ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಅನುದಾನದಿಂದ ೨೦೨೧-೨೨ ಸಾಲಿನ ತಸ್ತಿಕ ಭತ್ಯೆಯ ರೂಪದಲ್ಲಿ ೩೦ ಕ್ಕೂ ಅಧಿಕ ಅನ್ಯಮತೀಯರ ಪ್ರಾರ್ಥನಾ ಸ್ಥಳಗಳಿಗೆ ೧೩.೫೦ ಲಕ್ಷ ರೂ.ಗಳನ್ನು ನೀಡಲಾಗಿತ್ತು. ತದನಂತರ ಹಿಂದೂಗಳ ವಿರೋಧದಿಂದ ಈ ಆದೇಶವನ್ನು ಮುಜರಾಯಿ ಸಚಿವರಾದ ಶ್ರೀ. ಕೋಟಾ ಶ್ರೀನಿವಾಸ ಪೂಜಾರಿಯವರು ತಡೆ ಹಿಡಿಯಲು ಆದೇಶ ನೀಡಿದ್ದಾರೆ. ತಮ್ಮ ಗಮನಕ್ಕೆ ಬಂದ ತಕ್ಷಣ ತತ್ಪರತೆಯಿಂದ ಆದೇಶವನ್ನು ತಡೆ ಹಿಡಿಯುವಂತೆ ಆದೇಶ ನೀಡಿದ್ದಕ್ಕಾಗಿ ಮಾನ್ಯ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಹಿಂದೂ ಜನಜಾಗೃತಿ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಆದರೆ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಇಂತಹ ತಪ್ಪುಗಳ ಪುನರಾವರ್ತನೆಯಾಗುತ್ತಿರುತ್ತದೆ. ಫೆಬ್ರವರಿ ೨೦೨೧ ರಲ್ಲಿ ಬೆಳಗಾವಿಯ ೧೬ ಹಿಂದೂ ದೇವಸ್ಥಾನಗಳನ್ನು ವಶಪಡಿಸಿ ಸರಕಾರೀಕರಣಗೊಳಿಸಲು ಆದೇಶವನ್ನು ಹೊರಡಿಸಲಾಗಿತ್ತು. ತದನಂತರ ಭಕ್ತರ ವಿರೋಧದಿಂದ ಆದೇಶವು ರದ್ದಾಯಿತು. ಹಾಗಾಗಿ ಇಂತಹ ತಪ್ಪುಗಳನ್ನು ಮಾಡುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.