ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !

ತಾವು ಸ್ವತಃ ಭಗವಂತಸ್ವರೂಪರಾಗಿದ್ದರೂ ಕೃತಜ್ಞತಾಭಾವದಿಂದ, ಪರಿಪೂರ್ಣತೆಯಿಂದ ಮತ್ತು ಸಹಜಭಾವದಿಂದ ತಾಯಿ-ತಂದೆಯವರ ಸೇವೆಯನ್ನು ಮಾಡಿ ಸಮಾಜದೆದುರು ಉತ್ತಮ ಸೇವೆಯ ಆದರ್ಶವನ್ನಿಡುವ ಪರಾತ್ಪರ ಗುರು ಡಾ. ಆಠವಲೆ !

(ಪರಾತ್ಪರ ಗುರು) ಡಾ. ಆಠವಲೆ

‘೧೯೯೦ ರಿಂದ ಸನಾತನ ಸಂಸ್ಥೆಯ ಕಾರ್ಯ ಮುಂಬಯಿಯಲ್ಲಿ ಆರಂಭವಾಯಿತು. ಅಂದಿನಿಂದ ನಾವು ಕೆಲವು ಸಾಧಕರು ಸೇವೆಯ ನಿಮಿತ್ತದಲ್ಲಿ ಪ.ಪೂ. ಡಾಕ್ಟರರ ಮನೆಗೆ ಹೋಗಿ ಬರಲು ಆರಂಭಿಸಿದೆವು. ಆಗ ಪ.ಪೂ. ಡಾಕ್ಟರರ ತಾಯಿ-ತಂದೆ ಅವರ ಜೊತೆಗೆ ವಾಸಿಸುತ್ತಿದ್ದರು. ನಾವೆಲ್ಲ ಸಾಧಕರು ಪ.ಪೂ. ಡಾಕ್ಟರ್ ಇವರಂತೆಯೇ ಅವರನ್ನು ‘ತಾಯಿ’ ಮತ್ತು ‘ದಾದಾ’ ಎಂದು ಸಂಬೋಧಿಸುತ್ತಿದ್ದೆವು. ಅವರಿಬ್ಬರೂ ನಮ್ಮೆಲ್ಲ ಸಾಧಕ ರನ್ನು ಮನಃಪೂರ್ವಕ ಪ್ರೀತಿಸುತ್ತಿದ್ದರು. ಅವರು ನಮ್ಮನ್ನು ತಮ್ಮ ಕುಟುಂಬದ ಒಬ್ಬ ಸದಸ್ಯನೆಂದು ತಿಳಿಯುತ್ತಿದ್ದರು. ಸದ್ಯ ಸಮಾಜದಲ್ಲಿ ತಾಯಿ-ತಂದೆ ವೃದ್ಧರಾದಾಗ ಮಕ್ಕಳಿಗೆ ಬೇಡವಾಗುತ್ತಾರೆ. ಕೆಲವರು ‘ಅವರ ಅಡಚಣೆ ಬೇಡ’ವೆಂದು ಬೇರೆಯೇ ಮನೆ ಮಾಡಿಕೊಂಡಿರುತ್ತಾರೆ ಮತ್ತು ಕೆಲವರು ಅವರನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬಿಡುತ್ತಾರೆ. ನಮ್ಮ ಪಾಲನೆ ಪೋಷಣೆ ಮಾಡಿ, ಒಳ್ಳೆಯ ಸಂಸ್ಕಾರ ಮಾಡಿ ಸಮಾಜದಲ್ಲಿ ನಾವು ಹೆಸರು ಗಳಿಸುವಂತೆ ಮಾಡಿರುವ ನಮ್ಮ ತಾಯಿ-ತಂದೆಯರ ಬಗ್ಗೆ ಇದೆಷ್ಟು ಕೃತಘ್ನತೆ ? ‘ಇಂತಹ ಸಮಾಜಕ್ಕೆ ಯೋಗ್ಯ ದೃಷ್ಟಿಕೋನ ಸಿಗಬೇಕೆಂದು, ಪ್ರತ್ಯಕ್ಷ ಭಗವಂತನೆ (ಪರಾತ್ಪರ ಗುರು ಡಾಕ್ಟರ್ ಆಠವಲೆಯವರು) ತನ್ನ ತಾಯಿ-ತಂದೆಯರ ಸೇವೆ ಹೇಗೆ ಮಾಡಿದರು ?’, ಎಂಬುದು ಇಲ್ಲಿ ಕೊಟ್ಟಿರುವ ಉದಾಹರಣೆಯಿಂದ ಅರಿವಾಗಬಹುದು ಹಾಗೂ ‘ದೇವರ ಪ್ರತಿಯೊಂದು ಕೃತಿ ಎಷ್ಟು ಪರಿಪೂರ್ಣವಿರುತ್ತದೆ ?’, ಎಂಬುದೂ ಕಲಿಯಲು ಸಿಗುವುದು.

