ಓದಿರಿ ಹೊಸ ಲೇಖನಮಾಲೆ : ‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’
ಪರಾತ್ಪರ ಗುರು ಡಾ. ಆಠವಲೆ ಇವರ ಸಂಕಲ್ಪದಂತೆ ಕೆಲವು ವರ್ಷಗಳಲ್ಲೇ ಈಶ್ವರೀ ರಾಜ್ಯ ಸ್ಥಾಪನೆಯಾಗಲಿದೆ. ಬಹಳಷ್ಟು ಜನರ ಮನಸ್ಸಿನಲ್ಲಿ ‘ಈ ಹಿಂದೂ ರಾಷ್ಟ್ರವನ್ನು ಮುನ್ನಡೆಸುವವರು ಯಾರು ?’ ಎಂಬ ಪ್ರಶ್ನೆ ಬರುತ್ತದೆ. ಪ್ರಸ್ತುತ ಮಾನವರ ಸಾತ್ತ್ವಿಕತೆಯ ಪ್ರಮಾಣವು ಅತ್ಯಲ್ಪ ಆಗಿರುವುದರಿಂದ ಅವರಲ್ಲಿ ಹಿಂದೂ ರಾಷ್ಟ್ರವನ್ನು ನಡೆಸುವ ಕ್ಷಮತೆ ಇಲ್ಲ ವೆಂದು ಈಶ್ವರನು ಉಚ್ಚ ಲೋಕದಿಂದ ಕೆಲವು ಸಾವಿರ ದೈವಿ ಬಾಲಕರನ್ನು ಪೃಥ್ವಿಯ ಮೇಲೆ ಜನ್ಮ ಪಡೆಯಲು ಕಳುಹಿಸಿದ್ದಾರೆ. ಈ ದೈವಿ ಬಾಲಕರು ಜನ್ಮದಿಂದಲೇ ಸಾತ್ತ್ವಿಕರಿರುವುದರಿಂದ ಅವರಲ್ಲಿ ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆಯಿದೆ. ಈ ದೈವಿ ಬಾಲಕರ ಕಲಿಯುವ ವೃತ್ತಿ, ವೈಚಾರಿಕ ಪ್ರೌಢಿಮೆ, ಅವರಲ್ಲಿರುವ ಉತ್ತಮ ಶಿಷ್ಯನ ಅನೇಕ ಗುಣಗಳಿರುವುದು, ಅವರು ಶ್ರೀ ಗುರುಗಳ ಆಜ್ಞೆಯನ್ನು ತಕ್ಷಣ ಪಾಲಿಸುವುದು, ಅವರಿಗೆ ಬರುವ ಅನುಭೂತಿಗಳು ಮತ್ತು ಅವರಲ್ಲಿರುವ ಸೂಕ್ಷ್ಮವನ್ನು ಅರಿಯುವ ಕ್ಷಮತೆ ಇವೆಲ್ಲವುಗಳಿಂದ ‘ಈ ದೈವಿ ಬಾಲಕರೇ ಮುಂದೆ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲರು’ ಎಂಬುದು ಗಮನಕ್ಕೆ ಬರುತ್ತದೆ. ಅವರ ಜೊತೆಯಲ್ಲಿರುವಾಗ, ಅವರನ್ನು ನೋಡಿದಾಗ ಅಥವಾ ಅವರ ಮಾತುಗಳನ್ನು ಆಲಿಸುವಾಗ ಕೇಳುವವರ ಭಾವಜಾಗೃತಿಯಾಗುತ್ತದೆ. ಅವರಿಂದ ಆನಂದ ಮತ್ತು ಚೈತನ್ಯ ಪ್ರಕ್ಷೇಪಣೆಯಾಗುತ್ತದೆ. ಎಲ್ಲ ವಾಚಕರಿಗೆ ಇದರಿಂದ ಕಲಿಯಲು ಸಿಗಬೇಕೆಂಬ ದೃಷ್ಟಿಯಿಂದ ಪ್ರತಿವಾರ ದೈವಿ ಬಾಲಕರ ಲೇಖನಮಾಲೆಯನ್ನು ಪ್ರಾರಂಭಿಸುತ್ತಿದ್ದೇವೆ.
