‘ಭಾರತದಲ್ಲಿನ ಮುಸಲ್ಮಾನರನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ !’ (ಅಂತೆ) – ಇಸ್ಲಾಮಿಕ್ ರಾಷ್ಟ್ರಗಳ ಹಿಂದೂ ದ್ವೇಷಿ ಸಂಘಟನೆಯಾದ ’OIC’ಯ ಆರೋಪ

  • ರಾಮನವಮಿಯ ಶೋಭಾಯಾತ್ರೆಯ ಸಮಯದಲ್ಲಿ ನಡೆದ ಹಿಂಸಾಚಾರದ ಪ್ರಕರಣ

  • ಇಸ್ಲಾಮಿಕ್ ರಾಷ್ಟ್ರಗಳ ಹಿಂದೂ ದ್ವೇಷಿ ಸಂಘಟನೆಯಾದ ’OIC’ಯ ಆರೋಪ

ನವ ದೆಹಲಿ – ಭಾರತದಲ್ಲಿ ರಾಮನವಮಿಯ ಶೋಭಾಯಾತ್ರೆಯ ಸಮಯದಲ್ಲಿ ನಡೆದ ಹಿಂಸಾಚಾರದ ಬಗ್ಗೆ ನಾವು ಕಳವಳ ವ್ಯಕ್ತ ಪಡಿಸುತ್ತಿದ್ದೇವೆ. ಭಾರತದಲ್ಲಿನ ಮುಸಲ್ಮಾನರನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ, ಎಂದು ‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್’ (OIC) ಈ ಇಸ್ಲಾಮಿ ದೇಶದ ಸಂಘಟನೆಗಳಿಂದ ಮನವಿ ಜಾರಿ ಮಾಡಿ ಹೇಳಿದೆ.

OICಯ ಕಾರ್ಯದರ್ಶಿಯಿಂದ ಜಾರಿ ಮಾಡಿದ ಮನವಿಯಲ್ಲಿ ಬಿಹಾರದ ಬಿಹಾರ ಶರೀಫನಲ್ಲಿ ಮಾರ್ಚ್ ೩೧ ರ ಹಿಂಸಾಚಾರದ ವಿಶೇಷವಾಗಿ ಉಲ್ಲೇಖ ಮಾಡಲಾಗಿದೆ. ಇದರಲ್ಲಿ, ಇಲ್ಲಿ ಹಿಂದೂಗಳ ಗುಂಪಿನಿಂದ ಮದರಸಗಳು ಮತ್ತು ಒಂದು ಗ್ರಂಥಾಲಯಕ್ಕೆ ಬೆಂಕಿ ಹಚ್ಚಲಾಗಿತ್ತು. ನಾವು ಇಂತಹ ಹಿಂಸಾಚಾರವನ್ನು ಖಂಡಿಸುತ್ತೇವೆ. ಭಾರತೀಯ ಅಧಿಕಾರಿಗಳು ಇಂತಹ ಘಟನೆಯಲ್ಲಿನ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಹಾಗೂ ದೇಶದಲ್ಲಿನ ಮುಸಲ್ಮಾನರಿಗೆ ಸುರಕ್ಷೆ, ಹಕ್ಕು ಮತ್ತು ಗೌರವ ನೀಡಲು ನಾವು ಕರೆ ನೀಡುತ್ತೇವೆ. ಈ ರೀತಿಯ ಹಿಂಸಾಚಾರದ ಘಟನೆ ಇದು ಇಸ್ಲಾಮಿದ್ವೇಷದ ಜ್ವಲಂತ ಉದಾಹರಣೆ ಇದೆ ಎಂದು ಹೇಳಿದೆ.

OICಯ ಮನವಿ ಎಂದರೆ ಮತಾಂಧ ಮಾನಸಿಕತೆಯ ನಿದರ್ಶನ ! – ಭಾರತದಿಂದ ಕಪಾಳ ಮೋಕ್ಷ

ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಅರಿಂದಮ ಬಾಗಚಿ ಇವರು OICಯ ಮನವಿಯನ್ನು ಟೀಕಿಸಿದರು. ಅವರು, ನಾವು ಭಾರತದ ಬಗ್ಗೆ OIC ಇಂದ ಜಾರಿ ಮಾಡಲಾದ ಮನವಿ ಖಂಡಿಸುತ್ತೇವೆ, OICಯ ಮನವಿ ಅದರ ಮತಾಂಧ ಮಾನಸಿಕತೆ ಮತ್ತು ಭಾರತ ವಿರೋಧಿ ನೀತಿಯ ಒಂದು ನಿದರ್ಶನವಾಗಿದೆ. ಭಾರತ ವಿರೋಧಿ ಶಕ್ತಿಯ ಪ್ರಭಾವಕ್ಕೆ ಒಳಗಾಗಿ OIC ತನ್ನ ಪ್ರತಿಷ್ಠೆಗೆ ಹಾನಿ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಈ ಇಸ್ಲಾಮಿ ದೇಶಗಳಲ್ಲಿ ಹಿಂದೂಗಳ ಮೇಲೆ ಪ್ರತಿದಿನ ನಡೆಯುವ ದಾಳಿಯ ಬಗ್ಗೆ, ಹಿಂದೂಗಳ ಹುಡುಗಿಯರ ಅಪಹರಣದ ಬಗ್ಗೆ OIC ಕಿವುಡು ಮತ್ತು ಕುರುಡಾಗೆ ಇರುತ್ತದೆಯೇ ?

ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ನಡೆಸಿದರೆ ಅದು ಯೋಗ್ಯ ಮತ್ತು ಹಿಂದೂಗಳು ಸ್ವರಕ್ಷಣೆಗಾಗಿ ಪ್ರಯತ್ನ ಮಾಡಿದರೆ, ತಕ್ಷಣ OIC ಗೆ ಮುಸಲ್ಮಾನರ ಮೇಲೆ ಕನಿಕರ ಬರುತ್ತದೆ, ಇದನ್ನು ತಿಳಿದುಕೊಳ್ಳಿ !

ಖಡ್ಗ, ಬಂದೂಕು, ಬಾಂಬ್ ಮುಂತಾದರ ಮೂಲಕ ಹಿಂದೂಗಳ ಮೇಲೆ ದಾಳಿ ಮಾಡುವ ಮುಸಲ್ಮಾನರು ಭಾರತದಲ್ಲಿ ಅಸುರಕ್ಷಿತವಾಗಿ ಇದ್ದಾರೆ, ಹೇಗೆ ಎಂದಾದರೂ ಯಾರಾದರೂ ಹೇಳಲು ಸಾಧ್ಯವೇ ?