ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇವರಿಗೆ ಗಲ್ಲು ಶಿಕ್ಷೆ ಆಗಬೇಕೆಂದು, ಯೋಜಿಸಲಾಗಿದ್ದ ಸಂಚು !

  • ೨೦೦೨ ನೇ ಇಸ್ವಿಯಲ್ಲಾದ ಗುಜರಾತ ದಂಗೆಯ ಪ್ರಕರಣ

  • ತಿಸ್ತಾ ಸೇಟಲವಾಡ ಮತ್ತು ಇನ್ನಿಬ್ಬರ ಮೇಲಿನ ಆರೋಪ ಪತ್ರದಲ್ಲಿ ದಾವೆ !

 

ನರೇಂದ್ರ ಮೋದಿ ಮತ್ತು ತಿಸ್ತಾ ಸೆಟಲವಾಡ

ಕರ್ಣಾವತಿ (ಗುಜರಾತ) – ಗುಜರಾತನ ನಿವೃತ್ತ ಪೊಲೀಸ ಅಧಿಕಾರಿ ಆರ್. ಬಿ. ಶ್ರೀ ಕುಮಾರ, ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್ಟ ಮತ್ತು ಸಾಮಾಜಿಕ ಕಾರ್ಯಕರ್ತೆ ತಿಸ್ತಾ ಸೆಟಲವಾಡ ಇವರ ಮೇಲೆ ೨೦೦೨ ನೇ ಇಸ್ವಿಯಲ್ಲಿ ಗುಜರಾತನಲ್ಲಾದ ದಂಗೆಯ ಪ್ರಕರಣದಲ್ಲಿ ಪೊಲೀಸರ ವಿಶೇಷ ಅನ್ವೇಷಣೆ ದಳದಿಂದ ೧೦೦ ಪುಟದ ಆರೋಪ ಪತ್ರ ದಾಖಲಿಸಲಾಗಿತ್ತು. ಇದರಲ್ಲಿ ಈ ಮೂರು ಜನರು ಗುಜರಾತನ ತತ್ಕಾಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇವರಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಸಂಚು ಹೂಡಿದ್ದರು. ಸರಕಾರದ ಭಾಗವಾಗಿದ್ದರೂ ಆರ್. ಬಿ. ಶ್ರೀ ಕುಮಾರ ಮತ್ತು ಸಂಜೀವ್ ಭಟ್ಟ ಇವರು ತಿಸ್ತಾ ಸೆಟಲವಾಡ ಇವರಿಗಾಗಿ ನಕಲೀ ಕಾಗದ ಪತ್ರಗಳನ್ನು ತಯಾರಿಸಿದ್ದರು ಮತ್ತು ನಂತರ ಅವುಗಳನ್ನು ಅಧಿಕೃತ ಕಾಗದ ಪತ್ರಗಳಲ್ಲಿ ಸೇರಿಸಿದ್ದರು ಎಂದು ಹೇಳಲಾಗಿದೆ.


ಆರೋಪ ಪತ್ರದಲ್ಲಿನ ದಾವೆಯ ಪ್ರಕಾರ ಆರೋಪಿಗಳಿಗೆ ನರೇಂದ್ರ ಮೋದಿ ಅವರ ರಾಜಕೀಯ ಕಾರುಬಾರನ್ನು ಮುಗಿಸಿ ಬಿಡಲಿಕ್ಕಿತ್ತು ಮತ್ತು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದಿತ್ತು. ನಕಲೀ ಕಾಗದ ಪತ್ರಗಳು ಮತ್ತು ಪ್ರತಿಜ್ಞಾಪತ್ರ ತಯಾರಿಸಲು ನ್ಯಾಯವಾದಿಗಳ ಒಂದು ಸೈನ್ಯವನ್ನೇ ಅವರು ತಯಾರು ಮಾಡಿದ್ದರು. ದಂಗೆಯಲ್ಲಿನ ಸಂತ್ರಸ್ತರಿಗೆ ಮೋಸ ಮಾಡಿ ಬಲವಂತವಾಗಿ ನಕಲೀ ಕಾಗದ ಪತ್ರಗಳ ಮೇಲೆ ಸಹಿ ಮಾಡಿಸಿಕೊಳ್ಳಲಾಗಿತ್ತು. ಕಾಗದ ಪತ್ರಗಳು ಇಂಗ್ಲಿಷಿನಲ್ಲಿ ಇದ್ದುದರಿಂದ ಸಂತ್ರಸ್ತರಿಗೆ ಯಾವ ಕಾಗದ ಪತ್ರಗಳ ಮೇಲೆ ಸಹಿ ಮಾಡುತ್ತಿದ್ದೇವೆ ಎಂಬ ಕಲ್ಪನೆಯಿರಲಿಲ್ಲ. ತಿಸ್ತಾ ಸೆಟಲವಾಡ ಇವರು ‘ಸಹಾಯ ಮಾಡದೆ ಇದ್ದರೆ ಪರಿಣಾಮ ಅನುಭವಿಸ ಬೇಕಾಗುವುದು’ ಎಂದು ಸಂತ್ರಸ್ತರಿಗೆ ಬೆದರಿಕೆ ಹಾಕಿದ್ದರು ಎಂದು ಇದರಲ್ಲಿ ಹೇಳಲಾಗಿದೆ.