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/54047.html |
ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು ಕೇವಲ ಪಂಡಿತರಲ್ಲ ಅವರು ‘ಪ್ರಬುದ್ಧ’ ಸಾಧಕರಾಗಿದ್ದಾರೆಸನಾತನ ಸಂಸ್ಥೆಯಲ್ಲಿ ಕೆಲವು ದೈವಿ ಬಾಲಕರಿದ್ದಾರೆ. ಅವರ ಮಾತುಗಳು ಆಧ್ಯಾತ್ಮಿಕ ಸ್ತರದಲ್ಲಿರುತ್ತದೆ. ಆಧ್ಯಾತ್ಮಿಕ ಸ್ತರದಲ್ಲಿ ಮಾತನಾಡುವಾಗ ಅವರ ಮಾತುಕತೆಯಲ್ಲಿ ‘ಸಗುಣ-ನಿರ್ಗುಣ’ ಆನಂದ, ಚೈತನ್ಯ, ಶಾಂತಿ ಮುಂತಾದ ಶಬ್ದಗಳು ಇರುತ್ತದೆ, ಇಂತಹ ಶಬ್ದಗಳನ್ನು ಮಾತನಾಡುವ ಮೊದಲು ಅವರಿಗೆ ಮಧ್ಯದಲ್ಲಿ ನಿಲ್ಲಿಸಿ ವಿಚಾರ ಮಾಡಬೇಕಾಗಿರುವುದಿಲ್ಲ. ಅವರ ಮಾತುಗಳು ನಿರರ್ಗಳವಾಗಿರುತ್ತದೆ. ‘ಅದನ್ನು ಕೇಳುತ್ತಲೇ ಇರಬೇಕು’ ಎಂದು ಅನಿಸುತ್ತದೆ. ಸಾಮಾನ್ಯ ವ್ಯಕ್ತಿಯ ದೃಷ್ಟಿಕೋನದಿಂದ ಯಾರಾದರೊಬ್ಬರು ಮಾತನಾಡುವಾಗ ಇಂತಹ ಶಬ್ದಗಳು ಬರಲು ಅವರಿಗೆ ನಿಯಮಿತವಾಗಿ ಈ ವಿಷಯದೊಂದಿಗೆ ಸಂಬಂಧವಿರುವ ಅವಶ್ಯಕತೆಯಿರುತ್ತದೆ. ಆ ವಿಷಯಗಳ ಅಳವಾದ ಅಭ್ಯಾಸದಿಂದ ಆ ವಿಷಯವು ಬುದ್ಧಿಗೆ ತಿಳಿಯುತ್ತದೆ ಮತ್ತು ಮನವರಿಕೆಯಾಗುತ್ತದೆ. ಅದರ ನಂತರ ಪಾಂಡಿತ್ಯವು ಬಂದು ಆ ರೀತಿ ಮಾತನಾಡಲು ಆಗುತ್ತದೆ. ಈ ದೈವೀ ಬಾಲಕರು ಕೇವಲ ೮ ರಿಂದ ೧೫ ರ ವಯೋಮಾನದವರಾಗಿದ್ದಾರೆ. ಅವರು ಗ್ರಂಥಗಳ ಗಾಢ ಅಭ್ಯಾಸ ಬಿಡಿ, ಅದನ್ನು ಓದಿಯೇ ಇಲ್ಲ. ಅದರಿಂದ ಅವರ ಈ ಪರಿಭಾಷೆ ಅವರ ಹಿಂದಿನ ಜನ್ಮದ ಸಾಧನೆಯಿಂದ ಅವರಲ್ಲಿ ನಿರ್ಮಾಣವಾಗಿರುವ ಪ್ರೌಢಿಮೆಯನ್ನು ತೋರಿಸುತ್ತದೆ. – ಪರಾತ್ಪರ ಗುರು ಡಾ. ಆಠವಲೆ (೨೮.೧೦.೨೦೨೧) |
ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು. ತಾಯಿ-ತಂದೆಯವರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ – ತಂದೆಯರ ಸಾಧನೆಯಾಗಿ ಅವರೂ ಜನ್ಮ- ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು ! – ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧) |
ಶೇ. . ೬೧ ಮಟ್ಟವಿರುವ ದೈವೀ ಬಾಲಕಿ ಕು. ಅಪಾಲಾ ಔಂಧಕರ (೧೪ ವರ್ಷ) ಇವಳ ನಿರೀಕ್ಷಣೆ ಕ್ಷಮತೆ ಮತ್ತು ಅವಳ ಪ್ರತಿಯೊಂದು ವಿಷಯದ ಕಡೆಗೆ ಕಲಿಯುವ ದೃಷ್ಟಿಯಿಂದ ನೋಡುವುದು
೧. ತಾನು ಮಾಡಿದ ನೃತ್ಯದ ಧ್ವನಿಚಿತ್ರಮುದ್ರಿಕೆಯನ್ನು (ಸಿಡಿ) ನೋಡುವಾಗ ವಿಚಾರಗಳಲ್ಲಿ ಆಗಿರುವ ಪರಿವರ್ತನೆ ಮತ್ತು ಅದರಿಂದ ಅವಳಿಗೆ ಕಲಿಯಲು ಸಿಕ್ಕಿದ ಅಂಶಗಳು
೧ ಅ. ನನ್ನ ನೃತ್ಯದ ಧ್ವನಿಚಿತ್ರಮುದ್ರಿಕೆಯನ್ನು ನೋಡುವಾಗ ‘ನಾನು ನೃತ್ಯವನ್ನು ಚೆನ್ನಾಗಿ ಮಾಡಿದ್ದೇನೆ’, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬರುವುದು : ೨೦೧೮ ಮತ್ತು ೨೦೧೯ ರಲ್ಲಿ ಆಶ್ರಮದಲ್ಲಿ ನೆರವೇರಿದ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ಸಮಯದಲ್ಲಿ ಮತ್ತು ಇತರ ಕೆಲವು ಸಮಯದಲ್ಲಿ ಧ್ವನಿಚಿತ್ರಮುದ್ರಿಕೆಯ ಮಾಧ್ಯಮದಿಂದ ನನ್ನ ನೃತ್ಯವನ್ನು ತೋರಿಸಲಾಗುತ್ತಿತ್ತು. ಆ ಧ್ವನಿಚಿತ್ರಮುದ್ರಿಕೆಯನ್ನು ನೋಡುವಾಗ ನನ್ನ ಮನಸ್ಸಿನಲ್ಲಿ ‘ಸಾಧಕರಿಗೆ ನನ್ನ ನೃತ್ಯವನ್ನು ತೋರಿಸುತ್ತಿದ್ದಾರೆ. ನಾನು ನೃತ್ಯವನ್ನು ಚೆನ್ನಾಗಿ ಮಾಡಿದ್ದೇನೆ’, ಎಂಬ ವಿಚಾರಗಳು ಬರುತ್ತಿದ್ದವು.
