ಪತ್ರಕರ್ತ ಗಿರೀಶ ಕುಬೇರ ಇವರ ಪುಸ್ತಕದ ವಿಷಯದಲ್ಲಿ ಮಹಾರಾಷ್ಟ್ರ ರಾಜ್ಯ ಸರಕಾರವು ಏಕೆ ಸುಮ್ಮನಿದೆ ?
ಪತ್ರಕರ್ತ ಗಿರೀಶ ಕುಬೇರ ಇವರ ‘ರೆನಿಸಾನ್ಸ್ ಸ್ಟೇಟ್ : ‘ದ ಅನರಿಟನ್ ಸ್ಟೋರಿ ಆಫ್ ದ ಮೇಕಿಂಗ್ ಆಫ್ ಮಹಾರಾಷ್ಟ್ರ’ ಎಂಬ ಪುಸ್ತಕದ ವಿವಾದಿತ ವಿಷಯದಿಂದ ಪ್ರಸ್ತುತ ಶಿವಾಜಿ ಪ್ರೇಮಿಗಳಲ್ಲಿ ತೀವ್ರ ಆಕ್ರೋಶದ ಅಲೆಯೆದ್ದಿದೆ. ಈ ಪುಸ್ತಕದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರನ್ನು ಅಪಮಾನಿಸಲಾಗಿದೆ ಎಂದು ಅನೇಕ ಸಂಘಟನೆಗಳು ಆರೋಪಿಸಿವೆ. ಹಾಗೆಯೇ ಸ್ವತಃ ಕೊಲ್ಹಾಪುರದಲ್ಲಿ ಛತ್ರಪತಿ ಗದ್ದುಗೆಯ ವಂಶಜರಾದ ಸಂಭಾಜಿರಾಜೆ ಛತ್ರಪತಿಯವರೂ ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯ ಸರಕಾರವು ಈ ಪುಸ್ತಕದ ಮೇಲೆ ನಿರ್ಬಂಧವನ್ನು ಹಾಕಬೇಕೆಂಬ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಹೀಗಿರುವಾಗಲೂ ರಾಜ್ಯ ಸರಕಾರದಿಂದ ಇದುವರೆಗೂ ಯಾವುದೇ ಕಾರ್ಯಾಚರಣೆ ಆಗುತ್ತಿಲ್ಲ ಎಂಬುದರಿಂದ ಬಹಳ ಆಶ್ಚರ್ಯವೆನಿಸುತ್ತದೆ. ಹಾಗಾಗಿ ಸರಕಾರವು ಯೋಗ್ಯವಾದಂತಹ ಕಾರ್ಯಾಚರಣೆಗಾಗಿ ಪುಸ್ತಕದಲ್ಲಿರುವ ಅವಮಾನಕಾರಿ ವಿಷಯದ ಬಗ್ಗೆ ಒಂದು ಇತಿಹಾಸದ ಅಭ್ಯಾಸಕರ ಸಮಿತಿಯನ್ನು ನೇಮಿಸಿ ಅದಕ್ಕೆ ಯೋಗ್ಯವಾದಂತಹ ಕಾರ್ಯಾಚರಣೆಯನ್ನು ಮಾಡಬೇಕು, ಹಾಗೂ ಅಲ್ಲಿಯ ತನಕ ಪುಸ್ತಕದ ಮಾರಾಟದ ಮೇಲೆ ನಿರ್ಬಂಧ ಹೇರಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಮುಖ್ಯಮಂತ್ರಿ ಉದ್ಧವ ಠಾಕ್ರೆಯವರಿಗೆ ಮನವಿಯಯನ್ನು ಕಳುಹಿಸಿ ಆಗ್ರಹಿಸಿದೆ.
