ಇಂದಿರಾ ಗಾಂಧಿಯವರ ಹತ್ಯೆಯ ಸ್ತಬ್ಧ ಚಿತ್ರ ಪ್ರದರ್ಶನ ಗೊಳಿಸುವುದು ಇದು ಕೆನಡಾದಲ್ಲಿ ಅಪರಾಧವಲ್ಲಂತೆ !

ಕೆನಡಾದ ಬ್ರಂಟನ್ ನಗರದ ಮಹಾಮೌರರ ಭಾರತ ವಿರೋಧಿ ಹೇಳಿಕೆ !

ಓಟಾವಾ (ಕೆನಡಾ) – ಕೆನಡಾದಲ್ಲಿ ಜೂನ್ ೪ ರಂದು ಸಿಖ್ಕರಿಂದ ‘ಆಪರೇಷನ್ ಬ್ಲೂ ಸ್ಟಾರ್’ ಗೆ ೩೯ ವರ್ಷ ಪೂರ್ಣ ಆಗಿರುವ ಪ್ರಯುಕ್ತ ಒಂದು ಮೆರವಣಿಗೆ ನಡೆಸಲಾಯಿತು. (ಜೂನ್ ೧೯೮೪ ರಲ್ಲಿ ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿರುವ ಖಲಿಸ್ಥಾನಿ ಭಯೋತ್ಪಾದಕರ ಮೇಲೆ ಸೈನ್ಯದಿಂದ ನಡೆಸಿರುವ ಕಾರ್ಯಾಚರಣೆಗೆ ‘ಆಪರೇಷನ್ ಬ್ಲೂ ಸ್ಟಾರ್’ ಎಂದು ಹೇಳಲಾಗಿತ್ತು.) ಈ ಮೆರವಣಿಗೆಯಲ್ಲಿ ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರನ್ನು ಅವರ ಸಿಖ್ಕ ಅಂಗರಕ್ಷಕನು ಹತ್ಯೆ ಮಾಡಿದ ಸ್ತಬ್ಧ ಚಿತ್ರ ಪ್ರದರ್ಶನ ಮಾಡಲಾಯಿತು. ಇದರ ಬಗ್ಗೆ ಟೀಕೆ ಟಿಪ್ಪಣಿಗಳು ಬಂದನಂತರ ಕೆನಡಾದಲ್ಲಿನ ಬ್ರಂಟನ್ ನಗರದ ಮಹಾಪೌರ ಫ್ಯಾಟ್ರಿಕ ಬ್ರೌನ್ ಇವರು ಸ್ತಬ್ಧ ಚಿತ್ರವನ್ನು ಬೆಂಬಲಿಸಿದರು. ಭಾರತದ ಮಾಜಿ ಪ್ರಧಾನಿಯ ಹತ್ಯೆಯ ಸ್ತಬ್ಧ ಚಿತ್ರಗಳನ್ನು ಮೆರವಣಿಗೆಯಲ್ಲಿ ತೋರಿಸುವುದು ಘಟನೆ ಕೆನಡಾದ ಕಾನೂನಿನ ಪ್ರಕಾರ ಅಪರಾಧವಲ್ಲ ಎಂದು ಅವರು ಹೇಳಿದರು.

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರ್ ಇವರು ಈ ಸ್ತಬ್ಧ ಚಿತ್ರದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಘಟನೆ ಎರಡೂ ದೇಶಗಳಲ್ಲಿನ ಸಂಬಂಧಕ್ಕಾಗಿ ಒಳ್ಳೆಯದಲ್ಲ. ಎಂದು ಹೇಳಿದರು’

ಅದರ ನಂತರ ಭಾರತದಲ್ಲಿನ ಕೆನಡಾದ ಉಚ್ಚಾಯುಕ್ತರು ಕ್ಯಾಮೆರನ್ ಮೇಕೆ ಇವರು ಟ್ವಿಟ್ ಮೂಲಕ ವಿಷಾದ ವ್ಯಕ್ತಪಡಿಸಿದ್ದರು. ಅವರು, ಕೆನಡಾದಲ್ಲಿ ದ್ವೇಷ ಮತ್ತು ಹಿಂಸೆಯ ಜೈಕಾರ ಮಾಡುವವರಿಗೆ ಇಲ್ಲಿ ಆಸ್ಪದ ಇಲ್ಲ ಎಂದು ಹೇಳಿದರು. (ಹೀಗೇಕೆ ಕೇವಲ ಹೇಳಿಕೆ ನೀಡಿ ಏನು ಪ್ರಯೋಜನವಿಲ್ಲ ? ಇದು ಕೆನಡಾ ಸರಕಾರದ ಕೃತಿಯಿಂದ ಕಾಣಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ಕೆನಡಾ ಎಂದರೆ ಖಲಿಸ್ಥಾನಿಗಳ ತವರು ಮನೆ ಆಗಿದೆ. ಇಲ್ಲಿಯ ಕೇವಲ ಸರಕಾರ ಅಷ್ಟೇ ಅಲ್ಲದೆ, ಅನೇಕ ರಾಜಕಾರಣಿಗಳು ಕೂಡ ಖಲಿಸ್ಥಾನಿಗಳನ್ನು ಬೆಂಬಲಿಸುತ್ತಾರೆ. ಇಲ್ಲಿಯ ಖಲಿಸ್ಥಾನವನ್ನು ಮುಗಿಸುವುದಕ್ಕೆ ಭಾರತವು ಕೆನಡಾದ ಮೇಲೆ ಒತ್ತಡ ಹೇರಲು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !