ನರೇಂದ್ರ ಮೋದಿ ಒಬ್ಬ ಮಹಾನ ದೇಶಭಕ್ತರಾಗಿದ್ದು ಅವರ ನಾಯಕತ್ವದಲ್ಲಿ ಭಾರತದ ಭವಿಷ್ಯವು ಉಜ್ವಲವಾಗಿರಲಿದೆ !

ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ ದೇಶಭಕ್ತರಾಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತದ ಭವಿಷ್ಯವು ಉಜ್ವಲವಾಗಿದೆ. ಅವರ ‘ಮೇಕ್ ಇನ್ ಇಂಡಿಯಾ’ದ ಪರಿಕಲ್ಪನೆಯು ಆರ್ಥಿಕ ಮತ್ತು ನೈತಿಕ ಈ ಎರಡೂ ದೃಷ್ತಿಯಲ್ಲಿ ಮಹತ್ವದ್ದಾಗಿದೆ. ಕೆಲವು ವಿಷಯಗಳನ್ನು ಮಿತಿಗೊಳಿಸಲು ಅಥವಾ ತಡೆಯಲು ಪ್ರಯತ್ನಗಳಾಗುತ್ತಿರುವಾಗಲೂ ಅವರು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಲು ಸಮರ್ಥರಾಗಿದ್ದಾರೆ.

ಪಾಶ್ಚಾತ್ಯ ದೇಶಗಳಿಂದ ಅನೇಕ ದಶಕಗಳು ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿರಲಿಲ್ಲ ! – ವಿದೇಶಾಂಗ ಸಚಿವ ಎಸ್. ಜೈಶಂಕರ

ರಷ್ಯಾದಿಂದ ಭಾರತದ ಶಸ್ತ್ರಾಸ್ತ್ರ ಖರೀದಿಗೆ ಬೆಂಬಲ !

ಪಾಕಿಸ್ತಾನದ ಸೆರೆಮನೆಯಲ್ಲಿ ೬ ಭಾರತೀಯ ಬಂಧಿತರ ಸಾವು

ಪಾಕಿಸ್ತಾನದ ಸೆರೆಮನೆಯಲ್ಲಿ ಬಂಧನದಲ್ಲಿರುವ ೬ ಭಾರತೀಯ ಬಂಧಿತರು ಕಳೆದ ೯ ತಿಂಗಳಲ್ಲಿ ಸಾವನ್ನಪ್ಪಿರುವ ಮಾಹಿತಿ ಬೆಳಕಿಗೆ ಬಂದಿದೆ. ಎಲ್ಲರ ಶಿಕ್ಷೆಯ ಅವಧಿ ಪೂರ್ಣವಾಗಿದ್ದರು ಪಾಕಿಸ್ತಾನ ಅವರನ್ನು ಕಾರಾಗೃಹದಲ್ಲಿ ಬಂಧಿಸಿ ಇಟ್ಟಿತ್ತು. ಸಾವನ್ನಪ್ಪಿರುವ ೯ ಬಂಧಿತರ ಪೈಕಿ ೫ ಜನರು ಮೀನುಗಾರರಾಗಿದ್ದರು.

ಶ್ರೀಲಂಕಾದ ಪರವಾಗಿ ನಿಂತು ಭಾರತದ ಮೇಲೆ ಟೀಕೆ ಮಾಡುವ ಚೀನಾಗೆ ಭಾರತ ತರಾಟೆಗೆ ತೆಗೆದುಕೊಂಡಿತು

ಭಾರತದಿಂದ ವಿರೋಧದ ಹೊರತಾಗಿಯೂ ಶ್ರೀಲಂಕಾವು ಬೆಹುಗಾರಿಕೆ ಮಾಡುವ ಚೀನಾದ ನೌಕೆಗೆ ಅದರ ಹಂಬನಟೋಟಾ ಬಂದರಿಗೆ ಬರಲು ಅನುಮತಿ ನೀಡಿತ್ತು. ಒಂದು ವಾರ ಈ ನೌಕೆ ಬಂದರಿನಲ್ಲಿ ನಿಂತು ಈಗ ಅದು ಹಿಂತಿರುಗಿದೆ. ಈ ಸಂದರ್ಭದಲ್ಲಿ ಭಾರತವು ಶ್ರೀಲಂಕಾವನ್ನು ನಿಷೇಧಿಸಿತ್ತು.

