಮತ್ತು ಕಥಿತ ಧರ್ಮನಿರಪೇಕ್ಷತಾವಾದಿಗಳು ವಿರೋಧಿಸಿದಾಗ ತಕ್ಷಣ ಗಮನಹರಿಸಿ ಆ ಪುಟಗಳನ್ನು ಆರಂಭಿಸಲಾಯಿತು. ಹಾಗೆಯೇ ಫೇಸಬುಕ್‍ನ ಪ್ರತಿನಿಧಿಗಳು `ನಾವು ಈ ತಪ್ಪಿಗಾಗಿ ಕ್ಷಮೆಯನ್ನು ಯಾಚಿಸುತ್ತೇವೆ’, ಎಂಬ ಸ್ಪಷ್ಟೀಕರಣವನ್ನೂ ನೀಡಿದ್ದರು.

ಹಿಂದುತ್ವನಿಷ್ಠ ಮತ್ತು ಹಿಂದುತ್ವನಿಷ್ಠ ಸಂಘಟನೆಗಳಿಗೆ ಕರೆ !

ಫೇಸಬುಕ್ ನ ಹಿಂದುದ್ವೇಷಿ ವರ್ತನೆಯನ್ನು ಯಾವ ಪದ್ಧತಿಯಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಇವುಗಳು ಅನುಭವಿಸಿದವೋ, ಅದೇ ರೀತಿ ಇತರರೂ ಅನುಭವಿಸಿರಬಹುದು. ಸಮಾಜದಲ್ಲಿ ನಿಸ್ವಾರ್ಥವಾಗಿ ರಾಷ್ಟ್ರ ಮತ್ತು ಧರ್ಮ ಇವುಗಳಿಗಾಗಿ ನಿರಂತರವಾಗಿ ಕಾರ್ಯವನ್ನು ಮಾಡುತ್ತಿರುವ ಅನೇಕ ಹಿಂದುತ್ವನಿಷ್ಠ ಸಂಘಟನೆಗಳ ಫೇಸಬುಕ್ ಪುಟಗಳ ಮೇಲೆಯೂ ನಿರ್ಬಂಧವನ್ನು ಹೇರಿರಬಹುದು. ಈ ನಿಟ್ಟಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಎಲ್ಲ ಹಿಂದುತ್ವನಿಷ್ಠ ಮತ್ತು ಧರ್ಮಕ್ಕಾಗಿ ಕಾರ್ಯವನ್ನು ಮಾಡುವ ಸಂಘಟನೆಗಳಿಗೆ ಕರೆಯನ್ನು ನೀಡಿದೆ. ಈ ರೀತಿ ಫೇಸಬುಕ್ ಯಾವುದೇ ರೀತಿಯ ಪೂರ್ವಸೂಚನೆಯನ್ನು ನೀಡದೇ ಅವರ ಪುಟಗಳ ಮೇಲೆಯೂ ನಿರ್ಬಂಧವನ್ನು ಹೇರಿದ್ದರೆ, ಆ ಬಗೆಗಿನ ಮಾಹಿತಿಯನ್ನು ಹಿಂದೂ ಜನಜಾಗೃತಿ ಸಮಿತಿಗೆ ತಿಳಿಸಬೇಕು. ಈ ಕುರಿತು ಸಮಿತಿಯು ಖಂಡಿತವಾಗಿಯೂ ತಮಗೆ ಸಹಾಯ ಮಾಡುವುದು. ಮಾಹಿತಿಯನ್ನು ಕಳುಹಿಸುವಾಗ ಸಂಘಟನೆಯ ಹೆಸರು, ಫೇಸಬುಕ್ ಪುಟಗಳ ಲಿಂಕ್ (ಸಂಪರ್ಕಕೊಂಡಿ), ಸದಸ್ಯರ ಸಂಖ್ಯೆ ಮತ್ತು ಸಂಪರ್ಕ ಕ್ರಮಾಂಕ ಇವುಗಳ ಸಮಾವೇಶ ಮಾಡಬೇಕು. ಹಿಂದೂ ಜನಜಾಗೃತಿ ಸಮಿತಿಗೆ ಮುಂದಿನ ಸಂಪರ್ಕ ಕ್ರಮಾಂಕಕ್ಕೆ ಸಂಪರ್ಕಿಸಬಹುದು : ವಿ-ಅಂಚೆ ವಿಳಾಸ : [email protected]