`ಭಾರತದ ವಿದೇಶಾಂಗ ಸಚಿವರಿಂದ ಮುಸಲ್ಮಾನ ವಿರೋಧಿ ಧೋರಣೆಗಳಿಗೆ ಪ್ರೋತ್ಸಾಹಿಸುತ್ತಾರೆ !’ (ಅಂತೆ) – ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ

ಭಾರತ ವಿರುದ್ಧ ವಿಷ ಕಕ್ಕಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ

ಇಸ್ಲಾಮಾಬಾದ – ಪಾಕಿಸ್ತಾನದ ವಿದೇಶಾಂಗ ಸಚಿವರು ಬಿಲಾವಲ ಭುಟ್ಟೋ ಝರದಾರಿಯವರು ಪಾಕಿಸ್ತಾನಕ್ಕೆ ಹೋಗುತ್ತಿದ್ದಂತೆ ಭಾರತದ ವಿರುದ್ಧ ವಿಷಕಾರಿದ್ದಾರೆ. ಭುಟ್ಟೋ ಇವರು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರನ್ನು ಟೀಕಿಸಿದ್ದಾರೆ. ಅವರು, `ಭಾರತೀಯ ಸಚಿವರು ಮುಸಲ್ಮಾನ ವಿರೋಧಿ ಧೋರಣೆಯನ್ನು ಪ್ರೋತ್ಸಾಹಿಸುವ ಭಾಜಪದ ಭಾವನೆಗಳನ್ನು ಪ್ರತಿನಿಧಿಸುತ್ತಾರೆ. ಹಾಗೆಯೇ ಭಾರತೀಯ ಆಡಳಿತಾರೂಢ ಪಕ್ಷ ಮತ್ತು `ಆರ್.ಎಸ್.ಎಸ್.’ ನನಗೆ ಮತ್ತು ಪ್ರತಿಯೊಬ್ಬ ಪಾಕಿಸ್ತಾನಿ ನಾಗರಿಕನನ್ನು `ಭಯೋತ್ಪಾದಕ’ ಎಂದು ಘೋಷಿಸಲು ಇಚ್ಛಿಸುತ್ತಿದೆ’ ಎಂದು ಹೇಳಿದರು. ಭುಟ್ಟೋ ಶಾಂಘೈ ಸಹಕಾರ ಸಂಘಟನೆಯ ಒಕ್ಕೂಟದ (ಎಸ್.ಸಿ.ಓ) ವಿದೇಶಾಂಗ ಸಚಿವರ 2 ದಿನಗಳ ಪರಿಷತ್ತಿನಲ್ಲಿ ಭಾಗವಹಿಸಲು ಮೇ 4 ರಂದು ಭಾರತಕ್ಕೆ ಬಂದಿದ್ದರು.

1. ಬಿಲಾವಲ ಭುಟ್ಟೋ ಇವರು, `ಕಾಶ್ಮೀರ ವಿಷಯದಲ್ಲಿ ನಾನು ಸದಸ್ಯ ದೇಶಗಳ ಎದುರು ತಾತ್ವಿಕವಾಗಿ ವಿಷಯವನ್ನು ಮಂಡಿಸಿದೆನು. ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಅಭಿಪ್ರಾಯದಲ್ಲಿ ಯಾವುದೇ ಬದಲಾವಣೆಯಿಲ್ಲ. ಎಲ್ಲಿಯವರೆಗೆ ಭಾರತ ತನ್ನ ಒಮ್ಮುಖದ ನಿರ್ಣಯವನ್ನು ಹಿಂಪಡೆಯುವುದಿಲ್ಲವೋ, ಅಲ್ಲಿಯವರೆಗೆ ಚರ್ಚೆ ನಡೆಯಲು ಸಾಧ್ಯವಿಲ್ಲ.

2. ಅಗಸ್ಟ 2019 ರಲ್ಲಿ ಜಮ್ಮೂ-ಕಾಶ್ಮೀರದ ವಿಶೇಷ ಮಾನ್ಯತೆಯನ್ನು ತೆಗೆದುಹಾಕಿದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಭಜಿಸಿರುವ ಭಾರತದ ನಿರ್ಣಯದ ಬಳಿಕ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಮತ್ತಷ್ಟು ಹದಗೆಟ್ಟಿದೆ.

3. ಭಾರತದ ವಿದೇಶಾಂಗ ಸಚಿವರಾದ ಜೈಶಂಕರ ಇವರು ಭುಟ್ಟೋರನ್ನು `ಭಯೋತ್ಪಾದಕರ ದೇಶದ ವಕ್ತಾರ’ ಎನ್ನುವ ಶಬ್ದಗಳಲ್ಲಿ ವರ್ಣಿಸಿದ್ದರು. ಹಾಗೆಯೇ ಕಾಶ್ಮೀರದ ವಿಷಯಗಳ ಮೇಲೆ ಭಾರತ ಪಾಕಿಸ್ತಾನದೊಂದಿಗೆ ಚರ್ಚಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದರು.

ಸಂಪಾದಕೀಯ ನಿಲುವು

ಭಾರತದ ವಿದೇಶಾಂಗ ಸಚಿವ ಜೈಶಂಕರ ಇವರು ಮೇಲಿಂದ ಮೇಲೆ ಪಾಕಿಸ್ತಾನಕ್ಕೆ ಅದರ ಯೋಗ್ಯತೆ ತೋರಿಸಿದ್ದಾರೆ. ಇದರಿಂದ ಭುಟ್ಟೋ ಅವರ ಹೆಸರಿನಿಂದ ಕೂಗಾಡುತ್ತಿರುವುದರಲ್ಲಿ ಆಶ್ಚರ್ಯವೇನಿದೆ ?