ಮಕ್ಕಳ ಲೈಂಗಿಕತೆಯ ಪ್ರಸಾರ ಮಾಡುವ ‘ಬಾಂಬೆ ಬೇಗಮ್ಸ್’ ವೆಬ್ ಸರಣಿಯ ಮೇಲೆ ನಿರ್ಬಂಧ ಹೇರಿ ! – ಹಿಂದೂ ಜನಜಾಗೃತಿ ಸಮಿತಿ

‘ನೆಟ್‌ಫ್ಲಿಕ್ಸ್’ ಮತ್ತು ‘ಒಟಿಟಿ ಪ್ಲಾಟ್‌ಫಾರ್ಮ್’ಗಳಲ್ಲಿ ಪ್ರಸಾರವಾಗುತ್ತಿರುವ ‘ಬಾಂಬೆ ಬೇಗಮ್ಸ್’ ಎಂಬ ವೆಬ್ ಸರಣಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಅಶ್ಲೀಲ ಚಿತ್ರಗಳನ್ನು ನೋಡುವುದು, ಮಕ್ಕಳು ಮಾದಕ ಪದಾರ್ಥಗಳ ಸೇವನೆ ಮಾಡುವುದು ಇತ್ಯಾದಿ ಪ್ರಚೋದನಕಾರಿ ಹಾಗೂ ಆಕ್ಷೆಪಾರ್ಹ ದೃಶ್ಯಗಳನ್ನು ತೋರಿಸಲಾಗಿದೆ. ಸಮಾಜದಲ್ಲಿ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳು ಹೆಚ್ಚುತ್ತಿರುವ ಸಮಯದಲ್ಲಿ, ಈ ವೆಬ್ ಸರಣಿಯ ಮೂಲಕ ಮಕ್ಕಳ ಲೈಂಗಿಕತೆಯ ಪ್ರಸಾರ ಮಾಡುವುದು ಅಂದರೆ ಮಕ್ಕಳ ಮೇಲೆ ದೌರ್ಜನ್ಯವನ್ನು ಉತ್ತೇಜಿಸುವ ಒಂದು ಪ್ರಕಾರವಾಗಿದೆ. ಈ ಪ್ರಕಾರವನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ‘ಬಾಂಬೆ ಬೇಗಮ್ಸ್’ ವೆಬ್ ಸರಣಿಯನ್ನು ನಿಷೇಧಿಸಬೇಕು. ಅದೇ ರೀತಿ ಈ ವೆಬ್ ಸರಣಿಯ ನಿರ್ಮಾಪಕರು, ಹಾಗೂ ಅದನ್ನು ಪ್ರಸಾರ ಮಾಡುವ ‘ನೆಟಫ್ಲಿಕ್ಸ್’ ಮೇಲೆಯೂ ‘ಬಾಲನ್ಯಾಯ ಕಾಯ್ದೆ (ಪಾಲನೆ ಮತ್ತು ಪೋಷಣೆ)೨೦೧೫ ’ರ ೭೭ ನೆ ಕಲಂ ಅನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಅಪರಾಧವನ್ನು ದಾಖಲಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಒತ್ತಾಯಿಸಿದೆ. ಅದಕ್ಕಾಗಿ ಸಮಿತಿಯು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವ ಪ್ರಕಾಶ ಜಾವಡೇಕರ, ಮಹಾರಾಷ್ಟ್ರ ಗೃಹ ಸಚಿವ ದಿಲೀಪ ವಳಸೆ-ಪಾಟಿಲ್ ಹಾಗೂ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣ ಆಯೋಗ’ಕ್ಕೆ ಇ-ಮೇಲ್ ಕಳುಹಿಸಿದೆ.

‘ಬಾಂಬೆ ಬೇಗಮ್ಸ್’ ವೆಬ್ ಸರಣಿಯ ನಿರ್ಮಾಪಕ ಅಲಂಕೃತ ಶ್ರೀವಾಸ್ತವ ಇವರಾಗಿದ್ದು, ನಟಿ ಪೂಜಾ ಭಟ್ ಮುಖ್ಯ ಪಾತ್ರದಲ್ಲಿದ್ದಾರೆ. ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣ ಆಯೋಗ’ವು ಮಹಾರಾಷ್ಟ್ರದ ಗೃಹ ಕಾರ್ಯದರ್ಶಿ ಮತ್ತು ಮುಂಬಯಿ ಪೊಲೀಸರಿಗೆ ಪತ್ರ ಬರೆದಿದ್ದು, ವೆಬ್ ಸರಣಿಯ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸುವಂತೆ ನಿರ್ದೇಶಿಸಿದೆ. ಈ ಘಟನೆ ಗಂಭೀರವಾಗಿದ್ದು ಮಕ್ಕಳ ಲೈಂಗಿಕತೆಯ ಪ್ರಸಾರವನ್ನು ತಡೆಯಲು ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಡಾ. ಉದಯ ಧುರಿ ಇವರು ಒತ್ತಾಯಿಸಿದ್ದಾರೆ.