‘ಮದರಸಾದ ಸಮೀಕ್ಷೆಯ ನೋಟಿಸ್ ತೆಗೆದುಕೊಂಡು ಬರುವವರ ಸ್ವಾಗತ ಚಪ್ಪಲಿಯಿಂದ ಮಾಡಿರಿ !’ (ಅಂತೆ)

‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ ನ ಅಧ್ಯಕ್ಷ ಮೌಲಾನ ಸಾಜಿದ ರಾಶಿದೀಯಿಂದ ಮುಸಲ್ಮಾನರಿಗೆ ಪ್ರಚೋದನೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿನ ಭಾಜಪ ಸರಕಾರದಿಂದ ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆಯನ್ನು ಅಕ್ಟೋಬರ್ ೫ ರಿಂದ ನಡೆಸಲಾಗುವುದು. ಇದಕ್ಕೆ ಕೆಲವು ಮುಸಲ್ಮಾನ ಸಂಘಟನೆ, ಪಕ್ಷ ಮತ್ತು ನಾಯಕರು ವಿರೋಧಿಸುತ್ತಿದ್ದಾರೆ. ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ನ ಅಧ್ಯಕ್ಷ ಮೌಲಾನ ಸಾಜಿದ ರಶೀದಿ ಅವರು ಇದನ್ನು ವಿರೋಧಿಸುತ್ತಾ, ‘ಮುಸಲ್ಮಾನರು ಸಹಿಸಿಕೊಳ್ಳುತ್ತಿದ್ದಾರೆ. ಯಾವಾಗ ಮುಸಲ್ಮಾನರು ಅವರ ಹಕ್ಕಿಗಾಗಿ ಎದ್ದು ನಿಲ್ಲುವರು, ಆಗ ಸರಕಾರ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಯಾರು ಸಮೀಕ್ಷೆಗಾಗಿ ನೋಟಿಸ್ ತೆಗೆದುಕೊಂಡು ಬರುವರೋ ಅವರನ್ನು ಚಪ್ಪಲಿಯಿಂದ ಸ್ವಾಗತಿಸಿ’, ಎಂದು ಕರೆ ನೀಡಿದ್ದಾರೆ.

ಮೌಲಾನ ಸಾಜಿದ್ ರಶೀದಿ ಅವರ ಈ ಆವಾಹನೆಗೆ ರಾಜ್ಯದ ಮಾಜಿ ಮಂತ್ರಿ ಮತ್ತು ಭಾಜಪದ ನಾಯಕ ಮೋಹಸೀನ್ ರಜಾ ಇವರು ಪ್ರತ್ಯುತ್ತರ ನೀಡುತ್ತಾ, ರಶೀದಿ ಇವರಂತಹ ಜನರ ಹೇಳಿಕೆ ಮದರಸಾಗಳಿಗೆ ಪ್ರಚೋದನೆ ನೀಡುವುದಾಗಿದೆ. ಸರಕಾರ ಸಮೀಕ್ಷೆ ನಡೆಸಿ ಮದರಸಗಳಿಗೆ ಒಳ್ಳೆಯದನ್ನೇ ಮಾಡಲು ಇಚ್ಚಿಸುತ್ತಿದೆ ಆದರೆ ಈ ರೀತಿ ಹೇಳಿಕೆ ನೀಡುತ್ತಿದ್ದರೆ, ಸರಕಾರ ಕಠೋರವಾಗಿ ವರ್ತಿಸ ಬೇಕಾಗಬಹುದು. ಈ ಹೇಳಿಕೆಯ ಬಗ್ಗೆ ರಶೀದಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಕಾನೂನನ್ನು ಕೈಯಲ್ಲೆತ್ತಿಕೊಂಡು ಪ್ರಚೋದನೆ ನೀಡುವವರ ಮೇಲೆ ಸರಕಾರ ತಕ್ಷಣ ಕ್ರಮ ಕೈಗೊಂಡು ದೂರು ದಾಖಲಿಸಿ ಕಾರಾಗೃಹಕ್ಕೆ ಅಟ್ಟಬೇಕು !