ಪ್ರಧಾನಮಂತ್ರಿ ನರೇಂದ್ರ ಮೋದಿಯವರ 2 ದಿನಗಳ ಇಜಿಪ್ತ ಪ್ರವಾಸ

ಕೈರೊ (ಇಜಿಪ್ತ) – ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2 ದಿನಗಳ ಇಜಿಪ್ತ ಪ್ರವಾಸದ ಮೇಲೆ ತೆರಳಿದ್ದಾರೆ. ದ್ವಿಪಕ್ಷೀಯ ವ್ಯಾಪಾರದ ಸಂದರ್ಭದಲ್ಲಿ ಮೋದಿಯವರ ಪ್ರವಾಸವನ್ನು ಅತ್ಯಂತ ಮಹತ್ವದ್ದೆಂದು ತಿಳಿಯಲಾಗುತ್ತದೆ. ಇಜಿಪ್ತ ರಾಷ್ಟ್ರಪತಿ ಅಬ್ದೇಲ ಫತೇಹ ಎಲ್ ಸಿಸಿ ಈ ವರ್ಷದ ಭಾರತದ 74ನೇ ಗಣರಾಜ್ಯೋತ್ಸವ ದಿನದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಎರಡೂ ದೇಶಗಳ ಪ್ರಮುಖರ ನಡುವೆ 6 ತಿಂಗಳಿನಲ್ಲಿ ಎರಡನೇಯ ಸಭೆಯಾಗಲಿದೆ. ಮೋದಿಯವರು ಇಲ್ಲಿ ಭಾರತೀಯ ವಂಶಜ ಜನರನ್ನು ಭೇಟಿಯಾಗಲಿದ್ದಾರೆ. ಇದರೊಂದಿಗೆ ಪ್ರಧಾನಮಂತ್ರಿ ಮೋದಿಯವರು 1 ಸಾವಿರ ವರ್ಷಗಳಷ್ಟು ಹಳೆಯ ಅಲ್- ಹಕೀಮ್ ಶಿಯಾ ಮಸೀದಿಯನ್ನು ಭೇಟಿಯಾಗಲಿದ್ದಾರೆ.