ಪರಾತ್ಪರ ಗುರು ಡಾ. ಆಠವಲೆಯವರ ತಂದೆ ಪ.ಪೂ. ಬಾಳಾಜಿ ಆಠವಲೆ ಮತ್ತು ತಾಯಿ ಪೂ. (ಸೌ.) ನಲಿನಿ ಆಠವಲೆ

‘ಸೇವೆ ಮಾಡುವಾಗ ಪ್ರತಿಯೊಂದು ಕೃತಿಗೂ ಭಕ್ತಿಮಾರ್ಗಕ್ಕನುಸಾರ ಭಾವದ ಮತ್ತು ಕರ್ಮಯೋಗಕ್ಕನುಸಾರ ಪರಿಪೂರ್ಣತ್ವವನ್ನು ಜೋಡಿಸಿ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಸೇವೆ ಮಾಡಬೇಕು ?’ ಎಂಬುದು ಪ.ಪೂ. ಡಾ. ಆಠವಲೆಯವರು ಮಾಡಿರುವ ಅವರ ತಾಯಿ-ತಂದೆಯರ ಸೇವೆಯಿಂದ ಕಲಿಯಲು ಸಿಗುತ್ತದೆ.

ನಾವು ೨೩/೧೨ ನೇ ಸಂಚಿಕೆಯಲ್ಲಿ ಮುಂಬಯಿಯ ಸೇವಾಕೇಂದ್ರ ದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಜೊತೆಗಿದ್ದು ಸೇವೆ ಮಾಡುವ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ದಿನೇಶ ಶಿಂದೆಯವರು ‘ಪರಾತ್ಪರ ಗುರು ಡಾಕ್ಟರ್ ಆಠವಲೆಯವರು ಅವರ ಅನುಪಸ್ಥಿತಿಯಲ್ಲಿ ತಾಯಿ-ತಂದೆಯರ ಸೇವೆ ಯೋಗ್ಯ ರೀತಿಯಲ್ಲಿ ಆಗಬೇಕೆಂದು ಅವರು ಸಾಧಕರನ್ನು ಸಿದ್ಧಪಡಿಸಿಕೊಂಡಿರುವ’ ವಿಷಯವನ್ನು ನೋಡಿದೆವು. ಇಂದು ಅದರ ಮುಂದಿನ ಭಾಗವನ್ನು ನೋಡೋಣ.

