‘ಜಾತ್ಯತೀತ ಶಿಕ್ಷಣವೋ ಹಿಂದೂ ವಿರೋಧಿ ಪ್ರಚಾರತಂತ್ರವೋ’ ಈ ಕುರಿತು ವಿಶೇಷ ಆನ್‍ಲೈನ್ ಚರ್ಚಾಕೂಟ !

ಭಾರತದಲ್ಲಿ ಸುಳ್ಳು ಇತಿಹಾಸವನ್ನು ಕಲಿಸುವ ತಂತ್ರವು ಗಾಂಧಿ-ನೆಹರೂರವರ ಕಾಲದಿಂದಲೂ ಅವ್ಯಾಹತವಾಗಿ ನಡೆಯುತ್ತಿದೆ ! – ಶ್ರೀ. ಶಂಕರ ಶರಣ, ಹಿರಿಯ ಬರಹಗಾರ ಮತ್ತು ಅಂಕಣಕಾರ

ಖಿಲಾಫತ್ ಆಂದೋಲನವನ್ನು ಬೆಂಬಲಿಸಿ ಮಹಾತ್ಮ ಗಾಂಧಿ ಕ್ರೂರ ಮೊಘಲ್ ಆಕ್ರಮಣಕಾರರನ್ನು ಒಳ್ಳೆಯವರು ಎಂದು ಕರೆಯಲು ಪ್ರಾರಂಭಿಸಿದರು. ಅವರನ್ನು ವೈಭವೀಕರಿಸಿದರು, ಇದರಿಂದ ಮುಸ್ಲಿಮರು ಸಂತೋಷವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಸೇರುತ್ತಾರೆ ಎಂದು; ಆದರೆ ಇದರಿಂದ ಸುಳ್ಳು ಇತಿಹಾಸದ ಪ್ರಚಾರ ಪ್ರಾರಂಭವಾಯಿತು. ಸ್ವಾತಂತ್ರ್ಯದ ನಂತರ ಸೋವಿಯತ್ ಕಮ್ಯುನಿಸ್ಟರ ಪ್ರಭಾವದಿಂದಾಗಿ, ದೇಶದ ಶಿಕ್ಷಣದಲ್ಲಿ ಹಿಂದೂ ಧರ್ಮವನ್ನು ಕೀಳಾಗಿ ಪರಿಗಣಿಸಲಾಯಿತು. ಗಾಂಧಿ-ನೆಹರೂರವರ ಕಾಲದಿಂದಲೂ ತಪ್ಪಾದ ಇತಿಹಾಸವನ್ನು ಬರೆಯಲಾಗಿದೆ. ಇದರ ಪರಿಣಾಮವಾಗಿ ಎಡಪಂಥೀಯ ಸಿದ್ಧಾಂತ, ಅಂದರೆ ಹಿಂದೂ ವಿರೋಧಿ ಸಿದ್ಧಾಂತವು ಜನರ ಮೇಲೆ ಹೇರಲಾಯಿತು. ಹಿಂದೂ ವಿರೋಧಿ ಇತಿಹಾಸವನ್ನು ಅನೇಕ ದಶಕಗಳಿಂದ ಕಲಿಸಲಾಗುತ್ತಿದೆ. ಇಂದಿನ ಶಿಕ್ಷಣದಲ್ಲೂ ಹಿಂದೂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಅಂಶಗಳನ್ನು ಒಳ್ಳೆಯದೆಂದು ಕಲಿಸಲಾಗುತ್ತಿದೆ ಎಂದು ಹಿರಿಯ ಬರಹಗಾರ ಮತ್ತು ಅಂಕಣಕಾರ ಶ್ರೀ. ಶಂಕರ ಶರಣ ಇವರು ಹೇಳಿದರು. ಅವರು `ಹಿಂದೂ ಜನಜಾಗೃತಿ ಸಮಿತಿ’ ಆಯೋಜಿಸಿದ್ದ ‘ಜಾತ್ಯತೀತ ಶಿಕ್ಷಣವೋ ಹಿಂದೂ ವಿರೋಧಿ ಪ್ರಚಾರತಂತ್ರವೋ’ ಕುರಿತು ‘ಆನ್‍ಲೈನ್ ಚರ್ಚಾಕೂಟ’ದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಹಿಂದೂ ಜಾಗೃತಿ ಸಮಿತಿಯ ಜಾಲತಾಣ Hindujagruti.org, ಯೂ-ಟ್ಯೂಬ್ ಮತ್ತು ಟ್ವಿಟ್ಟರ್ ನಲ್ಲಿ ೨೮೫೩ ಜನರು ಪ್ರತ್ಯಕ್ಷವಾಗಿ ವೀಕ್ಷಿಸಿದ್ದಾರೆ.

