ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !

ತಾವು ಸ್ವತಃ ಭಗವಂತಸ್ವರೂಪರಾಗಿದ್ದರೂ ಕೃತಜ್ಞತಾಭಾವದಿಂದ, ಪರಿಪೂರ್ಣತೆಯಿಂದ ಮತ್ತು ಸಹಜಭಾವದಿಂದ ತಾಯಿ-ತಂದೆಯವರ ಸೇವೆಯನ್ನು ಮಾಡಿ ಸಮಾಜದೆದುರು ಉತ್ತಮ ಸೇವೆಯ ಆದರ್ಶವನ್ನಿಡುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಆಠವಲೆ

‘೧೯೯೦ ರಿಂದ ಸನಾತನ ಸಂಸ್ಥೆಯ ಕಾರ್ಯ ಮುಂಬಯಿಯಲ್ಲಿ ಆರಂಭವಾಯಿತು. ಅಂದಿನಿಂದ ನಾವು ಕೆಲವು ಸಾಧಕರು ಸೇವೆಯ ನಿಮಿತ್ತದಲ್ಲಿ ಪ.ಪೂ. ಡಾಕ್ಟರರ ಮನೆಗೆ ಹೋಗಿ ಬರಲು ಆರಂಭಿಸಿದೆವು. ಆಗ ಪ.ಪೂ. ಡಾಕ್ಟರರ ತಾಯಿ-ತಂದೆ ಅವರ ಜೊತೆಗೆ ವಾಸಿಸುತ್ತಿದ್ದರು. ನಾವೆಲ್ಲ ಸಾಧಕರು ಪ.ಪೂ.ಡಾಕ್ಟರ್ ಅವರನ್ನು ಹೇಗೆ ಸಂಬೋಧಿಸುತ್ತಿದ್ದರೊ, ಅದೇ ರೀತಿ `ತಾಯಿ’ ಮತ್ತು `ದಾದಾ’ ಎಂದು ಸಂಬೋಧಿಸುತ್ತಿದ್ದೆವು. ಅವರಿಬ್ಬರೂ ನಮ್ಮೆಲ್ಲ ಸಾಧಕರನ್ನು ಮನಃಪೂರ್ವಕ ಪ್ರೀತಿಸುತ್ತಿದ್ದರು. ಅವರು ನಮ್ಮನ್ನು ತಮ್ಮ ಕುಟುಂಬದ ಒಂದು ಭಾಗವೆಂದು ತಿಳಿಯುತ್ತಿದ್ದರು. ಸದ್ಯ ಸಮಾಜ ದಲ್ಲಿ ತಾಯಿ-ತಂದೆ ವೃದ್ಧರಾದಾಗ ಮಕ್ಕಳಿಗೆ ಬೇಡವಾಗು ತ್ತಾರೆ. ಕೆಲವರು ‘ಅವರ ಅಡಚಣೆ ಬೇಡ’ವೆಂದು ಬೇರೆಯೆ ಮನೆ ಮಾಡಿಕೊಂಡಿರುತ್ತಾರೆ ಮತ್ತು ಕೆಲವರು ಅವರನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬಿಡುತ್ತಾರೆ. ನಮ್ಮ ಪಾಲನೆ ಪೋಷಣೆ ಮಾಡಿ, ಒಳ್ಳೆಯ ಸಂಸ್ಕಾರ ಮಾಡಿ ಸಮಾಜದಲ್ಲಿ ನಾವು ಹೆಸರು ಗಳಿಸುವಂತೆ ಮಾಡಿರುವ ನಮ್ಮ ತಾಯಿ-ತಂದೆಯರ ಬಗ್ಗೆ ಇದೆಷ್ಟು ಕೃತಘ್ನತೆ ? ‘ಇಂತಹ ಸಮಾಜಕ್ಕೆ ಯೋಗ್ಯ ದೃಷ್ಟಿಕೋನ ಸಿಗಬೇಕೆಂದು’, ಪ್ರತ್ಯಕ್ಷ ಭಗವಂತನೆ (ಪರಾತ್ಪರ ಗುರು ಡಾಕ್ಟರ್ ಆಠವಲೆಯವರು) ತನ್ನ ತಾಯಿ-ತಂದೆಯರ ಸೇವೆ ಹೇಗೆ ಮಾಡಿದರು ?’, ಎಂಬುದು ಇಲ್ಲಿ ಕೊಟ್ಟಿರುವ ಉದಾಹರಣೆಯಿಂದ ಅರಿವಾಗಬಹುದು ಹಾಗೂ ‘ದೇವರ ಪ್ರತಿಯೊಂದು ಕೃತಿ ಎಷ್ಟು ಪರಿಪೂರ್ಣವಿರುತ್ತದೆ ?’, ಎಂಬುದೂ ಕಲಿಯಲು ಸಿಗುವುದು.

