|
ಅಂಬೇಡ್ಕರನಗರ (ಉತ್ತರಪ್ರದೇಶ) – ಇಲ್ಲಿಯ ಸಲಾವುದ್ದೀನ್ ಅಹಮದ್ ಸಿದ್ದಕ್ಕಿಯು ತನಗೆ ಇತರ ಇಬ್ಬರು ಮುಸಲ್ಮಾನ ಯುವಕರಿಂದ ‘ಸರ ತನ ಸೇ ಜುದಾ’ದ (ದೇಹದಿಂದ ಮುಂಡ ಬೇರ್ಪಡಿಸುವುದು) ಈ ಬೆದರಿಕೆ ನೀಡಲಾಗಿದೆ ಎಂದು ಆರೋಪಿಸಿದ್ದಾನೆ. ಸಲಾವುದ್ದೀನ್ ಇವನು ‘ಇಶ್ತಿಯಾಕ್ ಅಹಮದ್ ಇವನಿಗೆ ಗಣೇಶ ಚತುರ್ಥಿಯ ಶುಭಾಶಯಗಳು ನೀಡಿರುವುದರಿಂದ ನನಗೆ ಬೆದರಿಕೆ ಹಾಕಿದ್ದಾರೆ’ ಎಂದು ದಾವೆ ಮಾಡಿದ್ದಾನೆ. ಸಿರಾಜ್ ಖಾನ್ ಮತ್ತು ಮಹಮ್ಮದ್ ಮುಶೀರ ಇವರಿಂದ ಈ ಬೆದರಿಕೆ ನೀಡಲಾಗಿದೆ ಎಂದು ಅವನು ಹೇಳಿದನು. ಇನ್ನೊಂದು ಕಡೆಗೆ ಪೊಲೀಸರು ಮಾತ್ರ ಸಲಾವುದ್ದಿನಿನ ಆರೋಪ ತಳ್ಳಿ ಹಾಕಿ ದುಡ್ಡಿನ ವ್ಯವಹಾರದದಿಂದ ಸಲವುದ್ದೀನ್ ಮತ್ತು ಸಿರಾಜ ಇವರಲ್ಲಿ ವಾದ ವಿವಾದ ನಡೆದಿದೆ ಎಂದು ಹೇಳಿದರು.
मुस्लिम युवक को सर तन से जुदा करने की मिली धमकी…गणेश चतुर्थी पर बधाई संदेश भेजने पर मुस्लिम समुदाय नाराज#Sartansejuda @myogiadityanath @Uppolice @ambedkarnagrpol https://t.co/ALXgvZPg45
— Sudarshan News (@SudarshanNewsTV) September 12, 2022
ಈ ಪ್ರಕರಣದಲ್ಲಿ ಪೊಲೀಸರು ಇಶ್ತಿಯಾಕ್ ಅಹಮದ್, ಸಿರಾಜ್ ಖಾನ್ ಮತ್ತು ಮಹಮ್ಮದ್ ಮುಶಿರ್ ಇವರ ವಿರುದ್ಧ ದೂರು ದಾಖಲಿಸಿ ಕೊಂಡು ಸಲಾಉದ್ದಿನನಿಗೆ ಅವನ ಬೇಡಿಕೆಯ ಮೇಲೆ ಅವನಿಗೆ ಮನೆಯಲ್ಲಿ ರಕ್ಷಣೆ ನೀಡಲಾಗಿದೆ; ಆದರೆ ಅವನು ಮಾಡಿರುವ ಆರೋಪ ಸುಳ್ಳು ಎಂದು ಸಹ ಹೇಳಲಾಗುತ್ತಿದೆ.