ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !
ವಯಸ್ಸಿಗನುಸಾರ ಪೂ. (ಸೌ.) ತಾಯಿಯವರಿಗೆ ವಿವಿಧ ವೇದನೆಗಳ ಜೊತೆಗೆ ಉಬ್ಬಸದ ತೊಂದರೆಯೂ ಇತ್ತು. ನಡುನಡುವೆ ಇದರ ತೀವ್ರತೆಯೂ ಹೆಚ್ಚಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ‘ಅವರಿಗೆ ಯಾವ ವೈದ್ಯಕೀಯ ಉಪಚಾರವನ್ನು ನೀಡಬೇಕು ?’, ಎಂಬುದನ್ನು ಪ.ಪೂ. ಡಾಕ್ಟರರು ಸಾಧಕರಿಗೆ ಪ್ರತ್ಯಕ್ಷ ಕೃತಿಯಿಂದ ಕಲಿಸಿದರು.