‘ಸೇವೆ ಮಾಡುವಾಗ ಪ್ರತಿಯೊಂದು ಕೃತಿಗೂ ಭಕ್ತಿಮಾರ್ಗಕ್ಕನುಸಾರ ಭಾವದ ಮತ್ತು ಕರ್ಮಯೋಗಕ್ಕನುಸಾರ ಪರಿಪೂರ್ಣತ್ವವನ್ನು ಜೋಡಿಸಿ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಸೇವೆ ಮಾಡಬೇಕು ? ಎಂಬುದು ಪ.ಪೂ. ಡಾ. ಆಠವಲೆಯವರು ಮಾಡಿರುವ ಅವರ ತಾಯಿ-ತಂದೆಯರ ಸೇವೆಯಿಂದ ಕಲಿಯಲು ಸಿಗುತ್ತದೆ. ೩೧.೧೦.೨೦೨೧ ರಂದು ನಾವು ಮುಂಬಯಿಯ ಸೇವಾಕೇಂದ್ರದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಜೊತೆಗಿದ್ದು ಸೇವೆ ಮಾಡುವ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ದಿನೇಶ ಶಿಂದೆಯವರು ‘ಪರಾತ್ಪರ ಗುರು ಡಾಕ್ಟರರು ತಾಯಿ-ತಂದೆಯರ ಸೇವೆಯನ್ನು ಎಷ್ಟು ಪರಿಪೂರ್ಣವಾಗಿ ಮಾಡಿದರು !’ ಎನ್ನುವ ವಿಷಯದಲ್ಲಿ ಅನುಭವಿಸಿದ ಕೆಲವು ವಿಷಯಗಳನ್ನು ನೋಡಿದೆವು. ಈ ವಾರ ಅದರ ಮುಂದಿನ ಭಾಗವನ್ನು ನೋಡೋಣ. ಇಂದಿನ ಯುಗವು `ಉಪಯೋಗಿಸಿರಿ ಮತ್ತು ಎಸೆಯಿರಿ’ (Use & Throw) ಈ ತತ್ತ್ವವನ್ನು ಅನುಸರಿಸುವವರದ್ದಾಗಿದೆ. ‘ಮಕ್ಕಳನ್ನು ಬೇಬಿ ಸಿಟ್ಟಿಂಗ್‍ನಲ್ಲಿ ಮತ್ತು ತಾಯಿ-ತಂದೆಯರನ್ನು ವೃದ್ಧಾಶ್ರಮದಲ್ಲಿ’ ಬಿಡುವ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವ ಪೀಳಿಗೆ ಈಗ ತಾಯಿ-ತಂದೆಯರನ್ನು ‘ಉಪಯೋಗದ ವಸ್ತುವಿನ ದೃಷ್ಟಿಯಲ್ಲಿ ನೋಡಲು ಆರಂಭಿಸಿದೆ. `ವೃದ್ಧ ತಾಯಿ-ತಂದೆಯರನ್ನು ವೃದ್ಧಾಶ್ರಮಕ್ಕೆ ಕಳುಹಿ ಸುವುದು’, ಈ ಸಂಸ್ಕೃತಿ ನಿರ್ಮಾಣವಾಗಿರುವ ಸಮಾಜದಿಂದ ತಾಯಿ- ತಂದೆಯರ ಪರವಾಗಿ ಆದರ ಹಾಗೂ ಮಾನಸನ್ಮಾನದ ಅಪೇಕ್ಷೆ ಯಂತೂ ಇಲ್ಲ; ಆದರೆ ಮಕ್ಕಳು ಅವರ ಆಸ್ತಿಯ ಮೇಲೆ ಕಣ್ಣಿಟ್ಟು ಅವರಿಗೆ ಬದುಕಲೂ ಅಸಹನೀಯ ಮಾಡಿರುವುದನ್ನು ನಾವು ನೋಡುತ್ತಿದ್ದೇವೆ. ಪರಾತ್ಪರ ಗುರು ಡಾ. ಆಠವಲೆಯವರ ಹಾಗೆ ಸಂತಸೇವೆಯೆಂದು ತಿಳಿದು ತಾಯಿ-ತಂದೆಯರ ಸೇವೆ ಮಾಡುವ ಸಂತತಿಯಂತೂ ಅಪರೂಪದ ಮಾತು ! ಈ ಕೆಳಗಿನ ವಿಷಯಗಳಲ್ಲಿ ‘ವೃದ್ಧರ ಸೇವೆ ಮಾಡುವಾಗ ಭಾವ ಹೇಗಿರಬೇಕು ? ಯಾವ ವಿಷಯಗಳ ಎಚ್ಚರಿಕೆ ತೆಗೆದುಕೊಳ್ಳಬೇಕು ?’ ಪ್ರೇಮದಿಂದ ಹಾಗೂ ಪರಿಪೂರ್ಣ ಸೇವೆ ಹೇಗೆ ಮಾಡಬೇಕು ?’, ಎಂಬುದು ಸಮಷ್ಟಿಗೆ ಕಲಿಯಲು ಸಿಗಲಿಕ್ಕಿದೆ. ಸಾಧಕರು ಸಂತರ ಹಾಗೂ ಹಿರಿಯ ವ್ಯಕ್ತಿಗಳ ಸೇವೆಯನ್ನು ಹೀಗೆಯೇ ಸೇವಾಭಾವದಿಂದ ಮಾಡಿದರೆ ಅವರ ಆಧ್ಯಾತ್ಮಿಕ ಉನ್ನತಿ ಶೀಘ್ರಗತಿಯಲ್ಲಿ ಆಗುವುದು ಖಚಿತ.