೧ ಆ. ‘ಎಲ್ಲವೂ ದೇವರ ಕೃಪೆಯಿಂದ ಮತ್ತು ವ್ಯಷ್ಟಿ ಸಾಧನೆಯ ಒಳ್ಳೆಯ ಪ್ರಯತ್ನಗಳಿಂದ ಆಗುತ್ತದೆ’, ಎಂದು ಅರಿವಾದಾಗ ನಾನು ಮಾಡಿದ ನೃತ್ಯದ ಧ್ವನಿಚಿತ್ರಮುದ್ರಿಕೆಯನ್ನು ನೋಡುವಾಗ ‘ಬೇರೆ ಸಾಧಕಿಯು ಮಾಡಿದ ನೃತ್ಯವನ್ನು ನೋಡುತ್ತಿದ್ದೇನೆ’, ಎಂದು ಅನಿಸುವುದು : ೨೦೨೧ ರಲ್ಲಿ ರಾಮನಾಥಿ ಆಶ್ರಮದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ನಾನು ‘ಕಾಳಿಕಾಸ್ತುತಿ (ಐಗಿರಿ ನಂದಿನಿ)’ಯ ಆಧಾರದಲ್ಲಿ ಮಾಡಿದ ನೃತ್ಯದ ಧ್ವನಿಚಿತ್ರಮುದ್ರಿಕೆಯನ್ನು ತೋರಿಸಲಾಯಿತು. ಆಗ ನನಗೆ `ಅದೆಲ್ಲ ದೇವರ ಕೃಪೆಯಿಂದ ಮತ್ತು ವ್ಯಷ್ಟಿ ಸಾಧನೆಯ ಒಳ್ಳೆಯ ಪ್ರಯತ್ನಗಳಿಂದ ಆಗಿದೆ’, ಎಂದು ಅರಿವಾಯಿತು. ನನ್ನ ನೃತ್ಯವನ್ನು ನೋಡುವಾಗ ನನಗೆ ‘ಅಲ್ಲಿ ನಾನಿರದೇ ಬೇರೆ ಸಾಧಕಿ ನೃತ್ಯವನ್ನು ಮಾಡುತ್ತಿದ್ದಾಳೆ’, ಮತ್ತು ನನ್ನ ಮನಸ್ಸಿನಲ್ಲಿ `ಸಾಕ್ಷಾತ್ ಶ್ರೀ ದುರ್ಗಾದೇವಿಯೇ ಅಲ್ಲಿ ಅವತರಿಸಿದ್ದಾಳೆ ಎಂದು ಅನಿಸಿತು, ಹಾಗಾದರೆ ಅಲ್ಲಿ ನಾನು ನೃತ್ಯವನ್ನು ಮಾಡಲು ಹೇಗೆ ಸಾಧ್ಯ ?’, ಎಂಬ ವಿಚಾರ ಬಂದಿತು. ದೇವಿ ಮತ್ತು ಗುರುದೇವರು (ಪರಾತ್ಪರ ಗುರು ಡಾ. ಆಠವಲೆಯವರು) ನನ್ನಿಂದ ನೃತ್ಯವನ್ನು ಮಾಡಿಸಿಕೊಂಡರು’, ಎಂದು ನನಗೆ ಅರಿವಾಯಿತು.
೧ ಇ. ‘ಪ್ರತಿಯೊಂದು ಕೃತಿಯು ದೇವರಿಂದಲೇ ಆಗುತ್ತದೆ’, ಎಂಬ ಅರಿವಿದ್ದರೆ ಅಹಂ ಹೆಚ್ಚಾಗದೇ ನಿಜವಾದ ಆನಂದ ಸಿಗುವುದು : ‘ನಮ್ಮಲ್ಲಿ `ನಾನು, ನನ್ನದು’ ಎಂಬುದು ಇದ್ದರೆ ನಾವು ಯಾವುದೇ ಆನಂದವನ್ನು ಪಡೆಯಲಾರೆವು. `ಪ್ರತಿಯೊಂದು ಕೃತಿಯು ದೇವರಿಂದಲೇ ಆಗುತ್ತದೆ’, ಎಂಬ ಅರಿವು ನಮ್ಮ ಮನಸ್ಸಿನಲ್ಲಿದ್ದರೆ ಅಹಂ ಹೆಚ್ಚಾಗುವುದಿಲ್ಲ ಮತ್ತು ನಿಜವಾದ ಆನಂದ ಸಿಗುತ್ತದೆ’, ಎಂಬುದನ್ನು ಗುರುದೇವರು ನನಗೆ ಈ ಪ್ರಸಂಗಗಳ ಮಾಧ್ಯಮದಿಂದ ಕಲಿಸಿದರು.
೨. ನನ್ನ ಪ್ರಶಂಸೆಯಾದ ಮೇಲೆ ಮನಸ್ಸಿನಲ್ಲಾದ ವಿಚಾರಪ್ರಕ್ರಿಯೆ ಮತ್ತು ಕಲಿಯಲು ಸಿಕ್ಕಿದ ಅಂಶಗಳು
೨ ಅ. ಸಾಧಕರು ನೃತ್ಯದ ಪ್ರಶಂಸೆಯನ್ನು ಮಾಡಿದಾಗ ಮನಸ್ಸಿಗೆ ಪ್ರಶ್ನೆಯನ್ನು ಕೇಳಿ ಕಲಿಯುವ ಸ್ಥಿತಿಯಲ್ಲಿರಬೇಕು ಎಂದು ಅರಿವಾಗುವುದು : ನಾನು ಮಾಡಿದ ನೃತ್ಯದ ಧ್ವನಿಚಿತ್ರಮುದ್ರಿಕೆಯನ್ನು ನೋಡಿದ ನಂತರ ಅನೇಕ ಸಾಧಕರು ನನ್ನನ್ನು ಭೇಟಿಯಾದಾಗ ‘ನೀನು ನೃತ್ಯವನ್ನು ತುಂಬಾ ಚೆನ್ನಾಗಿ ಮಾಡಿರುವೆ, ಭಾವಪೂರ್ಣವಾಗಿ ಮಾಡಿರುವೆ. ಸಾಕ್ಷಾತ್ ಶ್ರೀ ದುರ್ಗಾದೇವಿಯೇ ನೃತ್ಯವನ್ನು ಮಾಡುತ್ತಿದ್ದಾಳೆ, ಎಂದು ಅನಿಸುತ್ತಿತ್ತು’, ಎಂದು ನನ್ನ ನೃತ್ಯದ ಪ್ರಶಂಸೆಯನ್ನು ಮಾಡುತ್ತಿದ್ದರು. ಆಗ ನಾನು ನನಗೇ ಮುಂದಿನಂತಹ ಪ್ರಶ್ನೆಗಳನ್ನು ಕೇಳತೊಡಗಿದೆ `ಅಪಾಲಾ, ನೀನು ಕಲಿಯುವ ಸ್ಥಿತಿಯಲ್ಲಿರುವೆಯಲ್ಲ ? ಗುರುದೇವರಿಗೆ (ಪರಾತ್ಪರ ಗುರು ಡಾಕ್ಟರರಿಗೆ) ಅಪೇಕ್ಷಿತ ವರ್ತನೆ ನಿನ್ನಿಂದ ಆಗುತ್ತದೆಯಲ್ಲ ?’ ನಂತರ ಇಂತಹ ಸಮಯದಲ್ಲಿ ತಕ್ಷಣ ಜಾಗರೂಕಳಾಗುತ್ತಿದ್ದೆ, ಆಗ ನನಗೆ ಅದು ನನ್ನ ಪ್ರಶಂಸೆ ಅನಿಸುತ್ತಿರಲಿಲ್ಲ.
