ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಧರ್ಮಾಭಿಮಾನದ ಅಭಾವ ಹಾಗೂ ಸಹಿಷ್ಣುತೆಯ ಅತಿರೇಕವಿರುವ ಹಿಂದೂ !

ಕೆಲವು ಧರ್ಮದವರಿಗೆ ತಮ್ಮ ಧರ್ಮದ ವಿರುದ್ಧ ಏನಾದರೂ ಮಾತನಾಡಿದರೆ ಆ ಧರ್ಮದವರಿಗೆ ಅಸಹನೆಯಾಗುತ್ತದೆ. ಅವರ ಧರ್ಮದ ‘ಅವಹೇಳನ’ ಮಾಡಲಾಗಿದೆ ಎಂದು ಅವರು ಗಲಾಟೆಯನ್ನು ಮಾಡುತ್ತಾರೆ. ಇದರಿಂದ ಸಮಾಜದ ಕಾನೂನು ಸುವ್ಯವಸ್ಥೆಯು ಹಾಳಾಗುತ್ತದೆ. ಹಿಂದೂ ಧರ್ಮದ ಸಂದರ್ಭದಲ್ಲಿ ಇದರ ತದ್ವಿರುದ್ಧ ಪ್ರತಿಕ್ರಿಯೆಯಿರುತ್ತದೆ. ಹಿಂದೂ ಧರ್ಮದ ವಿರುದ್ಧ ಯಾರಾದರೂ ಏನಾದರೂ ಮಾತನಾಡಿದರೆ, ಅವರನ್ನು ‘ವಿಚಾರವಂತ’ ಅಥವಾ ‘ಬುದ್ಧಿಜೀವಿ’ ಎಂದು ನಿರ್ಧರಿಸಿ ಪ್ರಶಂಸಿಸಲಾಗುತ್ತದೆ. ಇದನ್ನು ‘ಹಿಂದೂಗಳ ಧರ್ಮಾಭಿಮಾನದ ಅಭಾವ’ ಎಂದು ಹೇಳುವುದೋ ಅಥವಾ ‘ಹಿಂದೂಗಳ ಸಹಿಷ್ಣುತೆಯ ಅತಿರೇಕವೆಂದು ಹೇಳುವುದೋ ?’

‘ಬುದ್ಧಿಜೀವಿಗಳು ಧರ್ಮದ ಬಗ್ಗೆ ಮೇಲುಮೇಲಿನ ಅಧ್ಯಯನ ಮಾಡುತ್ತಾರೆ ಹಾಗೂ ‘ಅರ್ಧ ತುಂಬಿದ ಕೊಡದಲ್ಲಿ ಸದ್ದು ಜೋರು’, ಎಂಬ ನಾಣ್ನುಡಿಗನುಸಾರ ಧರ್ಮದ ವಿರುದ್ಧ ಮಾತನಾಡುತ್ತಾರೆ’.

– (ಪರಾತ್ಪರ ಗುರು) ಡಾ. ಆಠವಲೆ