 (ಭಾಗ 3)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/54049.html
ಪರಾತ್ಪರ ಗುರು ಡಾ. ಆಠವಲೆಯವರ ತಂದೆ ಪ.ಪೂ. ಬಾಳಾಜಿ ಆಠವಲೆ ಮತ್ತು ತಾಯಿ ಪೂ. (ಸೌ.) ನಲಿನಿ ಆಠವಲೆ

೭. ಪರಾತ್ಪರ ಗುರು ಡಾ. ಆಠವಲೆಯವರು ಸ್ವಾದ ಬದಲಾವಣೆಯೆಂದು ಪ.ಪೂ. ದಾದಾರವರ ಭೋಜನದಲ್ಲಿ ವೈವಿಧ್ಯವನ್ನಿಡುವುದು 

ಪ.ಪೂ. ದಾದಾರವರ ಭೋಜನದ ಪ್ರಮಾಣ ತುಂಬಾ ಕಡಿಮೆಯಾಗಿತ್ತು. ‘ಬೆಳಿಗ್ಗೆ-ಸಾಯಂಕಾಲ ಚಹಾ ತೆಗೆದುಕೊಳ್ಳುವುದು ಹಾಗೂ ಮಧ್ಯಾಹ್ನ ಮತ್ತು ರಾತ್ರಿಯ ಭೋಜನದಲ್ಲಿ ಒಂದು ಲೋಟ ಹಾಲು ಕುಡಿಯುವುದು’, ಇಷ್ಟೇ ಅವರ ದಿನನಿತ್ಯದ ಆಹಾರವಾಗಿತ್ತು. ಪ.ಪೂ. ದಾದಾರವರಿಗೆ ಹಲ್ಲುಗಳಿಲ್ಲದ ಕಾರಣ ಅವರಿಗೆ ಯಾವುದೇ ಪದಾರ್ಥ ಜಗಿದು ತಿನ್ನಲು ಆಗುತ್ತಿರಲಿಲ್ಲ. ಅದಕ್ಕಾಗಿ ಪ.ಪೂ. ಡಾಕ್ಟರ್ ಅವರಿಗೆ ಕೇಕನ್ನು ಸಣ್ಣ ಸಣ್ಣ ತುಂಡು ಮಾಡಿ ಅದನ್ನು ಹಾಲಿನಲ್ಲಿ ಹಾಕಿ ಕೊಡುತ್ತಿದ್ದರು, ಕೆಲವೊಮ್ಮೆ ಲಾಡು ಪುಡಿ ಮಾಡಿ ಅದನ್ನು ಹಾಲಿನಲ್ಲಿ ಹಾಕಿ ಕೊಡುತ್ತಿದ್ದರು, ಕೆಲವೊಮ್ಮೆ ಅವರಿಗಾಗಿ ಕಬ್ಬಿನ ಹಾಲನ್ನು ತಂದು ಇಡುತ್ತಿದ್ದರು ಹಾಗೂ ಅವರಿಗೆ ಬೇಕಾದಾಗ ಅದನ್ನು ಕೊಡುತ್ತಿದ್ದರು. ಈ ರೀತಿಯಲ್ಲಿ ಪ.ಪೂ. ಡಾಕ್ಟರ್ ‘ಪ.ಪೂ.ದಾದಾರವರಿಗೆ ತಿಂದದ್ದನ್ನೆ ತಿಂದು ಬೇಸರವಾಗಬಾರದೆಂದು ಅವರ ಊಟ-ತಿಂಡಿಯಲ್ಲಿ ವೈವಿಧ್ಯತೆಯನ್ನು ಮಾಡುತ್ತಿದ್ದರು ಹಾಗೂ ‘ಅವರಿಗೆ ಏನು ಇಷ್ಟವಾಗುತ್ತದೆ ?’, ಎಂಬುದನ್ನು ನೆನಪಿಟ್ಟು ಕೊಡುತ್ತಿದ್ದರು.