ಈ ಸಮಯದಲ್ಲಿ, ‘ಭಾರತೀಯ ಶಿಕ್ಷಣ ಮಂಚ್’ ನ ಅಖಿಲ ಭಾರತ ಸಂಯೋಜಕರಾದ ಶ್ರೀ. ದಿಲೀಪ ಕೇಳಕರ ಅವರು, ಜೆಎನ್‍ಯು ಮತ್ತು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ‘ಸಂಪೂರ್ಣ ಜೀವನ ಅಭಾರತೀಯವಾಗಿರುವುದೇ’ ಅಲ್ಲಿ ಭಾರತ ವಿರೋಧಿ ಘೋಷಣೆಗಳ ಜೊತೆಗೆ ಸ್ವಾ. ಸಾವರಕರ ಮತ್ತು ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅವಮಾನಗೊಳಿಸುವುದಕ್ಕೆ ಮುಖ್ಯ ಕಾರಣ. ಆದ್ದರಿಂದ ನಮಗೆ ಶಿಕ್ಷಣದೊಂದಿಗೆ ನ್ಯಾಯ, ಕೈಗಾರಿಕೆ, ಕಲೆಗಳಂತಹ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯ ಜೀವನ ಪದ್ಧತಿಯನ್ನು ತರಬೇಕಾಗಿದೆ’ ಎಂದರು. ‘ಮಧ್ಯಪ್ರದೇಶದ ಸಾಹಿತ್ಯ ಅಕಾಡೆಮಿ’ಯ ನಿರ್ದೇಶಕ ಶ್ರೀ. ವಿಕಾಸ ದವೆ ಅವರು, ‘ಸಾ ವಿದ್ಯಾ ಯಾ ವಿಮುಕ್ತಯೇ !’ ಅಂದರೆ, ಮೋಕ್ಷಕ್ಕೆ ಕರೆದೊಯ್ಯುವ ಶಿಕ್ಷಣವೇ ನಿಜವಾದ ಶಿಕ್ಷಣ. ನಮ್ಮ ಋಷಿಮುನಿಗಳು ಆಂತರಿಕ ಜ್ಞಾನವನ್ನು ಪ್ರಕಟಗೊಳಿಸುವ ಶಿಕ್ಷಣ ಪದ್ಧತಿಯನ್ನು ಆರಂಭಿಸಿದ್ದರು. ಇಂದು ನಾವು ಆ ಶಿಕ್ಷಣದ ಮೂಲ ಉದ್ದೇಶದಿಂದ ದೂರ ಸರಿದಿದ್ದೇವೆ. ಉತ್ತಮ ವ್ಯವಸ್ಥೆಯನ್ನು ಸ್ಥಾಪಿಸಬೇಕಿದ್ದರೆ, ಬಾಲ್ಯದಿಂದಲೂ ಧರ್ಮದ ಶಿಕ್ಷಣವನ್ನು ಕಲಿಸುವುದೇ ಉತ್ತಮ ಶಿಕ್ಷಣವಾಗಿದೆ” ಎಂದು ಹೇಳಿದರು. ಈ ಸಮಯದಲ್ಲಿ `ಹಿಂದೂ ಜನಜಾಗೃತಿ ಸಮಿತಿ’ಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು, ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಎಲ್ಲರಿಗೂ ಸಮಾನತೆಯ ಹಕ್ಕನ್ನು ನೀಡಲಾಗಿದೆ; ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರ ನಡುವೆ ತಾರತಮ್ಯ ಮತ್ತು ಅಸಮಾನತೆಯಿದೆ. ಸಂವಿಧಾನದ ೨೮ ನೇ ವಿಧಿ ಪ್ರಕಾರ ಯಾವುದೇ ಧಾರ್ಮಿಕ ಶಿಕ್ಷಣಕ್ಕೆ ಸರಕಾರದ ಅನುದಾನ ನೀಡಲಾಗುವುದಿಲ್ಲ. ಆದ್ದರಿಂದ ಬಹುಸಂಖ್ಯಾತರಿಗೆ (ಹಿಂದೂಗಳಿಗೆ) ತಮ್ಮ ಧರ್ಮದ ಶಿಕ್ಷಣವನ್ನು ಕಲಿಸಲು ಸಾಧ್ಯವಾಗುವುದಿಲ್ಲ; ಆದರೆ, ವಿಧಿ ೩೦ ರ ಪ್ರಕಾರ, ಅಲ್ಪಸಂಖ್ಯಾತರು (ಮುಸ್ಲಿಮರು) ಸರಕಾರದ ಅನುದಾನದ ಪಡೆದು ತಮ್ಮ ಧರ್ಮದ ಶಿಕ್ಷಣವನ್ನು ಕಲಿಸಬಹುದು. ಇದು ನೇರವಾಗಿ ಧರ್ಮದ ಆಧಾರದ ಮೇಲೆ ತಾರತಮ್ಯವನ್ನುಂಟು ಮಾಡುತ್ತಿದೆ ಮತ್ತು ಇದನ್ನು ಹೋಗಲಾಡಿಸಬೇಕು ಎಂದು ಹೇಳಿದರು.