ಇಂದಿನ ಯುಗವು ‘ಉಪಯೋಗಿಸಿರಿ ಮತ್ತು ಎಸೆಯಿರಿ’ (Use & Throw) ಈ ತತ್ತ್ವವನ್ನು ಅನುಸರಿಸುವವರದ್ದಾಗಿದೆ. ‘ಮಕ್ಕಳನ್ನು ಬೇಬಿ ಸಿಟ್ಟಿಂಗ್‌ನಲ್ಲಿ ಮತ್ತು ತಾಯಿ-ತಂದೆಯರನ್ನು ವೃದ್ಧಾಶ್ರಮದಲ್ಲಿ’ ಬಿಡುವ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವ ಪೀಳಿಗೆ ಈಗ ತಾಯಿ-ತಂದೆಯರನ್ನು ‘ಉಪಯೋಗದ ವಸ್ತುವಿನ ದೃಷ್ಟಿಯಲ್ಲಿ ನೋಡಲು ಆರಂಭಿಸಿದೆ. ‘ವೃದ್ಧ ತಾಯಿ-ತಂದೆಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು’, ಈ ಸಂಸ್ಕೃತಿ ನಿರ್ಮಾಣವಾಗಿರುವ ಸಮಾಜದಿಂದ ತಾಯಿ-ತಂದೆಯರ ಬಗ್ಗೆ ಗೌರವ ಹಾಗೂ ಮಾನಸನ್ಮಾನದ ಅಪೇಕ್ಷೆಯಂತೂ ಇಲ್ಲ; ಆದರೆ ಮಕ್ಕಳು ಅವರ ಆಸ್ತಿಯ ಮೇಲೆ ಕಣ್ಣಿಟ್ಟು ಅವರಿಗೆ ಬದುಕಲೂ ಅಸಹನೀಯ ಮಾಡಿರುವುದನ್ನು ನಾವು ನೋಡುತ್ತಿದ್ದೇವೆ. ಪರಾತ್ಪರ ಗುರು ಡಾ. ಆಠವಲೆಯವರ ಹಾಗೆ ಸಂತಸೇವೆಯೆಂದು ತಿಳಿದು ತಾಯಿ-ತಂದೆಯರ ಸೇವೆ ಮಾಡುವ ಸಂತತಿಯಂತೂ ಅಪರೂಪದ ಮಾತು ! ಈ ಕೆಳಗಿನ ವಿಷಯಗಳಲ್ಲಿ ‘ವೃದ್ಧರ ಸೇವೆ ಮಾಡುವಾಗ ಭಾವ ಹೇಗಿರಬೇಕು ? ಯಾವ ವಿಷಯಗಳ ಎಚ್ಚರ ವಹಿಸಬೇಕು ?’ ಪ್ರೇಮದಿಂದ ಹಾಗೂ ಪರಿಪೂರ್ಣ ಸೇವೆ ಹೇಗೆ ಮಾಡಬೇಕು ?’, ಎಂಬುದು ಸಮಷ್ಟಿಗೆ ಕಲಿಯಲು ಸಿಗಲಿಕ್ಕಿದೆ. ಸಾಧಕರು ಸಂತರ ಹಾಗೂ ಹಿರಿಯ ವ್ಯಕ್ತಿಗಳ ಸೇವೆಯನ್ನು ಹೀಗೆಯೇ ಸೇವಾಭಾವದಿಂದ ಮಾಡಿದರೆ ಅವರ ಆಧಾತ್ಮಿಕ ಉನ್ನತಿ ಶೀಘ್ರಗತಿಯಲ್ಲಿ ಆಗುವುದು ಖಚಿತ !          

(ಭಾಗ ೪)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/54615.html
ಶ್ರೀ. ದಿನೇಶ ಶಿಂದೆ

೧೦. ಅಧ್ಯಾತ್ಮಪ್ರಸಾರದ ಪ್ರವಾಸಕ್ಕೆ ಹೋಗುವಾಗ ಪರಾತ್ಪರ ಗುರು ಡಾ. ಆಠವಲೆಯವರು ತಾಯಿ-ತಂದೆಯರ ಸೇವೆಗಾಗಿ ಮಾಡಿದ ಪರಿಪೂರ್ಣ ಸಿದ್ಧತೆ !