೨ ಆ. ‘ಪ್ರಶಂಸೆಯು ಕೇವಲ ಭಗವಂತನ ಗುಣಗಳದ್ದೇ ಆಗುತ್ತದೆ’, ಎಂಬ ವಿಚಾರ ಬಂದು ಎಲ್ಲವನ್ನು ದೇವರ ಚರಣಗಳಲ್ಲಿ ಅರ್ಪಿಸುವುದು : ಅನಂತರ ನಾನು ಗುರುದೇವರಿಗೆ ಸೂಕ್ಷ್ಮದಿಂದ, ‘ಗುರುದೇವಾ, ನಾನು ಕಲಿಯುವ ಸ್ಥಿತಿಯಲ್ಲಿದ್ದರೆ ಮಾತ್ರ, ನೀವು ನನಗೆ ಖಂಡಿತವಾಗಿ ಏನಾದರೂ ಕಲಿಸುತ್ತೀರಿ ಮತ್ತು ನಾನು ನನ್ನ ಪ್ರಶಂಸೆಯಲ್ಲಿ ಸಿಲುಕಿದರೆ, ನೀವು ನನಗೆ ಏನೂ ಹೇಳುವುದಿಲ್ಲವಲ್ಲ’, ಎಂದು ಹೇಳಿದೆನು. ಆಗ ನನ್ನ ಮನಸ್ಸಿನಲ್ಲಿ `ಪ್ರಶಂಸೆಯು ಕೇವಲ ಭಗವಂತನ ಗುಣಗಳದ್ದೇ ಆಗುತ್ತದೆ. ಭಗವಂತನ ಕೃಪೆಯಿಂದಲೇ ಅದರಲ್ಲಿನ ಒಂದು ಗುಣದ ಪ್ರಶಂಸೆಯಾದರೆ, ಅದರಲ್ಲಿ ನನ್ನದೇನೂ ಇಲ್ಲ’, ಎಂಬ ವಿಚಾರ ಬಂದಿತು. ‘ಭಗವಂತನೇ ನನಗೆ ಇದನ್ನು ಸೂಚಿಸಿದನು’, ಎಂದು ಅರಿವಾಗಿ ನಾನು ಎಲ್ಲವನ್ನು ದೇವರ ಚರಣಗಳಲ್ಲಿಯೇ ಅರ್ಪಣೆ ಮಾಡಿದೆನು.
೩. ಯಾವುದೇ ಒಳ್ಳೆಯ ಕೃತಿಯನ್ನು ಮಾಡಿದಾಗ ಸಾಧಕರಿಗೆ `ತನ್ನ ಪ್ರಶಂಸೆಯಾಗಬೇಕು’ ಎಂದು ಅನಿಸುವುದು, ಆದರೆ ಪರಾತ್ಪರ ಗುರುದೇವರು ಯಾವಾಗಲೂ ಕಲಿಯುವ ಸ್ಥಿತಿಯಲ್ಲಿರುತ್ತಾರೆ ಮತ್ತು ಅದನ್ನು ನೋಡಿ ನಾವು ಸತತವಾಗಿ ಕಲಿಯುವ ಸ್ಥಿತಿಯಲ್ಲಿದ್ದು ಅವರ ಆದರ್ಶವನ್ನು ತೆಗೆದುಕೊಳ್ಳಬೇಕು’, ಎಂಬುದು ಕಲಿಯಲು ಸಿಗುವುದು
ನಮ್ಮ ಗುರುದೇವರು ಸಾಕ್ಷಾತ್ ಭಗವಂತರಾಗಿದ್ದರೂ ನಮ್ಮಂತಹ ಚಿಕ್ಕ ಜೀವಗಳಿಂದ ಕಲಿಯುತ್ತಾರೆ, ಉದಾ. ಸಾಧಕನು ಯಾವುದಾದರೊಂದು ಅನುಭೂತಿಯನ್ನು ಹೇಳಿದರೆ ಅಥವಾ ವ್ಯಷ್ಟಿ ಸಾಧನೆಯ ಪ್ರಯತ್ನಗಳ ಬಗ್ಗೆ ಹೇಳಿದರೆ, ಅವರು ತಕ್ಷಣ, “ಅರೆ ವಾ, ಇಂದು ನನಗೆ ನಿಮ್ಮಿಂದ ಇದು ಕಲಿಯಲು ಸಿಕ್ಕಿತು !’’ ಎಂದು ಹೇಳುತ್ತಾರೆ. `ನಾವು ಯಾವುದಾದರೊಂದು ಒಳ್ಳೆಯ ಕೃತಿಯನ್ನು ಮಾಡಿದರೆ ನಮಗೆ `ನಮ್ಮ ಪ್ರಶಂಸೆಯಾಗಬೇಕು’, ಎಂದು ಅನಿಸುತ್ತದೆ; ಆದರೆ ಪರಾತ್ಪರ ಗುರುದೇವರು ಕಲಿಯುವ ಸ್ಥಿತಿಯಲ್ಲಿರುತ್ತಾರೆ’, ಎಂದೆನಿಸಿ ನಾನೂ ಸತತವಾಗಿ ಕಲಿಯುವ ಸ್ಥಿತಿಯಲ್ಲಿದ್ದು ಅವರ ಆದರ್ಶವನ್ನು ಇಡಬೇಕು’, ಎಂಬುದು ನನಗೆ ಕಲಿಯಲು ಸಿಕ್ಕಿತು.’
