ಕೇವಲ ಬೋಧನೆ ಮಾಡುವುದಕ್ಕಿಂತ ಕಲಿಯುವ ವೃತ್ತಿ ಇಟ್ಟರೆ, ಹೆಚ್ಚು ಲಾಭವಾಗುತ್ತದೆ !
‘ಈಶ್ವರನು ಸರ್ವಜ್ಞನಿದ್ದಾನೆ’. ನಮಗೆ ಅವನೊಂದಿಗೆ ಏಕರೂಪವಾಗಬೇಕಾಗಿರುವುದರಿಂದ ನಾವು ಸತತ ಕಲಿಯುವ ಸ್ಥಿತಿಯಲ್ಲಿರುವುದು ಆವಶ್ಯಕವಿದೆ. ಯಾವುದೇ ಕ್ಷೇತ್ರದಲ್ಲಿ ಜ್ಞಾನವನ್ನು ಪಡೆಯುವುದು ಎಂದಿಗೂ ಮುಗಿಯದ ಪ್ರಕ್ರಿಯೆಯಾಗಿದೆ. ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ. ನಾವು ಎಷ್ಟು ಕಲಿತರೂ ಅದು ಕಡಿಮೆಯೇ ಇದೆ. ನಾವು ಕಲಿಯುತ್ತಿರುವಾಗ ನಾನು ಅಜ್ಞಾನಿಯಾಗಿದ್ದೇನೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಜ್ಞಾನವನ್ನು ಸಂಪಾದಿಸುವ ಪ್ರಕ್ರಿಯೆಯನ್ನು ಮಾಡಬೇಕು. ಇದರಿಂದ ‘ನಾನು’ ಎಂಬುದು ಕಡಿಮೆಯಾಗುತ್ತದೆ ಮತ್ತು ಜ್ಞಾನದಲ್ಲಿರುವ ಚೈತನ್ಯದ ಅನುಭವವಾಗುವುದು, ಹೀಗೆ ಎರಡು ಲಾಭಗಳಾಗುತ್ತವೆ. ಈ ಎರಡೂ ಲಾಭಗಳಿಂದ ಆನಂದವನ್ನು ಅನುಭವಿಸಬಹುದು. ಅದರ ಬದಲು, ಕಲಿಸುವುದರಿಂದ, ‘ನನಗೆ ಬರುತ್ತದೆ’, ಎಂಬ ಅಹಂಕಾರವು ಬೆಳೆಯುತ್ತದೆ ಮತ್ತು ಜ್ಞಾನದಲ್ಲಿನ ಚೈತನ್ಯವನ್ನು ಅನುಭವಿಸಲು ಆಗುವುದಿಲ್ಲ. ಹಾಗಾಗಿ ಕಲಿಸುವ ಪಾತ್ರದಲ್ಲಿರುವಾಗ ಹೆಚ್ಚು ಹಾನಿಯಾಗುತ್ತದೆ.– (ಪರಾತ್ಪರ ಗುರು) ಡಾ. ಆಠವಲೆ (೧೦.೯.೨೦೨೧)
ವಯಸ್ಕರಿಗೆ ಒತ್ತಾಯದಿಂದಲ್ಲ, ವಿಚಾರಿಸಿ ಆಹಾರ ಕೊಡಬೇಕು !
‘ಭಾರತೀಯ ಸಂಸ್ಕೃತಿಯಲ್ಲಿ ಪ್ರೀತಿಯಿಂದ ತಿನ್ನಿಸುವುದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ತಿನ್ನುವವನು ಸಂಕೋಚ ಪಡಬಾರದೆಂದು ಸ್ವಲ್ಪ ಮಟ್ಟಿಗೆ ಒತ್ತಾಯ ಮಾಡಲಾಗುತ್ತದೆ. ಈ ಒತ್ತಾಯವು ಯುವಕರಿಗೆ ಉಪಯುಕ್ತವಾಗಿದೆ. ವಯಸ್ಸಾದವರ ಆಹಾರವು ಅವರ ಹಸಿವು, ಜೀರ್ಣಕ್ರಿಯೆ ಮತ್ತು ಇತರ ದೈಹಿಕ ತೊಂದರೆಗಳ ಮೇಲೆ ಅವಲಂಬಿಸಿರುತ್ತದೆ. ಹಾಗಾಗಿ ಅವರಲ್ಲಿ ವಿಚಾರಿಸಿಯೇ ನೀಡಬೇಕು.– (ಪರಾತ್ಪರ ಗುರು) ಡಾ. ಆಠವಲೆ (೩.೧೧.೨೦೨೧)
ಇತರ ಸಂತರ ಮಾರ್ಗದರ್ಶನವು ತಾತ್ತ್ವಿಕವಾಗಿರುತ್ತದೆ, ಆದರೆ ಸನಾತನದ ಸಂತರ ಮಾರ್ಗದರ್ಶನವು ಕಾರ್ಯಕಾರಣಭಾವ ಮತ್ತು ಪರಿಹಾರ ನೀಡುವಂತಹದ್ದಾಗಿದೆ.
‘ಸಮಾಜದಲ್ಲಿ ಅಧ್ಯಾತ್ಮದ ಬಗ್ಗೆ ಮಾತನಾಡುವವರು ಅನೇಕರು ಇರುತ್ತಾರೆ. ಅನೇಕ ಸಂತರು ಅಧ್ಯಾತ್ಮದಲ್ಲಿ ಉನ್ನತ ಮಟ್ಟವನ್ನು ತಲುಪಿರುತ್ತಾರೆ; ಆದರೆ ಇತರರಿಗೆ ಮಾರ್ಗದರ್ಶನ ಮಾಡುವಾಗ, ಅವರು ಸೈದ್ಧಾಂತಿಕ ಭಾಗವನ್ನು ಮಾತ್ರ ಹೇಳುತ್ತಾರೆ, ಉದಾ. ಅಹಂಕಾರವನ್ನು ತ್ಯಾಗ ಮಾಡಿದರೆ ಪ್ರಪಂಚದಲ್ಲಿನ ಲಾಭ ಮತ್ತು ಹಾನಿಗಳನ್ನು ಸುಲಭವಾಗಿ ಸ್ವೀಕರಿಸಬಹುದು. ಇದರಲ್ಲಿ ಸಮಾಜಕ್ಕೆ ‘ಅಹಂನ ತ್ಯಾಗ ಮಾಡಲು ಯಾವ ರೀತಿ ಪ್ರಯತ್ನಿಸಬೇಕು ?’ ಎಂಬ ಪ್ರಶ್ನೆಗೆ ಉತ್ತರಗಳು ಸಿಗುವುದಿಲ್ಲ. ಇದರ ವಿರುದ್ಧ ಸನಾತನದ ಸಂತರ ಬರವಣಿಗೆ ಮತ್ತು ಮಾರ್ಗದರ್ಶನವು ಸಾಧನೆಯ ಮಟ್ಟದಲ್ಲಿ ನಿಖರವಾಗಿ ಏಕೆ ಮತ್ತು ಹೇಗೆ ಮಾಡಬೇಕೆಂದು ಸ್ಪಷ್ಟವಾಗಿ ವಿವರಿಸುತ್ತದೆ. ಇದು ಕಾರ್ಯಕಾರಣದೊಂದಿಗೆ ಪರಿಹಾರ ಹೇಳುವಂತಹದ್ದಾಗಿರುತ್ತದೆ. ಈ ಕಾರಣದಿಂದಾಗಿ, ಸನಾತನ ಸಂಸ್ಥೆಯ ಸಾಧಕರು ಇಂದು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳುತ್ತಿದ್ದಾರೆ.
– (ಪರಾತ್ಪರ ಗುರು) ಡಾ. ಆಠವಲೆ (೩.೧೧.೨೦೨೧)