೧೦ ಅ. ಅಧ್ಯಾತ್ಮಪ್ರಸಾರಕ್ಕಾಗಿ ಪ್ರವಾಸದಲ್ಲಿರುವಾಗ ‘ತಾಯಿ-ತಂದೆಯರ ಆರೋಗ್ಯದ ವಿಷಯದಲ್ಲಿ ಅಡಚಣೆಯಾಗಬಾರದು’, ಎಂದು ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಪ್ರಥಮೋಪಚಾರವನ್ನು ಕಲಿಸುವುದು : ವಯಸ್ಸಿಗನುಸಾರ ಪೂ. (ಸೌ.) ತಾಯಿಯವರಿಗೆ ವಿವಿಧ ವೇದನೆಗಳ ಜೊತೆಗೆ ಉಬ್ಬಸದ ತೊಂದರೆಯೂ ಇತ್ತು. ನಡುನಡುವೆ ಇದರ ತೀವ್ರತೆಯೂ ಹೆಚ್ಚಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ‘ಅವರಿಗೆ ಯಾವ ವೈದ್ಯಕೀಯ ಉಪಚಾರವನ್ನು ನೀಡಬೇಕು ?’, ಎಂಬುದನ್ನು ಪ.ಪೂ. ಡಾಕ್ಟರರು ಸಾಧಕರಿಗೆ ಪ್ರತ್ಯಕ್ಷ ಕೃತಿಯಿಂದ ಕಲಿಸಿದರು. ‘ಉಬ್ಬಸ ಬಂದಾಗ ಮೊದಲು ‘ಇನ್‌ಹೇಲರ್ ಸ್ಪ್ರೇ’ ಬಾಯಿಯ ಮೂಲಕ ಕೊಡುವುದು. ಅದರಿಂದ ಏನೂ ಪರಿಣಾಮವಾಗದಿದ್ದರೆ, ೧೦ ನಿಮಿಷದ ನಂತರ ಮಾತ್ರೆಯನ್ನು ಕೊಡುವುದು. ಮಾತ್ರೆಯಿಂದಲೂ ಬದಲಾವಣೆ ಆಗದಿದ್ದರೆ, ಪ್ರಾಣವಾಯು (ಆಕ್ಸಿಜನ್) ಕೊಡುವುದು. ಪ್ರಾಣವಾಯು ಕೊಡುವಾಗ ಅದರ ಪ್ರಮಾಣವನ್ನು ನಿಧಾನವಾಗಿ ಹೆಚ್ಚಿಸಬೇಕು ಹಾಗೂ ಅದರ ಪ್ರಮಾಣವನ್ನು ಎಷ್ಟು ಇಡಬೇಕು ?’, ಇತ್ಯಾದಿ ಎಲ್ಲವನ್ನೂ ಅವರು ಸಾಧಕರಿಗೆ ಕಲಿಸಿದರು. ‘ಅವಶ್ಯಕತೆ ಇದ್ದರೆ ಪೂ. ತಾಯಿಯವರಿಗೆ ‘ಇಂಜೆಕ್ಷನ್ ಹೇಗೆ ಕೊಡುವುದು ?’ ‘ಇಂಜೆಕ್ಷನ್ ಕೊಡುವಾಗ ಅವರ ಕೈಯನ್ನು ಹೇಗೆ ಹಿಡಿಯಬೇಕು ? ನರ ಎಲ್ಲಿರುತ್ತದೆ ?’ ಅದರಲ್ಲಿ ‘ಇಂಜೆಕ್ಷನ್ನ ಸೂಜಿಯನ್ನು ನಿಧಾನವಾಗಿ ಹೇಗೆ ಚುಚ್ಚಬೇಕು ? ಆ ಮೇಲೆ ಔಷಧವನ್ನು ಒಳಗೆ ಹೇಗೆ ತಳ್ಳುವುದು ?’, ಮುಂತಾದ ಎಲ್ಲ ವಿಷಯಗಳನ್ನು ಪ.ಪೂ. ಡಾಕ್ಟರರು ಸ್ವಲ್ಪವೂ ವೈದ್ಯಕೀಯ ಜ್ಞಾನವಿಲ್ಲದ ನಮ್ಮಂತಹ ಸಾಧಕರಿಗೆ ಕಲಿಸಿದರು.

