ವಿದೇಶಿ ‘ವೆಗನ್’ ಹಾಲನ್ನು ಭಾರತದಲ್ಲಿ ನೆಲೆಯೂರಿಸಲು ‘ಅಮೂಲ’ ಹಾಲನ್ನು ವಿರೋಧಿಸುವ ‘ಪೆಟಾ’ದ ಷಡ್ಯಂತ್ರ !

‘ಪೆಟಾ’ದ ನಿಜ ಸ್ವರೂಪ ಏನಿದೆ ?’ ಈ ಕುರಿತು ಆನ್‌ಲೈನ್ ವಿಶೇಷ ವಿಚಾರಸಂಕಿರಣ !

ಇಂದು ಸೈನ್ಯಬಲವಿಲ್ಲದೇ ಯಾವುದೇ ದೇಶದ ಮೇಲೆ ನಿಯಂತ್ರಣ ಸಾಧಿಸುವುದು ಅಸಾಧ್ಯವಾಗಿದೆ. ನಮ್ಮ ಉತ್ಪನ್ನಗಳನ್ನು ಖರೀದಿಸಲು ಬಾಧ್ಯ ಮಾಡಿದರೆ ಆ ದೇಶದ ಮೇಲೆ ಸಹಜವಾಗಿ ನಿಯಂತ್ರಣವನ್ನು ಸಾಧಿಸಲು ಬರುತ್ತದೆ. ಅದರ ಒಂದು ವಿಧವೆಂದರೆ ‘ಪೆಟಾ’ವು ಭಾರತದಲ್ಲಿ ಆರಂಭಿಸಿದ ‘ವೆಗನ್ ಮಿಲ್ಕ್’ನ (ಶಾಕಾಹಾರಿ ಹಾಲು) ಚರ್ಚೆ ! ಅಮೇರಿಕಾದಲ್ಲಿ ಸೋಯಾಬಿನ್‌ನಲ್ಲಿ ಅನುವಂಶೀಯ ಮಾರ್ಪಾಡು ಮಾಡಿ ಅದರಿಂದ ‘ವೆಗನ್ ಮಿಲ್ಕ್’ಅನ್ನು ತಯಾರಿಸಲಾಗುತ್ತದೆ. ಅದರಲ್ಲಿ ಹೆಚ್ಚು ಪ್ರೋಟಿನ್ ಇರುತ್ತವೆ. ಈ ‘ಸೋಯಾಮಿಲ್ಕ್’ನ ಪ್ರಚಾರ ಮಾಡುವಾಗ ಮಾತ್ರ ಈ ಬೆಳೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ ಎಂಬುದನ್ನು ಮುಚ್ಚಿಡಲಾಗುತ್ತದೆ. ಭಾರತದಲ್ಲಿ ಆಕಳ ಹಾಲಿಗೆ ದೊಡ್ಡ ಮಾರುಕಟ್ಟೆ ಇದೆ. ಅವುಗಳ ಮೇಲೆ ವಿದೇಶಿ ಕಂಪನಿಗಳು ಸ್ವಾಮಿತ್ವವನ್ನು ನಿರ್ಮಿಸಲೆಂದೇ ಅಮೇರಿಕಾದ ‘ಪೆಟಾ’ ಸಂಸ್ಥೆಯು ‘ಅಮೂಲ’ ಕಂಪನಿಗೆ ‘ಪ್ರಾಣಿಗಳ ಹಾಲಿಗಿಂತ ‘ವೆಗನ್ ಮಿಲ್ಕ್’ ತಯಾರಿಸಲು ಸಲಹೆಯನ್ನು ನೀಡಿದೆ’, ಎಂದು ಹರಿಯಾಣಾದ ಅಧ್ಯಯನಕಾರರು ಮತ್ತು ಶ್ರೀ ವಿವೇಕಾನಂದ ಕಾರ್ಯ ಸಮಿತಿಯ ಅಧ್ಯಕ್ಷರಾದ ಶ್ರೀ. ನೀರಜ ಅತ್ರಿ ಇವರು ಬಯಲಿಗೆಳೆದರು. ಅವರು ‘ಹಿಂದೂ ಜನಜಾಗೃತಿ ಸಮಿತಿ’ಯು ಆಯೋಜಿಸಿದ “ಪೆಟಾ’ದ ನಿಜಸ್ವರೂಪ ಏನಿದೆ ?’, ಈ ‘ಆನ್‌ಲೈನ್ ವಿಶೇಷ ವಿಚಾರಸಂಕಿರಣ’ದಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸಮಿತಿಯ ಜಾಲತಾಣ Hindujagruti.org, ಯು-ಟ್ಯೂಬ್ ಮತ್ತು ಟ್ವಿಟ್ ಇವುಗಳಲ್ಲಿ 4797 ಜನರು ಪ್ರತ್ಯಕ್ಷ ನೋಡಿದರು.

