ದಕ್ಷಿಣ ಭಾರತದ ನಟ ವಿಜಯ ಬಾಬು ಅವರನ್ನು ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಬಂಧನ

ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದಕ್ಷಿಣ ಭಾರತದ ನಟ ವಿಜಯ ಬಾಬು ಅವರನ್ನು ಕೊಚ್ಚಿಯಲ್ಲಿ ಬಂಧಿಸಲಾಗಿದೆ. ಏಪ್ರಿಲ ೨೦೨೨ ರಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ವಿಜಯ ಬಾಬು ವಿರುದ್ಧ ಪ್ರಕರಣ ದಾಖಲಾದ ಬಳಿಕ ಅವರು ದುಬೈಗೆ ಓಡಿಹೋಗಿದ್ದರು.

ಪಾಟ್ನಾ ವಿಶ್ವವಿದ್ಯಾಲಯದ ವಸತಿ ನಿಲಯದ ಮೇಲೆ ಪೊಲೀಸರ ದಾಳಿ ; ‘ಸಿಡಿಮದ್ದು’ (ಗನ ಪೌಡರ) ವಶ !

ಪೊಲೀಸರು ಪಾಟ್ನಾ ವಿಶ್ವವಿದ್ಯಾಲಯದ ವಸತಿ ನಿಲಯದ ಮೇಲೆ ದಾಳಿ ನಡೆಸಿ ‘ಸಿಡಿಮದ್ದು’ (ಗನ ಪೌಡರ) ವಶಪಡಿಸಿಕೊಂಡು ಹಲವಾರು ಯುವಕರನ್ನು ಬಂಧಿಸಿದ್ದಾರೆ. ಈ ಯುವಕರು ಪಟೇಲ ವಸತಿಗೃಹದಲ್ಲಿ ವಾಸಿಸುತ್ತಿದ್ದಾರೆ.

‘ಅಗ್ನಿವೀರರ ಸಹಾಯದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೈನ್ಯದ ಮೇಲೆ ನಿಯಂತ್ರಣ ಪಡೆಯಲಿದೆ ! (ಅಂತೆ)

ಸೇನೆಯ ‘ಅಗ್ನಿಪಥ’ ಯೋಜನೆಯಿಂದ ಎರಡುವರೆ ಲಕ್ಷ ಯುವಕರನ್ನು ಸೇವೆಗೆ ತೆಗೆದುಕೊಳ್ಳಬಹುದು ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಾಗಿರುವರು. ಇದು ಸಂಘದ ಗುಪ್ತತಂತ್ರವಾಗಿದೆ.

ಅಲೀಗಡ (ಉತ್ತರಪ್ರದೇಶ)ದಲ್ಲಿ ೯ ಕೋಚಿಂಗ್‌ ಸೆಂಟರ್‌ಗಳ ಸಂಚಾಲಕರ ವಿರುದ್ಧ ಅಪರಾಧ ದಾಖಲಾಗಿದೆ.

‘ಅಗ್ನಿಪಥ’ ಯೋಜನೆಯ ವಿರುದ್ಧ ಆಂದೋಲನ ಮಾಡಲು ವಿದ್ಯಾರ್ಥಿಗಳನ್ನು ಕೆರಳಿಸಲಾಯಿತು !

ಬಾಂಗ್ಲಾದೇಶದ ಫರಿದಪೂರದಲ್ಲಿ ನೂಪುರ ಸಹಾ ಎಂಬ ಗರ್ಭಿಣಿ ಹಿಂದೂ ಮಹಿಳೆಯ ಹತ್ಯೆ

ಇಲ್ಲಿ ನೂಪುರ ಸಹಾ ಎಂಬ ಹಿಂದೂ ಮಹಿಳೆಯ ಮೃತದೇಹವು ಕಂಡುಬಂದಿದೆ. ನೂಪುರ ಸಹಾರವರ ಮೇಲೆ ಬಲಾತ್ಕಾರ ಮಾಡಿ ಆಕೆಯ ಹತ್ಯೆ ಮಾಡಿರುವುದಾಗಿ ಹೇಳಲಾಗಿದೆ. ಈ ಮಹಿಳೆಯು ೬ ತಿಂಗಳ ಗರ್ಭಿಣಿಯಾಗಿದ್ದಳು ಎಂಬ ಮಾಹಿತಿಯನ್ನು ‘ವಾಯ್ಸ್‌ ಆಫ್‌ ಬಾಂಗ್ಲಾದೇಶಿ ಹಿಂದೂ’ನಲ್ಲಿ ನೀಡಲಾಗಿದೆ.