೧೦ ಆ. ಪರಾತ್ಪರ ಗುರು ಡಾ. ಆಠವಲೆಯವರು ಪ್ರಸಾರದ ಪ್ರವಾಸಕ್ಕೆ ಹೋಗುವ ಮೊದಲು ಪ.ಪೂ. ದಾದಾ ಮತ್ತು ಪೂ. (ಸೌ.) ತಾಯಿಯವರ ಔಷಧಗಳ ವಿವರಗಳನ್ನು ಬರೆದಿಡುತ್ತಿದ್ದರು, ಅವರ ಆರೋಗ್ಯದ ಅಥವಾ ಔಷಧದ ವಿಷಯದಲ್ಲಿ ಸಾಧಕರಿಗೆ ಅಡಚಣೆ ಯುಂಟಾದರೆ ತನ್ನ ನಿರ್ಧರಿತ ವಸತಿಯ ಸಂಪರ್ಕ ಕ್ರಮಾಂಕವನ್ನು ಬರೆದಿಡುತ್ತಿದ್ದರು : ‘ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾರವರಿಗೆ ಬೇಕಾಗುವ ಔಷಧಗಳನ್ನು ಹುಡುಕಲು ಸಾಧಕರಿಗೆ ಸ್ವಲ್ಪವೂ ತೊಂದರೆಯಾಗಬಾರದೆಂದು, ಪ್ರವಾಸಕ್ಕೆ ಹೋಗುವ ಮೊದಲು ಪ.ಪೂ. ಡಾಕ್ಟರರು ವೈದ್ಯಕೀಯ ಉಪಚಾರಕ್ಕೆ ಸಂಬಂಧಿಸಿದ ಎಲ್ಲ ಔಷಧಗಳನ್ನು ತಾವೇ ಸ್ವತಃ ಸಿದ್ಧಪಡಿಸಿಡುತ್ತಿದ್ದರು. ‘ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾರವರಿಗೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಯಾವ ಮಾತ್ರೆಗಳನ್ನು ಕೊಡಬೇಕು ? ಎಂಬುದನ್ನು ಪ್ರತಿಯೊಂದಕ್ಕೂ ಬೇರೆ ಬೇರೆ ಡಬ್ಬಿಯನ್ನು ಮಾಡಿ ಅದರ ಮೇಲೆ ಹಾಗೆ ಬರೆದಿಡುತ್ತಿದ್ದರು ಮತ್ತು ಸಂಗ್ರಹದಲ್ಲಿ ಎಷ್ಟು ದಿನಗಳ ಔಷಧ ಬಾಕಿ ಇದೆ ? ಎಷ್ಟು ದಿನಗಳಲ್ಲಿ ಪುನಃ ಔಷಧವನ್ನು ಖರೀದಿಸಬೇಕಾಗುತ್ತದೆ ? ಎಂಬುದರ ದಿನಾಂಕವನ್ನೂ ಸಹ ಅವರು ಬರೆದಿಡುತ್ತಿದ್ದರು. ಇವೆಲ್ಲವನ್ನೂ ಅವರು ಕಾಗದದಲ್ಲಿ ಎಲ್ಲ ವಿವರಣೆಯೊಂದಿಗೆ ಬರೆದಿಡುತ್ತಿದ್ದರು. ಇಷ್ಟು ಮಾತ್ರವಲ್ಲ, ಅವರು ಪ್ರವಾಸದಲ್ಲಿರುವಾಗ ತಾಯಿ-ತಂದೆಯರ ಆರೋಗ್ಯದ ವಿಷಯದಲ್ಲಿ ಸಾಧಕರಿಗೆ ಏನಾದರೂ ಅಡಚಣೆ ಬಂದರೆ ‘ಅವರನ್ನು ಸಂಪರ್ಕಿಸಲು, ಆ ಕಾಲದಲ್ಲಿ ಸಂಚಾರವಾಣಿ ಇಲ್ಲದ ಕಾರಣ ಪ್ರತಿದಿನ ಅವರು ಯಾವ ಊರಿನಲ್ಲಿರುವರೊ, ಆ ಊರಿನ ಹೆಸರು ಮತ್ತು ಅಲ್ಲಿನ ಸಾಧಕರ ದೂರವಾಣಿ ಕ್ರಮಾಂಕವನ್ನು ಕಾಗದದಲ್ಲಿ ಬರೆದು ಆ ಕಾಗದವನ್ನು ಔಷಧಗಳ ಪೆಟ್ಟಿಗೆಯಲ್ಲಿಡುತ್ತಿದ್ದರು. ಆದ್ದರಿಂದ ಏನಾದರೂ ಅಡಚಣೆ ಬಂದರೆ ಸಾಧಕರು ಅವರನ್ನು ಸಂಪರ್ಕ ಮಾಡಿ ವಿಚಾರಿಸಿಕೊಳ್ಳಬಹುದಾಗಿತ್ತು.