೪. ‘ಕಲಿಯುವುದರಲ್ಲಿಯೇ ನಿಜವಾದ ಆನಂದವಿದೆ’, ಎಂಬ ಭಾವವಿರುವ ಮತ್ತು ‘ತನ್ನಲ್ಲಿನ ಪ್ರೇಮಭಾವವನ್ನು ಹೆಚ್ಚಿಸಿ ಇತರರಿಗೆ ಆನಂದ ಕೊಡುವುದು ದೇವರಿಗೆ ಅಪೇಕ್ಷಿತವಿದೆ’, ಎಂಬ ಅರಿವಿರುವ ಕು. ಅಪಾಲಾ !
ಒಮ್ಮೆ ಗುರುದೇವರ ಭೇಟಿಯಲ್ಲಿ ಓರ್ವ ಬಾಲಸಾಧಕಿ, “ನನಗೆ ಇತರರೊಂದಿಗೆ ಮಾತನಾಡಿದರೆ ಆನಂದ ಸಿಗುತ್ತದೆ,’’ ಎಂದು ಹೇಳಿದಳು. ಆಗ ಗುರುದೇವರು ನನಗೆ, “ನಿನ್ನ ಬಾಲಸತ್ಸಂಗದಲ್ಲಿನ ದೈವೀ ಬಾಲಕರಿಗೆ ‘ಕೇವಲ ನಿನ್ನ ಸತ್ಸಂಗದಲ್ಲಿ ಮಾತ್ರವಲ್ಲ ಇತರರಿಂದಲೂ ಆನಂದ ಸಿಗುತ್ತದೆ’, ಅದು ಹೇಗೆ ?’’ ಎಂದು ಕೇಳಿದರು. ಆಗ ಗುರುದೇವರ ಕೃಪೆಯಿಂದಲೇ ನನಗೆ ಉತ್ತರವನ್ನು ಕೊಡಲು ಸಾಧ್ಯವಾಯಿತು, “ಪ.ಪೂ. ಗುರುದೇವಾ, ನಮಗೆ ಇತರರಿಂದ ಹೆಚ್ಚೆಚ್ಚು ಕಲಿಯಲು ಸಿಗುತ್ತದೆ, ಆದುದರಿಂದ ನಮಗೆ ಹೆಚ್ಚು ಆನಂದ ಸಿಗುತ್ತದೆ.’’ ಆಗ ಗುರುದೇವರು, ‘ತುಂಬಾ ಒಳ್ಳೆಯ ಉತ್ತರವಾಗಿದೆ !’’ ಎಂದು ಹೇಳಿದರು. ಆಗ ನನಗೆ ಕೃತಜ್ಞತೆ ಅನಿಸಿತು ಮತ್ತು ‘ಸಾಕ್ಷಾತ್ ಭಗವಂತಸ್ವರೂಪ ಗುರುದೇವರು ನನ್ನ ಅಹಂನ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ’, ಎಂದು ಎನಿಸಿತು. `ದೇವರಿಗೆ ನಾನು ಪ್ರೇಮಭಾವವನ್ನು ಹೆಚ್ಚಿಸುವುದು ಮತ್ತು ಇತರರಿಗೆ ಆನಂದವನ್ನು ಕೊಡುವುದು ಅಪೇಕ್ಷಿತವಿದೆ’, ಎಂಬುದು ನನಗೆ ಕಲಿಯಲು ಸಿಕ್ಕಿತು. (‘ಕು. ಅಪಾಲಾ ಇವಳು ಬಾಲಸಾಧಕರ ವ್ಯಷ್ಟಿ ಸಾಧನೆಯ ವರದಿಯನ್ನು ತೆಗೆದುಕೊಳ್ಳುತ್ತಾಳೆ.’ – ಸಂಕಲನಕಾರರು)
– ಕು. ಅಪಾಲಾ ಔಂಧಕರ (ಆಧ್ಯಾತ್ಮಿಕ ಮಟ್ಟ ಶೇ. ೬೧), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೧೦.೨೦೨೧)
ಕು. ಅಪಾಲಾಳ ಸೂಕ್ಷ್ಮದ ವಿಷಯ ತಿಳಿದುಕೊಳ್ಳುವ ಕ್ಷಮತೆ
ಸತ್ಸಂಗದಲ್ಲಿ ಸೂಕ್ಷ್ಮದಿಂದ ಸಾತ್ತ್ವಿಕ ಪಿತೃಗಳು (ಪೂರ್ವಜರು) ಬಂದಿದ್ದಾರೆ ಮತ್ತು ಅವರಿಗೆ ಗತಿ ಸಿಕ್ಕಿರುವುದು ಅರಿವಾಗುವುದು : `ಒಮ್ಮೆ ನಮ್ಮ ಸತ್ಸಂಗ ನಡೆಯುತ್ತಿರುವಾಗ ಸಂತರು ಸಾಧಕರಿಗೆ, “ಸೂಕ್ಷ್ಮದಿಂದ ಯಾವುದಾದರು ಜೀವಗಳು ಅಥವಾ ವ್ಯಕ್ತಿಗಳು ಇಲ್ಲಿ ಬಂದಿರುವುದು ಅರಿವಾಗುತ್ತದೆಯೇ ? ಯಾರು ಬಂದಿರುವುದು ಅರಿವಾಗುತ್ತದೆ ? ಇದರ ಸೂಕ್ಷ್ಮ ಪರೀಕ್ಷಣೆಯನ್ನು ಮಾಡಿರಿ ಮತ್ತು ನಂತರ ಹೇಳಿರಿ,’’ ಎಂದು