ಶ್ರೀ. ದಿನೇಶ ಶಿಂದೆ

೮. ಪರಾತ್ಪರ ಗುರು ಡಾ. ಆಠವಲೆಯವರು ತಾಯಿ-ತಂದೆಯರ ಕೋಣೆಯನ್ನು ಸ್ವಚ್ಛ ಮಾಡುತ್ತಿದ್ದ ಪರಿ!

೮ ಅ. ಪರಾತ್ಪರ ಗುರು ಡಾ. ಆಠವಲೆಯವರು ತಾಯಿ-ತಂದೆಯವರ ಕೋಣೆಯನ್ನು ಅಲ್ಪ ಅವಧಿಯಲ್ಲಿಯೇ ಪರಿಪೂರ್ಣವಾಗಿ ಸ್ವಚಗೊಳಿಸುತ್ತಿದ್ದರು : ಪ.ಪೂ. ಡಾಕ್ಟರರು ಪ್ರತಿ ೧೫ ದಿನಕ್ಕೊಮ್ಮೆ ಪೂ. ಸೌ. ತಾಯಿ ಮತ್ತು ಪ.ಪೂ. ದಾದಾರವರ ಕೋಣೆಯನ್ನು ಸಂಪೂರ್ಣ ಸ್ವಚ್ಛ ಮಾಡುತ್ತಿದ್ದರು. ಆಗ ಅವರು ಪಕ್ಕದ ಕೋಣೆಯಲ್ಲಿ ಅವರಿಗೆ ವಾಸ್ತವ್ಯದ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಿದ್ದರು. ನಂತರ ಅವರು ಕೋಣೆಯ ಗೋಡೆಯ ಮೇಲಿನ ಜೇಡರ ಬಲೆಯನ್ನು ತೆಗೆಯುವುದು, ಟ್ಯೂಬ್ ಲೈಟ್ ಮತ್ತು ಫ್ಯಾನ್ ಒರೆಸುವುದು, ಮಂಚದ ಮೇಲಿನ ಹಾಸಿಗೆಗಳನ್ನು ಬಿಸಿಲಿಗೆ ಹಾಕುವುದು, ಮಂಚದ ಕೆಳಗೆ ಬಲೆ ಇದ್ದರೆ ತೆಗೆಯುವುದು, ಅದರಲ್ಲಿ ತಿಗಣೆಗಳಾಗಬಾರದೆಂದು ಔಷಧವನ್ನು ಸಿಂಪಡಿಸುವುದು, ಕಪಾಟಿನಲ್ಲಿನ ಬಟ್ಟೆಗಳನ್ನು ಮಡಚಿ ಅವುಗಳನ್ನು ಜೋಡಿಸಿಡುವುದು, ಅನಾವಶ್ಯಕ ಸಾಹಿತ್ಯಗಳನ್ನು ತೆಗೆದುಹಾಕುವುದು, ಮಂಚದ ಮೇಲಿನ ಹೊದಿಕೆಗಳನ್ನು ಬದಲಾಯಿಸುವುದು ಹಾಗೂ ಅದನ್ನು ಒಗೆಯುವುದು’, ಹೀಗೆ ಎಲ್ಲ ಸೇವೆಗಳನ್ನು ಮಾಡುತ್ತಿದ್ದರು. ಇವೆಲ್ಲ ಸೇವೆಗಳನ್ನು ಅವರು ಒಬ್ಬರೆ ಮಾಡುತ್ತಿದ್ದರೂ ಒಂದರಿಂದ ಒಂದೂವರೆ ಗಂಟೆಯಲ್ಲಿ ಎಲ್ಲ ಸೇವೆಗಳನ್ನು ಪೂರ್ಣಗೊಳಿಸುತ್ತಿದ್ದರು. ಇದರಿಂದ ಅವರ ಸೇವೆಯ ವೇಗದ ಅರಿವಾಗುತ್ತದೆ.

