ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಪರಾತ್ಪರ ಗುರು ಡಾ. ಆಠವಲೆ

ಜೀವನದ ವಿವಿಧ ಸಮಸ್ಯೆಗಳಿಗೆ ಉಪವಾಸ, ತೀರ್ಥಯಾತ್ರೆಯಲ್ಲ, ‘ಸಾಧನೆಯೇ’ ನಿಜವಾದ ಪರಿಹಾರ !

‘ದ್ವಾಪರ ಮತ್ತು ತ್ರೇತಾಯುಗಗಳಲ್ಲಿ ಸಾಮಾನ್ಯ ವ್ಯಕ್ತಿಯೂ ಸಾತ್ತ್ವಿಕನಾಗಿದ್ದನು. ಆ ಕಾಲದಲ್ಲಿ ಜೀವಿತಾವಧಿಯೂ ಹೆಚ್ಚಿತ್ತು. ಆದುದರಿಂದ ಜೀವನದಲ್ಲಿ ಶಾರೀರಿಕ, ಮಾನಸಿಕ, ಆರ್ಥಿಕಗಳಂತಹ ಸಮಸ್ಯೆಗಳಿಗೆ ಉಪವಾಸ, ತೀರ್ಥಯಾತ್ರೆ ಮುಂತಾದ ಕರ್ಮಕಾಂಡದ ಸ್ತರದ ಉಪಾಯಗಳಿಗೆ ಸಮಯ ನೀಡಲು ಅವರಿಗೆ ಸಾಧ್ಯವಿತ್ತು. ಇದರಿಂದ ಅವರ ಸಮಸ್ಯೆಗಳೂ ಪರಿಹಾರವಾಗುತ್ತಿದ್ದವು. ಸಮಸ್ಯೆಗಳು ದೂರವಾದ ನಂತರ, ಉಳಿದ ಸಮಯವನ್ನು ಸಾಧನೆಗೆ ನೀಡಲು ಸಾಧ್ಯವಾಗುತ್ತಿತ್ತು.

ಪ್ರಸ್ತುತ ಕಲಿಯುಗದಲ್ಲಿ ಮನುಷ್ಯನು ರಜ-ತಮ ಪ್ರಧಾನನಾಗಿದ್ದಾನೆ ಮತ್ತು ಅವನ ಜೀವಿತಾವಧಿಯೂ ಕಡಿಮೆ ಇದೆ. ಆದ್ದರಿಂದ ಮಾನವನ ಸಮಸ್ಯೆಗಳನ್ನು ಪರಿಹರಿಸಲು ಉಪವಾಸ ಮತ್ತು ತೀರ್ಥಯಾತ್ರೆಗಳಂತಹ ಕರ್ಮಕಾಂಡದ ಮಟ್ಟದ ಪರಿಹಾರವನ್ನು ಕಂಡುಕೊಂಡರೂ ನಿರೀಕ್ಷಿತ ಫಲಪ್ರಾಪ್ತಿಯಾಗುವುದಿಲ್ಲ. ಈ ಉಪಾಯವು ಕ್ಷಯರೋಗವಾದಾಗ ಕೆಮ್ಮಿನ ಔಷಧವನ್ನು ನೀಡಿದಂತೆ ಮೇಲುಮೇಲಿನ ಪರಿಹಾರವಾಗುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಲು ಅವರ ಪ್ರಾರಬ್ಧ, ಪೂರ್ವಜರ ತೊಂದರೆಗಳು, ಕೆಟ್ಟ ಶಕ್ತಿಗಳ ತೊಂದರೆಗಳು ಮುಂತಾದ ಮೂಲ ಕಾರಣಗಳಿಗೆ ಉಪಾಯ ಮಾಡುವುದು ಅವಶ್ಯಕ. ಆದುದರಿಂದಲೇ ಸನಾತನದಲ್ಲಿ ಯಾವುದೇ ಶಾರೀರಿಕ, ಮಾನಸಿಕ, ಆರ್ಥಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಹೇಳದೆ, ಮೂಲ ಕಾರಣಕ್ಕೆ ಪರಿಹಾರವಾಗಿ ಆವಶ್ಯಕ ಸಾಧನೆಯನ್ನು ಮಾತ್ರ ಕಲಿಸಲಾಗುತ್ತದೆ.’

– (ಪರಾತ್ಪರ ಗುರು) ಡಾ. ಆಠವಲೆ ( ೧೦. ೯. ೨೦೨೧)