ಚೀನಾ ತೈವಾನ ಮೇಲೆ ನಿಯಂತ್ರಣ ಪಡೆದರೆ ಅದರ ಮುಂದಿನ ಗುರಿ ಅರುಣಾಚಲ ಪ್ರದೇಶ !

ಚೀನಾದ ಸೈನ್ಯ ತೈವಾನ ಮೇಲೆ ನಿಯಂತ್ರಣ ಪಡೆದರೆ, ಅದರ ಮುಂದಿನ ಗುರಿ ಅರುಣಾಚಲ ಪ್ರದೇಶ ಇರುವುದು, ಎಂದು ರಕ್ಷಣಾ ಮತ್ತು ವಿದೇಶಾಂಗ ತಜ್ಞ ಬ್ರಹ್ಮ ಚೇಲಾನಿ ಇವರು ಹೇಳಿಕೆ ನೀಡಿದರು.

ಜಗತ್ತು ಭಾರತದ ವಿಚಾರ ಪ್ರಕ್ರಿಯೆ ತಿಳಿದುಕೊಳ್ಳುವುದಕ್ಕಾಗಿ ಮಹಾಭಾರತದ ಅಧ್ಯಯನ ಮಾಡಬೇಕು ! – ಡಾ. ಎಸ್. ಜಯಶಂಕರ್, ವಿದೇಶಾಂಗ ಸಚಿವರು

ಭಾರತಕ್ಕೆ ಅದರದೇ ಆದ ರಣನೀತಿ ಏನು ಇರಬೇಕು ಮತ್ತು ತನಗೆ ಯಾವ ಧ್ಯೇಯ ಇರಬೇಕು, ಇದನ್ನು ತಿಳಿದುಕೊಳ್ಳುವುದಕ್ಕಾಗಿ, ಹಾಗೂ ಜಗತ್ತು ಭಾರತದ ವಿಚಾರ ಪ್ರಕ್ರಿಯೆ ತಿಳಿದುಕೊಳ್ಳುವುದಕ್ಕಾಗಿ ಮಹಾಭಾರತದ ಅಧ್ಯಯನ ಮಾಡುವುದು ಆವಶ್ಯಕವಾಗಿದೆ, ಎಂದು ಕೇಂದ್ರದ ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ್ ಇವರು ಪ್ರತಿಪಾದಿಸಿದರು.

ವಿಶ್ವಸಂಸ್ಥೆಯ ಭದ್ರತಾ ಪರಿಷತ್‌ನಲ್ಲಿ ಉಕ್ರೇನ್ ಕುರಿತು ರಷ್ಯಾದ ಕರಡು ನಿರ್ಣಯದ ಮೇಲಿನ ಮತದಾನದಿಂದ ಭಾರತ ತಟಸ್ಥವಾಗಿದೆ

ರಷ್ಯಾವು ವಿಶ್ವ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಉಕ್ರೇನ್‌ನಲ್ಲಿನ ಮಾನವಿಯತೆಯ ಪರಿಸ್ಥಿತಿಯ ಕರಡು ನಿರ್ಣಯವನ್ನು ಮಂಡಿಸಿತು. ಈ ಬಾರಿ ಭಾರತವು ತಟಸ್ಥ ನಿಲುವನ್ನು ತಾಳುತ್ತಾ ಈ ಮತದಾನ ಮಾಡುವದನ್ನು ತಪ್ಪಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ್ ರಾಷ್ಟ್ರಾಧ್ಯಕ್ಷ ಝೆಲೆಂಸ್ಕಿಯವರೊಂದಿಗೆ ೩೫ ನಿಮಿಷಗಳ ವರೆಗೆ ಮಾತುಕತೆ ನಡೆಸಿದರು

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಕ್ರೇನ್ ರಾಷ್ಟ್ರಾಧ್ಯಕ್ಷ ವ್ಲೊದಿಮಿರ ಝೆಲೆಂಸ್ಕಿಯವರೊಂದಿಗೆ ದೂರವಾಣಿ ಮುಖಾಂತರ ೩೫ ನಿಮಿಷಗಳ ವರೆಗೆ ಚರ್ಚಿಸಿದರು. ಇಬ್ಬರೂ ಮುಖಂಡರು ಉಕ್ರೇನನಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಕುರಿತು ಚರ್ಚಿಸಿದರು.