೮ ಆ. ಪರಾತ್ಪರ ಗುರು ಡಾ. ಆಠವಲೆಯವರು ತಾಯಿ-ತಂದೆಯರ ಕೋಣೆಯ ಸೇವೆ ಮಾಡಲು ಸಾಧಕರನ್ನು ಸಿದ್ಧಪಡಿಸಿರುವುದರಿಂದ ಸಾಧಕರಿಂದಲೂ ಸಂತರ ಪರಿಪೂರ್ಣ ಸೇವೆಯಾಗುವುದು : ಪ.ಪೂ. ದಾದಾ ಮತ್ತು ಪೂ. ಸೌ. ತಾಯಿಯವರ ಕೋಣೆಯ ಸ್ವಚ್ಛತೆಯ ಸೇವೆ ಮಾಡುತ್ತಿರುವಾಗ ಪ.ಪೂ. ಡಾಕ್ಟರರು ಒಬ್ಬ ಸಾಧಕನನ್ನು ಕಲಿಯಲಿಕ್ಕೆಂದು ಜೊತೆಗೆ ಇಟ್ಟುಕೊಳ್ಳುತ್ತಿದ್ದರು. ಆದ್ದರಿಂದ ‘ಪ್ರಸಂಗಾನುಸಾರ ಮತ್ತು ಏನಾದರೂ ವ್ಯತ್ಯಯ ಬಂದಾಗ ಸಾಧಕರು ಆ ಸೇವೆಯನ್ನು ಮಾಡಬಹುದು’, ಎಂಬುದು ಅವರ ದೃಷ್ಟಿಕೋನವಾಗಿತ್ತು. ಅನೇಕ ಸಾಧಕರು ಪ.ಪೂ. ಡಾಕ್ಟರರ ಜೊತೆಗೆ ಪ.ಪೂ. ಭಕ್ತರಾಜ ಮಹಾರಾಜರ (ಪ.ಪೂ. ಬಾಬಾ) ಆಶ್ರಮದಲ್ಲಿ ಭಂಡಾರಾಗೆ ಹೋಗುತ್ತಿದ್ದರು ಹಾಗೂ ಪ.ಪೂ. ಡಾಕ್ಟರರು ಕಲಿಸಿದ ಹಾಗೆ ಅಲ್ಲಿ ಸೇವೆ ಮಾಡುತ್ತಿದ್ದರು. ಪ.ಪೂ. ಬಾಬಾರವರ ಭಕ್ತರು ಸಾಧಕರ ಸೇವೆಯನ್ನು ನೋಡಿ ಹೊಗಳುತ್ತಿದ್ದರು. ಈ ರೀತಿ ಪ.ಪೂ. ಡಾಕ್ಟರರು ಸಾಧಕರಿಗೆ ಪರಿಪೂರ್ಣ ಸೇವೆ ಮಾಡಲಿಕ್ಕಾಗುವಂತೆ ಸಿದ್ಧಪಡಿಸುತ್ತಿದ್ದರು.

