‘ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಇನ್ನೂ ದಾಳಿಗಳು ನಡೆಯುತ್ತಿವೆ’ (ಅಂತೆ) ! – ಅಮೇರಿಕಾ

ಭಾರತ ವಿರೋಧದಲ್ಲಿ ಪುನಃ ವಿಷ ಕಕ್ಕಿದ ಅಮೇರಿಕಾ !

ಅಮೇರಿಕಾದ ವಿದೇಶಾಂಗ ಸಚಿವ ಆಂಥೋನಿ ಬ್ಲಿಂಕೆನ್

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ವಿದೇಶಾಂಗ ಸಚಿವ ಆಂಥೋನಿ ಬ್ಲಿಂಕೆನ್ ಅವರು ೨೦೨೨ ರ ಧಾರ್ಮಿಕ ಸ್ವಾತಂತ್ರ್ಯದ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಮತ್ತೊಮ್ಮೆ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಆರೋಪ ಮಂಡಿಸಿದೆ. ಈ ನಿಟ್ಟಿನಲ್ಲಿ ಅಮೆರಿಕದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು, ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಇನ್ನೂ ನಡೆಯುತ್ತಿವೆ. ಭಾರತವು ಈ ವಿಷಯದಲ್ಲಿ ನಿರಂತರವಾಗಿ ಚಿಂತೆಗಿಡು ಮಾಡಿದ ದೇಶವಾಗಿದೆ. ಈ ವರದಿಯು ಭಾರತವನ್ನು ಟೀಕಿಸುವ ಮಾಹಿತಿಯನ್ನು ಒಳಗೊಂಡಿದೆ. ಅಲ್ಲಿ ಕ್ರೈಸ್ತರು, ಮುಸ್ಲಿಮರು, ಸಿಖ್ಖರು, ಹಾಗೆಯೇ ಹಿಂದೂ ದಲಿತರ ಮೇಲೆ ಉದ್ದೇಶಪೂರ್ವಕವಾಗಿ ದಾಳಿಗಳು ನಡೆಯುತ್ತಿವೆ. ಈ ಬಗ್ಗೆ ಅಮೆರಿಕಾದ ಸರಕಾರ ಭಾರತ ಸರಕಾರಕ್ಕೆ ಎಚ್ಚರಿಕೆ ನೀಡುತ್ತಲೇ ಇರುತ್ತದೆ.

ಸಂಪಾದಕೀಯ ನಿಲುವು

ಅಮೇರಿಕಾ ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ತಥಾಕಥಿತವಾಗಿ ಆಗುತ್ತಿರುವ ಅಲ್ಪಸಂಖ್ಯಾತರ ಮೇಲೆ ಆಕ್ರಮಣಕ್ಕೆ ಭಾರತವನ್ನು ಗುರಿಯಾಗಿಸಿಕೊಂಡಿದೆ. ಇದಕ್ಕಾಗಿ ಭಾರತ ಸರಕಾರ ಅಮೆರಿಕಕ್ಕೆ ಛೀಮಾರಿ ಹಾಕಿದರೂ ಅಮೆರಿಕದ ಬಾಲ ನೆಟ್ಟಗುತ್ತಿಲ್ಲ. ಈಗ ಭಾರತವೂ ಅಮೆರಿಕದಲ್ಲಿ ಕರಿಯರ ಮೇಲಾಗಿತ್ತಿರುವ ದಬ್ಬಾಳಿಕೆಯನ್ನು ಅಮೆರಿಕಕ್ಕೆ ಹೇಳಬೇಕಾಗಿದೆ !