೧೦ ಇ. ಪರಾತ್ಪರ ಗುರು ಡಾ. ಆಠವಲೆಯವರು ಪ್ರಸಾರ ಪ್ರವಾಸದ ೩-೪ ದಿನ ಮೊದಲೇ ಪ.ಪೂ. ದಾದಾ ಮತ್ತು ಪೂ. ತಾಯಿಯವರ ವೈದ್ಯಕೀಯ ಸೇವೆಯ ದೃಷ್ಟಿಯಲ್ಲಿ ಸಿದ್ಧತೆ ಮಾಡುವುದು ಹಾಗೂ ಅವರಿಗೆ ಪ್ರಸಾರ ಪ್ರವಾಸದ ವಿಷಯದಲ್ಲಿ ಎಲ್ಲವನ್ನೂ ಹೇಳಿ ಹೋಗುವಾಗ ಅವರ ಆಶೀರ್ವಾದ ಪಡೆಯುತ್ತಿದ್ದರು : ಪರಾತ್ಪರ ಗುರು ಡಾ. ಆಠವಲೆಯವರು ಪ್ರಸಾರ ಪ್ರವಾಸಕ್ಕೆ ಹೊರಡುವ ೩-೪ ದಿನ ಮೊದಲೇ ಪೂರ್ವಸಿದ್ಧತೆಯನ್ನು ಆರಂಭಿಸುತ್ತಿದ್ದರು. ಆ ವಿಷಯವನ್ನು ಅವರು ಪೂ. (ಸೌ.) ತಾಯಿ ಮತ್ತು ಪ.ಪೂ.ದಾದಾರವರಿಗೆ ಎಲ್ಲವನ್ನೂ ವಿವರಿಸಿ ಹೇಳುತ್ತಿದ್ದರು. ‘ಅವರು ಯಾವ ದಿನ ಎಲ್ಲಿರುವರು ಹಾಗೂ ಆ ದಿನ ಅಲ್ಲಿ ಯಾವ ಕಾರ್ಯಕ್ರಮ ಇರುವುದು ?’, ಎನ್ನುವ ವಿಷಯದಲ್ಲಿ ಅವರಿಬ್ಬರಿಗೂ ಹೇಳುತ್ತಿದ್ದರು. ಪೂ. ತಾಯಿ ಮತ್ತು ಪ.ಪೂ. ದಾದಾರವರು ಕೂಡ ಅವರಿಗೆ ನಡುನಡುವೆ ಅದನ್ನು ತೆಗೆದುಕೊಂಡೆಯಾ ? ಇದನ್ನು ತೆಗೆದುಕೊಂಡೆಯಾ ? ಎಂದು ನೆನಪಿಸುತ್ತಿದ್ದರು. ಆಗ ನಮಗೆ ಅವರಿಬ್ಬರಿಗೂ ಪ.ಪೂ. ಡಾಕ್ಟರರ ಬಗ್ಗೆ ಇರುವ ವಾತ್ಸಲ್ಯಭಾವವನ್ನು ಅನುಭವಿಸಲು ಸಿಗುತ್ತಿತ್ತು. ಪ್ರವಾಸಕ್ಕೆ ಮುಂಜಾನೆ ಬೇಗನೆ ಹೊರಡಲಿಕ್ಕಿದ್ದರೆ ಪ.ಪೂ. ಡಾಕ್ಟರರು ಅವರಿಗೆ ರಾತ್ರಿಯೇ ನಮಸ್ಕಾರ ಮಾಡುತ್ತಿದ್ದರು ಹಾಗೂ ‘ನಾನು ಮುಂಜಾನೆ ಬೇಗನೆ ಹೊರಡುತ್ತೇನೆ. ನೀವು ಮುಂಜಾನೆ ಅಷ್ಟು ಬೇಗ ಏಳುವ ಅವಶ್ಯಕತೆಯಿಲ್ಲ; ಅದಕ್ಕಾಗಿ ಈಗಲೇ ನಮಸ್ಕಾರ ಮಾಡುತ್ತಿದ್ದೇನೆ’, ಎಂದು ಹೇಳುತ್ತಿದ್ದರು. ಅವರು ಕೂಡ ಪ್ರೇಮದಿಂದ ಇವರಿಗೆ ಆಶೀರ್ವಾದ ಕೊಡುತ್ತಿದ್ದರು. ಕೆಲವೊಮ್ಮೆ ಮುಂಜಾನೆ ಅವರು ಎದ್ದಿರುತ್ತಿದ್ದರು, ಅವರು ಕೋಣೆಯ ಬಾಲ್ಕನಿಯಲ್ಲಿ ನಿಂತು ಪ.ಪೂ. ಡಾಕ್ಟರರು ವಾಹನದಲ್ಲಿ ಕುಳಿತು ಹೋಗುವವರೆಗೆ ಕೈ ಆಡಿಸುತ್ತಾ ಅವರನ್ನು ಬೀಳ್ಕೊಡುತ್ತಿದ್ದರು.