ಹೇಳಿದರು. ಆ ಸಮಯದಲ್ಲಿ ಪರೀಕ್ಷಣೆ ಮಾಡಿದ ನಂತರ ನನಗೆ ಸತ್ಸಂಗದ ಸ್ಥಳದಲ್ಲಿ ಸೂಕ್ಷ್ಮದಿಂದ `ಸಾತ್ತ್ವಿಕ ಪಿತೃಗಳು (ಪೂರ್ವಜರು) ಮತ್ತು ಸತ್ಸಂಗದಲ್ಲಿ ಉಪಸ್ಥಿತರಿದ್ದ ಓರ್ವ ಸಾಧಕರ ಪೂರ್ವಜರು ಕಾಣಿಸಿದರು. `ಪರಾತ್ಪರ ಗುರುದೇವರ ಚೈತನ್ಯದಿಂದ ಆ ಎಲ್ಲ ಪೂರ್ವಜರು ಪ್ರಸನ್ನ ಮತ್ತು ಧನ್ಯರಾಗಿದ್ದಾರೆ ಹಾಗೂ ಆ ಪೂರ್ವಜರಿಗೆ ಒಳ್ಳೆಯ ಗತಿ ಸಿಕ್ಕಿದೆ’, ಎಂದು ನನಗೆ ಅರಿವಾಯಿತು. ಆ ಸಮಯದಲ್ಲಿ ನನಗೆ `ಅಲ್ಲಿ ಒಂದು ಬೇರೆಯೇ ದಿವ್ಯ ಹಳದಿ ಪ್ರಕಾಶ ಬಿದ್ದಿರುವುದು ಸೂಕ್ಷ್ಮದಲ್ಲಿ ಕಾಣಿಸಿತು.’ – ಕು. ಅಪಾಲಾ ಔಂಧಕರ (೨೪.೧೦.೨೦೨೧)
ಪ್ರಾರ್ಥನೆ ಮತ್ತು ಕೃತಜ್ಞತೆ
‘ಹೇ ಗುರುದೇವಾ, ನೀವು ನಮಗೆ ಏನನ್ನು ಕಲಿಸುತ್ತೀರಿ, ಅದರಂತೆ ನಮ್ಮಿಂದ ಕೃತಿಯ ಸ್ತರದಲ್ಲಿ ಪ್ರಯತ್ನಗಳಾಗಲಿ, ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆ. ತಾವು ನೀಡಿದ ಅಮೂಲ್ಯ ಬೋಧನೆಗಾಗಿ ತಮ್ಮ ಕೋಮಲ ಚರಣಗಳಲ್ಲಿ ಈ ದೇಹವನ್ನು ಸಮರ್ಪಿಸಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.’ – ಕು. ಅಪಾಲಾ ಔಂಧಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೪.೧೦.೨೦೨೧)
ಹಿಂದೂ ರಾಷ್ಟ್ರಕ್ಕಾಗಿ ತೇಜಸ್ವಿ ಪೀಳಿಗೆ ಸಿದ್ಧವಾಗಲು ಆದರ್ಶ ಗುರುಕುಲವನ್ನು ಸ್ಥಾಪಿಸುವ ಸಿದ್ಧತೆಯನ್ನು ಮಾಡುವ ದಾರ್ಶನಿಕ ಪರಾತ್ಪರ ಗುರು ಡಾ. ಆಠವಲೆ !‘ಕಳೆದ ಕೆಲವು ವರ್ಷಗಳಿಂದ `ಒಂದು ಆದರ್ಶ ಗುರುಕುಲವನ್ನು ಪ್ರಾರಂಭಿಸಬೇಕು’, ಎಂದು ನನಗೆ ಅನಿಸುತ್ತಿತ್ತು. ಎಪ್ರಿಲ್ ೨೦೨೦ ರಲ್ಲಿ ಈ ವಿಷಯದ ಬಗ್ಗೆ ಚಿಂತನೆಯನ್ನು ಮಾಡಿ ‘ವೈದಿಕ ಉಪಾಸನಾಪೀಠ’ ಇವರ ವತಿಯಿಂದ ನಡೆಸುತ್ತಿರುವ ಗುರುಕುಲವು ಹೇಗಿರಬೇಕು ?’, ಈ ವಿಷಯದ ಲೇಖನಮಾಲಿಕೆಯಲ್ಲಿನ ೧೫ ಭಾಗಗಳನ್ನು ನಾನು ಧರ್ಮಪ್ರಸಾರದ ಉದ್ದೇಶದಿಂದ ಸಿದ್ಧಪಡಿಸಿದ `ಜಾಗೃತ ಭವ’ ಎಂಬ ಹೆಸರಿನ ವಾಟ್ಸಪ್‍ನಲ್ಲಿ ಪ್ರಸಾರ ಮಾಡಿದ್ದೆನು. ಕಳೆದ ಆರು ತಿಂಗಳುಗಳಿಂದ ನನ್ನ ಮನಸ್ಸಿನಲ್ಲಿ `ಒಂದು ವೇಳೆ `ಕೊರೊನಾ’ದ ಅಲೆ ಇಲ್ಲವಾಗಿದ್ದರೆ, ನಾನು ತಕ್ಷಣ ಗುರುಕುಲವನ್ನು ಸ್ಥಾಪಿಸುತ್ತಿದ್ದೆನು’, ಎಂಬ ವಿಚಾರವು ಪುನಃ ಪುನಃ ಬರುತ್ತಿತ್ತು. ೧. ಪರಾತ್ಪರ ಗುರು ಡಾ. ಆಠವಲೆಯವರು