ಕಲಿಯುಗದಲ್ಲಿ ಭಕ್ತಿಯೋಗಕ್ಕಿಂತ ಕರ್ಮಯೋಗ ಮತ್ತು ಜ್ಞಾನಯೋಗಗಳು ಹತ್ತಿರದವೆನಿಸುತ್ತವೆ; ಏಕೆಂದರೆ ಅವು ಬುದ್ಧಿಯಿಂದ ಸ್ವಲ್ಪ ಅರ್ಥವಾಗುತ್ತವೆ !
‘ಕಲಿಯುಗದಲ್ಲಿ ಎಲ್ಲವನ್ನೂ ಬುದ್ಧಿಯಿಂದ ಅಳೆದು ತೂಗಿ ನೋಡಲಾಗುತ್ತದೆ. ಪರಿಣಾಮವಾಗಿ, ಮನುಷ್ಯನ ಶ್ರದ್ಧೆ ಕಡಿಮೆಯಾಗಿದೆ. ಆದ್ದರಿಂದ, ಸಾಧನೆಯಲ್ಲಿ ‘ಶ್ರದ್ಧೆಯೇ ಮೂಲಭೂತ ಅಂಶವಾಗಿರುವ ಭಕ್ತಿಯೋಗಕ್ಕನುಸಾರ ಸಾಧನೆ ಮಾಡುವುದು ಕಷ್ಟಕರವಾಗುತ್ತದೆ. ಅದಕ್ಕೆ ಹೋಲಿಸಿದರೆ, ಕರ್ಮಯೋಗ ಅಥವಾ ಜ್ಞಾನಯೋಗವು ಬುದ್ಧಿಯಿಂದ ಅರ್ಥವಾಗುವುದರಿಂದ, ಈ ಮಾರ್ಗಗಳು ಇಂದಿನ ಸಾಮಾನ್ಯ ಸಾಧಕರಿಗೆ ಸುಲಭವೆಂದು ಅನಿಸುತ್ತವೆ.
– (ಪರಾತ್ಪರ ಗುರು) ಡಾ. ಆಠವಲೆ (೩.೧೧.೨೦೨೧)