ಪ್ರವಾಸದಲ್ಲಿರುವಾಗ ಪೂ. (ಸೌ.) ತಾಯಿ ಮತ್ತು ಪ.ಪೂ.ದಾದಾ ಇವರ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಪ.ಪೂ. ಡಾಕ್ಟರರ ಪ್ರವಾಸವು ೧೫ ರಿಂದ ೨೦ ದಿನಗಳದ್ದಾಗಿದ್ದರೆ ಅವರು ಪ್ರತಿ ವಾರ ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾರವರಿಗೆ ದೂರವಾಣಿ ಕರೆ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು ಮತ್ತು ‘ಪ್ರವಾಸದಲ್ಲಿ ಎಲ್ಲೆಲ್ಲಿ ಪ್ರವಚನಗಳಾದವು ?’, ಎನ್ನುವ ವಿಷಯವನ್ನು ಅವರಿಗೆ ಹೇಳುತ್ತಿದ್ದರು. ಆಗ ಪೂ. (ಸೌ.) ತಾಯಿಯವರು ಕೂಡ ‘ಇಲ್ಲಿ ಏನೇನಾಯಿತು ?’, ಎಂಬುದನ್ನು ಅವರಿಗೆ ಹೇಳುತ್ತಿದ್ದರು. ಹೀಗೆ ೧೫-೨೦ ನಿಮಿಷಗಳ ಅವರ ಸಂಭಾಷಣೆಯು ನಡೆಯುತ್ತಿತ್ತು.

೧೧. ಪ್ರವಾಸದಿಂದ ಹಿಂದಿರುಗಿ ಬಂದನಂತರ ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾರವರ ಕೋಣೆಗೆ ಹೋಗಿ ಭೇಟಿಯಾಗುತ್ತಿದ್ದರು

ಪ.ಪೂ. ಡಾಕ್ಟರರು ಪ್ರವಾಸದಿಂದ ಬಂದ ನಂತರ ಪೂ. (ಸೌ.) ತಾಯಿ ಮತ್ತು ಪ.ಪೂ. ದಾದಾರವರನ್ನು ಭೇಟಿಯಾಗಲು ಅವರ ಕೋಣೆಗೆ ಹೋಗಿ ‘ನಾನು ಬಂದಿದ್ದೇನೆ’, ಎಂದು ಹೇಳುತ್ತಿದ್ದರು; ಅವರು ಕೂಡ ಪ.ಪೂ. ಡಾಕ್ಟರರ ದಾರಿ ಕಾಯುತ್ತಾ ಇರುತ್ತಿದ್ದರು. ಕೆಲವೊಮ್ಮೆ ಅವರು ತಮಾಷೆಯಿಂದ “ಇಂದು ಡಾಕ್ಟರು ಬರುತ್ತಾರೆ, ಎಲ್ಲರೂ ಎಲ್ಲವನ್ನೂ ವ್ಯವಸ್ಥಿತವಾಗಿ ಇಡಿ !” ಎಂದು ನಮಗೆ ಹೇಳುತ್ತಿದ್ದರು.

– ಶ್ರೀ. ದಿನೇಶ ಶಿಂದೆ, ಸನಾತನ ಆಶ್ರಮ, ರಾಮನಾಥಿ ಗೋವಾ. (೩೦.೮.೨೦೨೦)  

(ಮುಂದುವರಿಯುವುದು)