೯. ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ಇಲ್ಲದಿದ್ದಾಗಲೂ ತಾಯಿ-ತಂದೆಯರ ಸೇವೆ ವ್ಯವಸ್ಥಿತವಾಗಬೇಕೆಂದು ಸಾಧಕರನ್ನು ಸಿದ್ಧಪಡಿಸಿದ ಪರಿ !

೯ ಅ. ಆರಂಭದಲ್ಲಿ ಪರಾತ್ಪರ ಗುರು ಆಠವಲೆಯವರು ಶ್ರೀ ಗುರುಗಳಲ್ಲಿಗೆ ಹೋಗುವಾಗ ಆ ಅವಧಿಯಲ್ಲಿ ಸಹೋದರರನ್ನು ತಾಯಿ-ತಂದೆಯರ ಸೇವೆಗಾಗಿ ಮನೆಗೆ ಕರೆಯುತ್ತಿದ್ದರು : ಪ.ಪೂ. ಡಾಕ್ಟರರು ಪ.ಪೂ. ಭಕ್ತರಾಜ ಮಹಾರಾಜರಲ್ಲಿಗೆ ಹೋಗಲು ಆರಂಭಿಸಿದರು. ಆಗ ಆರಂಭದಲ್ಲಿ ‘ಪ.ಪೂ. ದಾದಾ ಮತ್ತು ಪೂ. ಸೌ. ತಾಯಿಯರ ಸೇವೆಯಲ್ಲಿ ದುರ್ಲಕ್ಷವಾಗಬಾರದೆಂದು’, ಅದಕ್ಕಾಗಿ ಅವರು ತನ್ನ ಸಹೋದರರಾದ ಸದ್ಗುರು ಅಪ್ಪಾಕಾಕಾ (ಸದ್ಗುರು (ದಿ.) ಡಾ. ವಸಂತ ಆಠವಲೆ), ಶ್ರೀ. ವಿಲಾಸಕಾಕಾ ಅಥವಾ (ದಿ.) ಡಾ. ಸುಹಾಸಕಾಕಾ ಇವರನ್ನು ಆ ಸಮಯದಲ್ಲಿ ಬಂದು ತಾಯಿ-ತಂದೆಯರ ಜೊತೆಗಿರಬೇಕೆಂದು ಹೇಳುತ್ತಿದ್ದರು.

೯ ಆ. ಶ್ರೀ ಗುರುಗಳಲ್ಲಿಗೆ ಮತ್ತು ಪ್ರಸಾರಕ್ಕಾಗಿ ಊರಿಂದೂರಿಗೆ ಪದೇ ಪದೇ ಹೋಗಬೇಕಾಗುತ್ತಿದ್ದ ಕಾರಣ ‘ತಾಯಿ-ತಂದೆಯರ ಸೇವೆಯಲ್ಲಿ ಅಡಚಣೆಯಾಗ ಬಾರದೆಂದು ಹಾಗೂ ಸಹೋದರರಿಗೂ ಸಾಯನ್‍ಗೆ ಬರಲು ಪ್ರಯಾಣದ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪ.ಪೂ. ಡಾಕ್ಟರರು ತಾಯಿ-ತಂದೆಯರ ಸೇವೆ ಮಾಡಲು ಸಾಧಕರನ್ನು ಸಿದ್ಧಪಡಿಸಿದ್ದು : ಸ್ವಲ್ಪ ಸಮಯದಲ್ಲಿಯೇ ಸಂಸ್ಥೆಯ ಕಾರ್ಯವು ತುಂಬಾ ಹೆಚ್ಚಾದ ಕಾರಣ ಪ.ಪೂ. ಡಾಕ್ಟರರ ಪ್ರವಾಸದ ಪ್ರಮಾಣವು ಹೆಚ್ಚಾಯಿತು. ‘ತನಗೆ ಸತತವಾಗಿ ಪ್ರವಾಸಕ್ಕೆ ಹೋಗಬೇಕಾಗುವುದು ಹಾಗೂ ಸಹೋದರರಿಗೆ ಪ್ರತಿದಿನ ಪ್ರವಾಸ ಮಾಡಿ ಸಾಯನ್‍ಗೆ ಬರಲು ಕಠಿಣವಾಗುವುದು’, ಎನ್ನುವ ವಿಚಾರ ಪ.ಪೂ. ಡಾಕ್ಟರರ ಮನಸ್ಸಿನಲ್ಲಿ ಬಂತು. ಅನಂತರ ಪ.ಪೂ. ದಾದಾ ಮತ್ತು ಪೂ. ಸೌ. ತಾಯಿಯವರಿಗೆ ಯಾವುದೆ ರೀತಿಯ ಅಡಚಣೆ ಆಗಬಾರದೆಂಬ ದೃಷ್ಟಿಯಿಂದ ಪ.ಪೂ. ಡಾಕ್ಟರರು ಪ.ಪೂ. ದಾದಾ ಮತ್ತು ಪೂ. ಸೌ. ತಾಯಿಯವರ ಎಲ್ಲ ಸೇವೆಗಳನ್ನು ಒಂದೊಂದಾಗಿ ಸಾಧಕರಿಗೆ ಕಲಿಸಿದರು.