ಪತ್ರಕರ್ತ ಗಿರೀಶ ಕುಬೇರರು ಸತತವಾಗಿ ವಿವಾದಿತ ಬರವಣಿಗೆಯನ್ನು ಮಾಡುತ್ತಿರುತ್ತಾರೆ; ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಛತ್ರಪತಿ ಸಂಭಾಜಿರಾಜೆ ಇವರ ಹಿಂದವೀ ಸ್ವರಾಜ್ಯದ ಕಾಲಮಾನ ಹಾಗೂ ಅಂದಿನ ವಿಭಿನ್ನ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಡದೇ ಈ ಇಬ್ಬರು ನರವೀರರ ತುಲನೆಯನ್ನು ಮಾಡುವುದು ಅಯೋಗ್ಯವಾಗಿದೆ. ಅದರಲ್ಲಿಯೂ ‘ಛತ್ರಪತಿ ಸಂಭಾಜಿ ಮಹಾರಾಜರಲ್ಲಿ ಶಿವಾಜಿ ಮಹಾರಾಜರಂತೆ ಸಹನಶೀಲತೆ ಮತ್ತು ವಿದೇಶಾಂಗ ನೀತಿ ಇರಲಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಮೃತ್ಯುವಿನ ನಂತರ ಗದ್ದುಗೆಯನ್ನು ಏರಲು ಸಂಭಾಜಿಯವರು ರಕ್ತಪಾತವನ್ನು ನಡೆಸಿದರು’ ಎಂದು ನೇರವಾಗಿ ಆರೋಪಿಸಿರುವುದು ಈ ಮಹಾಪುರುಷರ ಮೇಲೆ ಕಳಂಕ ಹಚ್ಚಿದಂತಾಗಿದೆ. ಬಾಬರ-ಔರಂಗಜೇಬರಂತಹ ಕ್ರೂರ ಆಡಳಿತಗಾರರ ಅತ್ಯಾಚಾರಗಳನ್ನು ಮುಚ್ಚಿಟ್ಟು ಅವರ ಜೀವನದಲ್ಲಿನ ಕೇವಲ ಸಹಿಷ್ಣುತೆಯನ್ನು ತೋರಿಸುವಂತಹ ಪ್ರಸಂಗದ ಚರ್ಚೆಯನ್ನು ಮಾಡುವ ಈ ಸೆಕ್ಯುಲರ್ ಪತ್ರಕರ್ತರಿಗೆ ಅಕಸ್ಮಾತ್ತಾಗಿ ಛತ್ರಪತಿ ಸಂಭಾಜಿ ಮಹಾರಾಜರ ಅಸಹಿಷ್ಣುತೆ ಅರಿವಾದುದರ ಹಿಂದೆ ಖಂಡಿತವಾಗಿಯೂ ಏನೋ ಒಂದು ಉದ್ದೇಶವಿದೆ. ಆದರೂ ‘ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರೊಂದಿಗೆ ಹೋಲಿಸುವಂತಹ ಯಾವುದೇ ವ್ಯಕ್ತಿತ್ವ ಇದ್ದಲ್ಲಿ ಅದು ಬಾಜಿರಾವ್ ಪೇಶ್ವೆಯವರಾಗಿದ್ದಾರೆ’ ಎಂಬ ಉಲ್ಲೇಖವನ್ನು ಮಾಡಿ ಮತ್ತೊಮ್ಮೆ ಮರಾಠಾ-ಬ್ರಾಹ್ಮಣ ವಾದವನ್ನು ಕೆದಕಿ ತೆಗೆಯಲು ಈ ಪ್ರಯತ್ನವಾಗುತ್ತಿಲ್ಲವಲ್ಲ ಎಂದು ಸಹ ಸರಕಾರವು ತುರ್ತಾಗಿ ನೋಡಬೇಕು.
ಗಿರೀಶ ಕುಬೇರರು ಲೋಕಸತ್ತಾ ಪತ್ರಿಕೆಯ ‘ಅಸಂತಾಂಚೆ ಸಂತ’ ಎಂಬ ಸಂಪಾದಕೀಯದಲ್ಲಿ ಮದರ ತೆರೆಸಾ ಇವರ ವಿಷಯದಲ್ಲಿ ಲೇಖನವನ್ನು ಬರೆದಾಗ ಕ್ರೈಸ್ತ ಸಮಾಜವು ವಿರೋಧ ಮಾಡಿದ ತಕ್ಷಣ ಮರುದಿನ ಅವರು ಮೊದಲನೆಯ ಪುಟದಲ್ಲಿ ಬಹಿರಂಗವಾಗಿ ಕ್ಷಮೆ ಯಾಚನೆ ಮಾಡಿ ಮುಕ್ತರಾದರು. ಅನಂತರ ಹಿಂದೂ ಸಮಾಜದಿಂದ ಲಕ್ಷಗಟ್ಟಲೆ ಶಿವಾಜಿ ಪ್ರೇಮಿಗಳಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿರೋಧವಾಗುತ್ತಿರುವಾಗ ಛತ್ರಪತಿ ಸಂಭಾಜಿರಾಜೆ ಇವರ ವಿಷಯದ ಲೇಖನದ ಸಂದರ್ಭದಲ್ಲಿ ತಮ್ಮ ನಿಲುವನ್ನು ಏಕೆ ಸ್ಪಷ್ಟಗೊಳಿಸುತ್ತಿಲ್ಲ? ಸರಕಾರವೇ ಈಗ ಅದರ ವಿಷಯದಲ್ಲಿ ತುರ್ತಾಗಿ ಕಾರ್ಯಾಚರಣೆ ಮಾಡಬೇಕು ಎಂದು ನಮ್ಮ ಆಗ್ರಹವಾಗಿದೆ.