ಉಗ್ರರಿಗೆ ಹಣ ಪೂರೈಕೆ ನಿಲ್ಲಬೇಕು ! – ಭಾರತದ ವಿದೇಶಾಂಗ ಸಚಿವರಾದ ಡಾ. ಎಸ್. ಜಯಶಂಕರ

  • ಗೋವಾದಲ್ಲಿ ಶಾಂಘೈ ಸಹಕಾರ ಸಭೆ

  • ಭುಟ್ಟೋ ಜೊತೆ ಮಾತನಾಡದ ಜಯಶಂಕರ !

ಪಣಜಿ (ಗೋವಾ ) – ಭಾರತಕ್ಕೆ ಗಡಿಯಾಚೆಗಿನ ಭಯೋತ್ಪಾದನೆಯ ಅಪಾಯ ಇನ್ನು ತಪ್ಪಿಲ್ಲ . ಉಗ್ರರಿಗೆ ಧನ ಪೂರೈಕೆ ನಿಲ್ಲಬೇಕು. ಭಯೋತ್ಪಾದನೆಯ ಎದುರಿಸುವುದು ಇದು ಈ ಸಂಘಟನೆಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ಭಯೋತ್ಪಾದನೆಯನ್ನು ದುರ್ಲಕ್ಷಿಸುವುದು ನಮ್ಮ ಸುರಕ್ಷೆಗೆ ಅಪಾಯಕಾರಿ ಆಗಿದೆ. ನಮ್ಮ ದೃಢವಾದ ವಿಶ್ವಾಸ ಇದೆ ಎಂದರೆ, ಭಯೋತ್ಪಾದನೆಯನ್ನು ಯಾವುದೇ ರೀತಿಯಲ್ಲಿ ಬೆಂಬಲಿಸಲು ಸಾಧ್ಯವಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಗೆ ನೀರುಗೊಬ್ಬರ ಹಾಕುವ ಕೃತಿಯನ್ನು ನಿಲ್ಲಿಸಬೇಕು. ಭಯೋತ್ಪಾದನೆಯ ಜೊತೆ ಹೋರಾಡುವುದೇ ಶಾಂಘೈ ಸಹಕಾರ ಸಭೆಯ ನಿಜವಾದ ಉದ್ದೇಶವಾಗಿದೆ , ಎಂಬ ಮಾತುಗಳಲ್ಲಿ ಭಾರತದ ವಿದೇಶಾಂಗ ಸಚಿವರಾದ ಡಾ. ಎಸ್ ಜಯಶಂಕರ ಇವರು ಇಲ್ಲಿಯ ಮೇ ೪ ರಿಂದ ನಡೆಯುತ್ತಿರುವ ಶಾಂಘೈ ಸಹಕಾರ್ಯ ಸಭೆಯಲ್ಲಿ ಪಾಕಿಸ್ತಾನದ ಹೆಸರು ಹೇಳದೆ ಅದಕ್ಕೆ ತಪರಾಕಿ ನೀಡಿದರು. ಈ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಇವರನ್ನು ಭೇಟಿಯಾದ ನಂತರ ವಿದೇಶಾಂಗ ಸಚಿವ ಎಸ್ . ಜಯಶಂಕರ ಇವರು ಮೇಲಿನ ಅಂಶಗಳನ್ನು ಉಪಸ್ಥಿತಗೊಳಿಸಿದರು. ಈ ಸಭೆಯಲ್ಲಿ ಪಾಕಿಸ್ತಾನ ಜೊತೆಗೆ ಚೀನಾ, ರಷ್ಯಾಸಹಿತ ಎಲ್ಲ ಸದಸ್ಯ ದೇಶದ ವಿದೇಶಾಂಗ ಸಚಿವರು ಸಹಭಾಗಿಯಾಗಿದ್ದರು.

೧. ಜಯಶಂಕರ ಇವರು ಚೀನಾ, ರಷ್ಯಾ ಮತ್ತು ಉಝಬೇಕಿಸ್ತಾನ್ ಇವುಗಳ ವಿದೇಶಾಂಗ ಸಚಿವರ ಜೊತೆ ಮೇ ೪ ರಂದು ದ್ವಿಪಕ್ಷೀಯ ಮಾತುಕತೆ ನಡೆಸಿ ಚರ್ಚಿಸಿದರು. ರಷ್ಯಾದ ವಿದೇಶಾಂಗ ಸಚಿವ ಸರ್ಗೆಯಿ ಲಾವರೋವ ಇವರ ಜೊತೆ ಇಬ್ಬರು ನಾಯಕರು ಎರಡು ದೇಶದಲ್ಲಿನ ಬಹುಪಕ್ಷಿಯ ಸಹಕಾರ್ಯದ ವರದಿ ಪಡೆದರು.

೨. ಜಯಶಂಕರ ಇವರು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ಕಿನ್‌ ಗ್ಯಾಂಗ್ ಇವರ ಜೊತೆ ಕೂಡ ಸಭೆ ನಡೆಸಿದರು .ಈ ಚರ್ಚೆಯಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳ ನಿವಾರಣೆಗಾಗಿ ಮತ್ತು ಗಡಿ ಭಾಗದಲ್ಲಿ ಶಾಂತಿ ಮತ್ತು ಶಾಂತಿಯ ಸುನಿಶ್ಚಿತತೆಯ ಬಗ್ಗೆ ಒತ್ತು ನೀಡಲಾಯಿತು.

೩. ಉಜ್ಹಬೇಕಿಸ್ತಾನ್ ದ ವಿದೇಶಾಂಗ ವ್ಯವಹಾರಗಳ ಸಚಿವ ಸೈದೋವ ಇವರನ್ನು ಕೂಡ ಜಯಶಂಕರ ಭೇಟಿಯಾದರು. ದ್ವಿಪಕ್ಷೀಯ ಪಾಲುದಾರಿಕೆಯಿಂದ ಬೇರೆ ಬೇರೆ ಕ್ಷೇತ್ರದಲ್ಲಿ ವೃದ್ಧಿ ಆಗುವುದು, ಎಂದು ಜಯಶಂಕರ ಇವರು ವಿಶ್ವಾಸ ವ್ಯಕ್ತಪಡಿಸಿದರು.

ಜಯಶಂಕರ ಇವರಿಂದ ಹಾಸ್ತಾಂದೊಲನ ಅಲ್ಲ ,ಕೇವಲ ನಮಸ್ಕಾರ !

ಜಯಶಂಕರ ಇವರು ಬಿಲಾವಲ್ ಭುಟ್ಟೊ ಇವರ ಸ್ವಾಗತ ಕೋರಿದರು. ಎರಡು ದೇಶದ ಪ್ರತಿನಿಧಿಗಳು ಒಟ್ಟಾಗಿ ಸೇರಿದಾಗ ಅವರು ಹಸ್ತಾಂದೊಲನ ಮಾಡುತ್ತಾರೆ. ಜಯಶಂಕರ ಇವರು ಮಾತ್ರ ಭುಟ್ಟೊ ಅವರ ಜೊತೆ ಹಸ್ತಾಂದೋಲನ ಮಾಡಲಿಲ್ಲ., ಅವರಲ್ಲಿ ಮಾತುಕತೆ ನಡೆಯಲಿಲ್ಲ ಜಯಶಂಕರ ಇವರು ಭುಟ್ಟೊ ಇವರಿಗೆ ಸಭೆಯ ಸ್ಥಳಕ್ಕೆ ಹೋಗಲು ಸನ್ನೆ ಮಾಡಿದ್ದರು.