೯ ಇ. ಸಾಧಕರಿಗೆ ಸೇವೆ ಮಾಡಲು ಕಲಿಸಿದ ನಂತರ ಸಾಧಕರು ಆ ಸೇವೆಗಳನ್ನು ಸಮಯಕ್ಕನುಸಾರ ಮತ್ತು ಪರಿಪೂರ್ಣವಾಗಿ ಮಾಡುತ್ತಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು : ಆ ಮೇಲೆ ಕೆಲವು ದಿನ ಪ.ಪೂ. ಡಾಕ್ಟರರು ‘ಸಾಧಕರು ಪ.ಪೂ. ದಾದಾ ಮತ್ತು ಪೂ. ತಾಯಿ ಇವರ ಸೇವೆ ಮಾಡುವಾಗ ಅದರಲ್ಲಿ ಏನಾದರೂ ತಪ್ಪಾಗುತ್ತಿದೆಯೇ ?’, ಎಂದು ನೋಡುತ್ತಿದ್ದರು. ಕ್ರಮೇಣ ಸಾಧಕರಿಗೆ ಆ ಸೇವೆ ಸರಿಯಾಗಿ ಮಾಡಲು ಅಭ್ಯಾಸವಾದ ನಂತರ ಅವರು ಸ್ವತಃ ತಾನು ಮಾಡುವ ಆ ಸೇವೆಗಳನ್ನು ನಿಲ್ಲಿಸಿದರು. ಪ.ಪೂ. ಡಾಕ್ಟರರು ಸೇವೆ ಮಾಡುವ ಸಾಧಕರನ್ನು ಎಷ್ಟು ಚೆನ್ನಾಗಿ ಸಿದ್ಧಪಡಿಸಿದ್ದಾರೆಂದರೆ, ಪೂ. ತಾಯಿ ಮತ್ತು ಪ.ಪೂ. ದಾದಾ ಇವರು ಪ.ಪೂ. ಡಾಕ್ಟರರಿಗೆ, “ನೀವು ನಿಶ್ಚಿಂತೆಯಿಂದ ಪ್ರಸಾರಕ್ಕೆ ಹೋಗಿ. ನಮ್ಮನ್ನು ನೋಡಿಕೊಳ್ಳಲು ಸಾಧಕರಿದ್ದಾರೆ. ನೀವು ನಮ್ಮ ಚಿಂತೆ ಮಾಡುವ ಅವಶ್ಯಕತೆಯಿಲ್ಲ’’, ಎಂದು ಹೇಳುತ್ತಿದ್ದರು. ಅದರಿಂದ ಪ.ಪೂ. ಡಾಕ್ಟರರ ಚಿಂತೆ ದೂರವಾಯಿತು. ಅನಂತರ ಪ.ಪೂ. ಡಾಕ್ಟರರಿಗೆ ಅವರ ಸೇವೆ ಮಾಡುವ ಪ್ರಮೇಯ ಬರಲಿಲ್ಲ.

– ಶ್ರೀ. ದಿನೇಶ ಶಿಂದೆ, ಸನಾನತ ಆಶ್ರಮ (ಆಧ್ಯಾತ್ಮಿಕ ಮಟ್ಟ ಶೇ. ೬೨), ರಾಮನಾಥಿ ಗೋವಾ.) ೩೦. ೮. ೨೦೨೦)    

(ಮುಂದುವರಿಯುವುದು)