ದೈವೀ ಬಾಲಕರಿಗಾಗಿ ಸಿದ್ಧಪಡಿಸುತ್ತಿರುವ ದೈವೀ ಗುರುಕುಲವನ್ನು ನೋಡಿ ‘ನನ್ನ ಕನಸು ನನಸಾಗುತ್ತಿದೆ’, ಎಂದು ಅನಿಸುವುದುರಾಮನಾಥಿ ಆಶ್ರಮದಲ್ಲಿ ಕಳೆದ ಕೆಲವು ದಿನಗಳಿಂದ ದೈವೀ ಬಾಲಕರ ಸತ್ಸಂಗ ನಡೆಯುತ್ತಿದೆ. ನನಗೆ ಅದರಲ್ಲಿ ಭಾಗವಹಿಸುವ ಸೌಭಾಗ್ಯವು ಸಿಕ್ಕಿತು. ಆಶ್ಚರ್ಯದ ವಿಷಯವೆಂದರೆ, ‘ನಾನು ಹೇಗೆ ಗುರುಕುಲದ ಕಲ್ಪನೆಯನ್ನು ಮಾಡಿದ್ದೆಯೋ, ಹಾಗೆಯೇ ದೈವೀ ಗುರುಕುಲವನ್ನು ಪ.ಪೂ. ಗುರುದೇವರು ದೈವೀ ಬಾಲಕರಿಗಾಗಿ ಸಿದ್ಧಪಡಿಸುತ್ತಿರುವುದು ನನ್ನ ಗಮನಕ್ಕೆ ಬಂದಿತು.’ ಇದೆಲ್ಲವೂ ಪ್ರತ್ಯಕ್ಷ ಘಟಿಸುತ್ತಿರುವುದನ್ನು ನೋಡಿ ನನಗೆ `ನನ್ನ ಕನಸು ನನಸಾಗುತ್ತಿದೆ’, ಎಂದು ಅನಿಸಿತು. ‘ಗುರುಗಳು ಶಿಷ್ಯನ ಎಲ್ಲ ಇಚ್ಛೆಗಳನ್ನು ಪೂರ್ತಿ ಮಾಡುತ್ತಾರೆ’, ಎಂಬ ಅರಿವು ನನಗೆ ಬರುತ್ತಿದೆ. ೨. ನಾನು ಸಮಾಜದಲ್ಲಿ ಮಂಡಿಸಿದ ಗುರುಕುಲದ ಕಲ್ಪನೆಯ ಕೆಲವು ಮಹತ್ವದ ಅಂಶಗಳನ್ನು ರಾಮನಾಥಿಯಲ್ಲಿ ಕೃತಿಯಲ್ಲಿ ತರುತ್ತಿರುವುದು ಗಮನಕ್ಕೆ ಬರುವುದು೨ ಅ. ಗುರುಕುಲವನ್ನು ಸ್ಥಾಪಿಸುವ ಮುಖ್ಯ ಉದ್ದೇಶವು, ‘ಹಿಂದೂ ರಾಷ್ಟ್ರಕ್ಕಾಗಿ ಒಂದು ಆದರ್ಶ ತೇಜಸ್ವಿ ಪೀಳಿಗೆಯನ್ನು ಮತ್ತು ಆದರ್ಶ ಧರ್ಮಪ್ರಸಾರಕರನ್ನು (ಆದರ್ಶ ಸಾಧಕರನ್ನು) ತಯಾರಿಸುವುದಾಗಿದೆ ! ೨ ಆ. ಸಂತರೇ ಗುರುಕುಲದ ಮಾರ್ಗದರ್ಶಕರಾಗಿರುವರು ! : ಗುರುಕುಲದ ಮಾರ್ಗದರ್ಶಕರು ಸಂತರೇ ಆಗಿರುವರು, ಆದರೂ ವಿಶಿಷ್ಟ ಕೌಶಲ್ಯವಿರುವ ಸಾಧಕರು ಅಥವಾ ಯಾವುದಾದರೊಬ್ಬ ವಿದ್ಯಾರ್ಥಿಯು ಯಾವ ಕಲೆಯಲ್ಲಿ ಯಶಸ್ವಿ ಆಗುತ್ತಾನೆಯೋ, ಅವನು ಇತರರಿಗೂ ಆ ಕಲೆಯನ್ನು ಕಲಿಸಿ ಅದರಲ್ಲಿ ತಾನೂ ಕೌಶಲ್ಯವನ್ನು ಪ್ರಾಪ್ತಮಾಡಿಕೊಳ್ಳಲು ಪ್ರಯತ್ನ ಮಾಡುವನು. ೨ ಇ. ಗುರುಕುಲದಲ್ಲಿನ ವಿದ್ಯಾರ್ಥಿಗಳ ಮುಖ್ಯ ಧ್ಯೇಯ `ಈಶ್ವರಪ್ರಾಪ್ತಿ’ ಆಗಿರುವುದರಿಂದ ಅದರಲ್ಲಿನ ಶಿಕ್ಷಣ ಸಾಧನೆ ಆಗಿರುವುದು : ಗುರುಕುಲದಲ್ಲಿನ ವಿದ್ಯಾರ್ಥಿಗಳ ಮುಖ್ಯ ಧ್ಯೇಯ `ಈಶ್ವರಪ್ರಾಪ್ತಿ’ ಆಗಿರುವುದರಿಂದ ಸಾಧನೆಯನ್ನು ಮಾಡುವುದಕ್ಕೆ ಎಲ್ಲಕ್ಕಿಂತ ಹೆಚ್ಚು ಮಹತ್ವವಿರುವುದು. ಗುರುಕುಲದಲ್ಲಿ ಈಗಿನ ಶಿಕ್ಷಣಪದ್ಧತಿಯನ್ನು ಸ್ವೀಕರಿಸಲಾಗುವುದಿಲ್ಲ. ಗುರುಕುಲದಲ್ಲಿನ ವಿದ್ಯಾರ್ಥಿಗಳ `ಧರ್ಮ ಮತ್ತು ಅಧ್ಯಾತ್ಮ’ ಈ ವಿಷಯಗಳ ಸೂಕ್ಷ್ಮಜ್ಞಾನ ಹೆಚ್ಚಾಗಬೇಕು, ಹಾಗೆಯೇ ಅವರ ಆರನೇ ಇಂದ್ರಿಯದ ವಿಕಾಸ ಆಗಬೇಕು’, ಎಂಬುದಕ್ಕಾಗಿ ಪ್ರಯತ್ನಿಸಲಾಗುವುದು. ಯಾವ ವಿದ್ಯಾರ್ಥಿಗಳ ಆರನೇ ಇಂದ್ರಿಯವು ಮೊದಲಿನಿಂದಲೇ ಜಾಗೃತವಾಗಿದೆಯೋ, ಅವರಿಗೆ ಮುಂದಿನ ಹಂತದ ಮಾರ್ಗದರ್ಶನವನ್ನು ಮಾಡಲಾಗುವುದು. ೨ ಈ. ಗುರುಕುಲದಲ್ಲಿ ‘ವಿದ್ಯಾರ್ಥಿಗಳ ಕೌಶಲ್ಯ ಮತ್ತು ಅವರ ಆಧ್ಯಾತ್ಮಿಕ ಮಟ್ಟ’ ಇವುಗಳಿಗೆ ಮಹತ್ವ ಇರುವುದು : ಗುರುಕುಲದಲ್ಲಿ ಪ್ರಚಲಿತ ಶಿಕ್ಷಣಪದ್ಧತಿಗನುಸಾರ ತರಗತಿಗಳ ಪದ್ಧತಿ ಇರಲಾರದು. ಗುರುಕುಲದಲ್ಲಿ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಒಟ್ಟಿಗೆ ಕಲಿಯುವರು. `ವಿದ್ಯಾರ್ಥಿಗಳಲ್ಲಿನ ಕೌಶಲ್ಯ ಮತ್ತು ಅವರ ಆಧ್ಯಾತ್ಮಿಕ ಮಟ್ಟ’ವನ್ನು ಗಮನಕ್ಕೆ ತೆಗೆದುಕೊಳ್ಳಲಾಗುವುದು. ಬೇರೆ ಬೇರೆ ಗುಂಪುಗಳಲ್ಲಿನ ಬೇರೆಬೇರೆ ಕೌಶಲ್ಯವಿರುವ ಸಾಧಕರ ಪಠ್ಯಕ್ರಮವು ಬೇರೆಬೇರೆ, ಅಂದರೆ ಅವರ ಆಸಕ್ತಿಗನುಸಾರ ಮತ್ತು ಅವರ ಸಾಧನೆಗೆ ಅನುಕೂಲವಾಗಿರುವುದು. ೨ ಉ. ಸಮಷ್ಟಿ ಸಾಧನೆಯ ಮಹತ್ವ : ವಿದ್ಯಾರ್ಥಿಗಳಲ್ಲಿ ಯಾವುದಾದರೊಂದು ಕೌಶಲ್ಯವಿದ್ದರೆ ಅವರನ್ನು ಅದರಲ್ಲಿ ಇನ್ನೂ ಪ್ರವೀಣರನ್ನಾಗಿ ಮಾಡಿ ಸಾಧನೆಯಲ್ಲಿ ಮುಂದೆ ಒಯ್ಯಲಾಗುವುದು. ಆ ವಿದ್ಯಾರ್ಥಿಗಳ ಸಮಷ್ಟಿ ಸಾಧನೆಯಾಗಲು ಅವರಿಗೆ ಅವರಲ್ಲಿನ ಕೌಶಲ್ಯವನ್ನು ಇತರರಿಗೆ ಕಲಿಸಲು ಹೇಳಲಾಗುವುದು. ೨ ಊ. ಪ್ರಸ್ತುತ ಶಿಕ್ಷಣಪದ್ಧತಿಗನುಸಾರ ಕಲಿತಿರುವ ವಿದ್ಯಾರ್ಥಿಗಳಂತೆ ಅವರು ಕೇವಲ `ಬಾಯಿಪಾಠ ಮಾಡುವವರು’ ಆಗಲಾರರು. ಅವರಿಗೆ ಪ್ರಾಯೋಗಿಕ ಸ್ತರದಲ್ಲಿ ವಿಷಯಗಳನ್ನು ಕಲಿಸಲಾಗುವುದು. ೨ ಎ. ವಿದ್ಯಾರ್ಥಿಗಳಲ್ಲಿ ‘ತ್ಯಾಗವೃತ್ತಿ ಮತ್ತು ಸೇವಾಭಾವ’ ಈ ಗುಣಗಳ ವಿಕಾಸವಾಗಲು ಪ್ರಯತ್ನವನ್ನು ಮಾಡಲಾಗುವುದು. ೨ ಐ. ‘ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ’ ಇದು ವಿದ್ಯಾರ್ಥಿಗಳ ಅಧ್ಯಯನದ ಅವಿಭಾಜ್ಯ ಅಂಗವಾಗಿರುವುದು. ೨ ಓ. ‘ಗುರುಕುಲದಲ್ಲಿ ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೇ ಜ್ಞಾನವನ್ನು ನೀಡಲಾಗುವುದು. ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಸನಾತನದ ಗ್ರಂಥಗಳನ್ನು ಸೇರಿಸಲಾಗುವುದು.’ – ಪೂ. ತನುಜಾ ಠಾಕೂರ (೨೮.೧೦.೨೦೨೧) |