ಜಗತ್ತಿನಲ್ಲಿ ಗಲ್ಲು ಶಿಕ್ಷೆ ನೀಡುವ ದೇಶಗಳ ಸೂಚಿಯಲ್ಲಿ ಚೀನಾವು ಮುಂಚೂಣಿಯಲ್ಲಿದೆ ! – ಅಮ್ನೆಸ್ಟಿ ಇಂಟರನ್ಯಾಶನಲ್‌

ಈ ಸಂಘಟನೆಯ ವರದಿಯಲ್ಲಿ ‘ಈ ಸೂಚಿಯಲ್ಲಿ ಚೀನಾ, ಉತ್ತರ ಕೋರಿಯಾ ಹಾಗೂ ವಿಯೆತನಾಮ ದೇಶಗಳ ಸೂಚಿಯನ್ನು ಸೇರಿಸಲಾಗಿಲ್ಲ. ಏಕೆಂದರೆ ಈ ದೇಶಗಳ ಅಪರಾಧಿಗಳಿಗೆ ಗಲ್ಲು ಹಾಗೂ ಗಲ್ಲು ಶಿಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವುದಿಲ್ಲ

ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಜಾಗದಲ್ಲಿ ೨ ಮಹಿಳೆಯರಿಂದ ನಮಾಜ ಪಠಣ

ಮಸೀದಿಯಲ್ಲಿ ಮಹಿಳೆಯರಿಗೆ ನಮಾಜ ಮಾಡಲು ಅವಕಾಶವಿಲ್ಲದಿರುವಾಗ ಅನುಮತಿಯಿಲ್ಲದೆ ನ್ಯಾಯಾಲಯದಲ್ಲಿ ನಮಾಜು ಮಾಡಬಹುದೇ?

ಉತ್ತರ ಪ್ರದೇಶದಲ್ಲಿ ಮಸೀದಿಯಲ್ಲಿ ಗರ್ಭಿಣಿ ಪತ್ನಿಯನ್ನು ಕೊಂದ ಇಮಾಮ್‌ನ ಬಂಧನ

ಉತ್ತರ ಪ್ರದೇಶದ ಸಹರಾನ್‌ಪುರದ ಮಸೀದಿಯೊಂದರಲ್ಲಿ ಗರ್ಭಿಣಿ ಪತ್ನಿಯನ್ನು ಕೊಂದ ಇಮಾಮ್‌ನನ್ನು ಪೊಲೀಸರು ಇತ್ತಿಚೆಗೆ ಬಂಧಿಸಿದ್ದಾರೆ. ಆರೋಪಿ ಇಮಾಮ್ ಉಸ್ಮಾನ್ ತಪ್ಪೊಪ್ಪಿಕೊಂಡಿದ್ದಾನೆ. ಉಸ್ಮಾನ್, ಪತ್ನಿ ಹಿನಾ ೮ ತಿಂಗಳ ಗರ್ಭಿಣಿಯಾಗಿದ್ದಳು.

ಮದುವೆಯ ಆಮಿಷವೊಡ್ಡಿ ಯುವತಿಯ ಮಾನಭಂಗ ಮಾಡಿದ ಪ್ರಕರಣದಲ್ಲಿ ರಾಜಸ್ಥಾನದ ಕಾಂಗ್ರೆಸ ಸಚಿವರ ಮಗ ಪರಾರಿ

ರಾಜಸ್ಥಾನದ ಮಂತ್ರಿ ಮಹೇಶ ಜೋಶಿಯವರ ಮಗ ರೋಹಿತ ಜೋಶಿ ಇವನ ಮೇಲೆ ಓರ್ವ ೨೩ ವರ್ಷದ ಯುವತಿಗೆ ಮದುವೆಯ ಆಮಿಷವೊಡ್ಡಿ ಬಲಾತ್ಕಾರ ಮಾಡಿದ ಪ್ರಕರಣ ದೆಹಲಿಯಲ್ಲಿ ದಾಖಲಾಗಿದೆ.

ಮಥುರಾದಲ್ಲಿನ ಶಾಹಿ ಈದಗಾಹ ಮಸೀದಿಯ ಸಮೀಕ್ಷೆಗಾಗಿ ಮನವಿಯನ್ನು ಮಾಡುವ ಅರ್ಜಿಯನ್ನು ನ್ಯಾಯಾಲಯವು ಸ್ವೀಕರಿಸಿದೆ !

ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ನಂತರ ಮಥುರಾದಲ್ಲಿನ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದಗಾಹ ಮಸೀದಿಯ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಮನವಿ ಮಾಡುವ ಅರ್ಜಿಯನ್ನು ಇಲ್ಲಿನ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.