ಈ ಸಮಯದಲ್ಲಿ ‘ಪೆಟಾ’ದ ನಿಜ ಸ್ವರೂಪವನ್ನು ಬಯಲಿಗೆಳೆದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಉಮೇಶ ಶರ್ಮಾ ಇವರು, ‘ಪೆಟಾ’ದ ಜಾಲತಾಣವನ್ನು ನೋಡಿದಾಗ, ‘ಅವರು ಕೇವಲ ಹಿಂದೂಗಳ ವಿವಿಧ ಧಾರ್ಮಿಕ ಸಂಪ್ರದಾಯ, ಪರಂಪರೆ ಇವುಗಳ ಸಮಯದಲ್ಲಿ ಪ್ರಾಣಿಗಳ ಮೇಲಾಗುವ ಆಘಾತಗಳನ್ನು ತಡೆಗಟ್ಟಲು ಹೋರಾಡಿದ ಉದಾಹರಣೆಗಳನ್ನು ನೀಡಿದ್ದಾರೆ; ಆದರೆ ‘ಬಕರಿ ಈದ್‌ನ ದಿನದಂದು ಪ್ರಾಣಿಗಳ ಬಲಿ ನೀಡಬಾರದು’ ಎಂದು ಪ್ರಚಾರ ಮಾಡುವುದಿಲ್ಲ’, ಎಂದು ಗಮನಕ್ಕೆ ಬರುತ್ತದೆ. ತದ್ವಿರುದ್ಧ ಅವರು ಹಲಾಲ ಮಾಂಸವನ್ನು ಸಮರ್ಥಿಸುತ್ತಾರೆ. ಭಾರತೀಯ ಆಹಾರ ಸುರಕ್ಷಿತತೆ ಮತ್ತು ಪ್ರಮಾಣ ಸಂಸ್ಥೆಯು (FSSAI) ‘ವೆಗನ್ ಮಿಲ್ಕ್’ನ್ನು ಹಾಲು ಎಂದು ಮಾನ್ಯತೆ ನೀಡದಿದ್ದರೂ ಕೇವಲ ವಿದೇಶಿ ಕಂಪನಿಗಳ ಹಿತವನ್ನು ಕಾಪಾಡಲು ‘ಪೆಟಾ’ ಭಾರತದಲ್ಲಿ ತನ್ನ ಪ್ರಚಾರವನ್ನು ಮಾಡುತ್ತಿದೆ. ಆದುದರಿಂದ ‘ಪೆಟಾ’ದ ಪ್ರತಿಯೊಂದು ಚಲನವಲನದ ಮೇಲೆ ಕೇಂದ್ರಸರಕಾರವು ಸೂಕ್ಷ್ಮವಾಗಿ ಗಮನವಿಡುವ ಆವಶ್ಯಕತೆ ಇದೆ’, ಎಂದು ಹೇಳಿದರು.

ಈ ಸಮಯದಲ್ಲಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ದೆಹಲಿ ವಕ್ತಾರರಾದ ಶ್ರೀ. ನರೇಂದ್ರ ಸುರ್ವೆ ಇವರು, ‘ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಪ್ರಾಣಿ, ವನಸ್ಪತಿ, ನಿಸರ್ಗ ಇವುಗಳ ಪೂಜೆಯನ್ನು ಮಾಡಲಾಗುತ್ತದೆ. ಆದುದರಿಂದ ಭಾರತದಲ್ಲಿ ‘ಪೆಟಾ’ದಂತಹ ಸಂಸ್ಥೆಗಳ ಆವಶ್ಯಕತೆ ಇಲ್ಲ. ಅಮೇರಿಕಾದಲ್ಲಿಯೇ ಪ್ರತಿವರ್ಷ 350 ಕೋಟಿ ಹಸು-ಎಮ್ಮೆ, 12 ಕೋಟಿ ಹಂದಿಗಳು, 70 ಲಕ್ಷ ತೋಳಗಳು, 3 ಕೋಟಿ ಬಾತುಕೋಳಿಗಳನ್ನು ಕೊಲ್ಲಲಾಗುತ್ತದೆ. ಆದುದರಿಂದ ಪ್ರಾಣಿ ಹಿಂಸೆಯನ್ನು ತಡೆಗಟ್ಟಲು ‘ಪೆಟಾ’ವು ತನ್ನ ದೇಶದೆಡೆಗೆ ಗಮನ ನೀಡುವುದು ಹೆಚ್ಚು ಆವಶ್ಯಕವಾಗಿದೆ. ಭಾರತದಲ್ಲಿ 7 ಲಕ್ಷ ಕೋಟಿ ರೂಪಾಯಿಗಳ ಹಾಲಿನ ವ್ಯವಸಾಯವಿದೆ. ‘ಅಮೂಲ’ಗೆ 10 ಕೋಟಿ ರೈತರು ಹಾಲನ್ನು ಪೂರೈಸುತ್ತಾರೆ. ಅದರಲ್ಲಿನ 7 ಕೋಟಿ ಭೂಮಿಹೀನವಾಗಿದ್ದಾರೆ. ಇಂತಹ ಸಮಯದಲ್ಲಿ ‘ಅಮೂಲ’ಗೆ ಹಸುವಿನ ಹಾಲನ್ನು ತೆಗೆದುಕೊಳ್ಳಬಾರದೆಂದು ಹೇಳುವ ‘ಪೆಟಾ’ 7 ಕೋಟಿ ರೈತರಿಗಾಗಿ ಏನು ಮಾಡಲಿದೆ, ಎಂದು ಅವರು ಮೊದಲು ಹೇಳಬೇಕು ? 1 ಲೀಟರ್ ಹಸುವಿನ ಹಾಲು ಕೇವಲ 45 ರೂಪಾಯಿಗಳಿಗೆ ಸಿಗುತ್ತಿರುವಾಗ ಸುಮಾರು 400 ರೂಪಾಯಿ ಬೆಲೆಯ ‘ವೆಗನ್ ಮಿಲ್ಕ್’ ಭಾರತೀಯ ಜನತೆಗೆ ಕೈಗೆಟುಕಬಹುದೇ ? ಎಂದು ಹೇಳಿದರು.