ಚೀನಾದಿಂದ `ಪ್ರೆಸ್ ಟ್ರಸ್ಟ ಆಫ್ ಇಂಡಿಯಾ’ದ ಪತ್ರಕರ್ತರ ವೀಸಾ ಅವಧಿಯನ್ನು ಹೆಚ್ಚಿಸಲು ನಿರಾಕರಣೆ

  • ಚೀನಾದಲ್ಲಿ ಈಗ ಒಬ್ಬರೇ ಒಬ್ಬ ಭಾರತೀಯ ಪತ್ರಕರ್ತ ಇಲ್ಲ

  • ಭಾರತವೂ ಚೀನಾದ ಪತ್ರಕರ್ತರೊಂದಿಗೆ ಹೀಗೆಯೇ ನಡೆಸಿಕೊಳ್ಳುತ್ತಿದೆಯೆಂದು ಚೀನಾದ ಆರೋಪ !

(ವೀಸಾ ಎಂದರೆ ದೇಶದಲ್ಲಿ ನಿರ್ದಿಷ್ಟ ಕಾಲಾವಧಿಯವರೆಗೆ ವಾಸಿಸುವ ಅನುಮತಿ)

ಬೀಜಿಂಗ (ಚೀನಾ) – ಚೀನಾವು ಭಾರತದ ಏಕೈಕ ವರದಿಗಾರನನ್ನು ದೇಶವನ್ನು ಬಿಡುವಂತೆ ಆದೇಶಿಸಿದೆ. ಈ ವರದಿಗಾರ `ಪ್ರೆಸ್ ಟ್ರಸ್ಟ ಆಫ್ ಇಂಡಿಯಾ’ ಈ ಸುದ್ದಿಸಂಸ್ಥೆಯನಾಗಿದ್ದಾನೆ. ಚೀನಾ ಆ ವರದಿಗಾರನ ವಾಸ್ತವ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ನವೀಕರಣಗೊಳಿಸಿಲ್ಲ. ಈ ಹಿಂದೆ ಭಾರತದ 2 ವರದಿಗಾರರ ವೀಸಾ ಅವಧಿ ಹೆಚ್ಚಿಸಲು ಚೀನಾ ನಿರಾಕರಿಸಿತ್ತು. ಇದರಿಂದ ಇಬ್ಬರೂ ಭಾರತಕ್ಕೆ ಮರಳಿ ಬರಬೇಕಾಗಿತ್ತು. `ಭಾರತವೂ ನಮ್ಮ ವರದಿಗಾರರೊಂದಿಗೂ ಇದೇ ರೀತಿ ನಡೆಸಿಕೊಳ್ಳುತ್ತದೆ’ ಎಂದು ಚೀನಾ ಆರೋಪಿಸಿದೆ. ಭಾರತಕ್ಕಿಂತ ಮೊದಲು ಅಮೇರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳ ವರದಿಗಾರರಿಗೂ ಚೀನಾದಲ್ಲಿ ಇದೇ ರೀತಿಯಿಂದ ನಡೆಸಿಕೊಳ್ಳಲಾಗಿದೆ. ಡೊನಾಲ್ಡ ಟ್ರಂಪ ರಾಷ್ಟ್ರಾಧ್ಯಕ್ಷರಾಗಿದ್ದಾಗ ಚೀನಾದ ಇಂತಹ ಕೃತ್ಯಗಳಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿದ್ದರು.

ಎರಡೂ ದೇಶಗಳ ವರದಿಗಾರರ ವಿಷಯದ ಪ್ರಕರಣದ ಕುರಿತು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ ವೆನಬಿನ್ ಇವರು, ಇತ್ತೀಚಿನ ಕಾಲದಲ್ಲಿ ಭಾರತದಲ್ಲಿ ಚೀನಾದ ವರದಿಗಾರರೊಂದಿಗೆ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅಲ್ಲಿ ಭೇದಭಾವಕ್ಕೆ ತುತ್ತಾಗುತ್ತಿದ್ದಾರೆ. ಹೀಗಿದ್ದರೂ ನಮಗೆ ಭಾರತ ನಮ್ಮ ವರದಿಗಾರರಿಗೆ ವೀಸಾ ನೀಡುತ್ತದೆಯೆಂದು ಆಸೆಯಿದೆ. ನಮಗೆ ಭಾರತದಲ್ಲಿರುವ ನಮ್ಮ ವರದಿಗಾರರಿಗಾಗಿ ಉದ್ದೇಶಪೂರ್ವಕವಾಗಿ ನಿರ್ಮಾಣ ಮಾಡಿರುವ ತೊಂದರೆಗಳು ದೂರವಾಗಬಹುದು. ಎರಡೂ ದೇಶಗಳ ವರದಿಗಾರರಿಗೆ ಪರಸ್ಪರ ದೇಶದಲ್ಲಿ ಆರಾಮವಾಗಿ ಕೆಲಸ ಮಾಡಲು ಸಾಧ್ಯವಾಗಬಹುದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಭಾರತವು ಚೀನಾ ಪತ್ರಕರ್ತರೊಂದಿಗೆ ಅಯೋಗ್ಯವಾಗಿ ವರ್ತಿಸಿದ ಬಗ್ಗೆ ಮೊದಲು ಹೇಳಬೇಕು. ಭಾರತದಲ್ಲಿದ್ದು ಚೀನಾ ನಾಗರಿಕರು ಒಂದು ವೇಳೆ ಉದ್ಧಟತನದಿಂದ ವರ್ತಿಸಿ ಭಾರತೀಯ ನಿಯಮಗಳನ್ನು ಪಾಲಿಸದಿದ್ದರೆ, ಭಾರತವು ಅದನ್ನು ಹೇಗೆ ಸಹಿಸಿಕೊಳ್ಳಬೇಕು ?
  • ಚೀನಾದ ಸರ್ವಾಧಿಕಾರಿಯು ಇಡಿ ಜಗತ್ತಿಗೆ ತಿಳಿದಿರುವುದರಿಂದ ಇಂತಹ ಘಟನೆಗಳು ಆಶ್ಚರ್ಯಕರವೇನಲ್ಲ !