ಕೊಯಿಮತ್ತೂರು (ತಮಿಳುನಾಡು) ಇಲ್ಲಿಯ ಭಾಜಪಾದ ಕಾರ್ಯಾಲಯದ ಹತ್ತಿರ ಕೆರೋಸಿನ್ ಬಾಂಬ್ ಎಸೆತ !

ಕೊಯಿಮತ್ತೂರು (ತಮಿಳುನಾಡು) – ಇಲ್ಲಿಯ ಭಾಜಪಾದ ಕಾರ್ಯಾಲಯದ ಹತ್ತಿರ ಸಪ್ಟೆಂಬರ್ ೨೨ ರ ರಾತ್ರಿ ಅಜ್ಞಾತರಿಂದ ಕೆರೋಸಿನ್ ಬಾಂಬ್ ಎಸೇಲಾಯಿತು. ಇದರಲ್ಲಿ ಯಾವುದೇ ಜೀವ ಅಥವಾ ಆಸ್ತ್ತಿ ಹಾನಿ ಆಗಿಲ್ಲ; ಆದರೆ ಈ ಘಟನೆಯಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಾಂಬ್ ಎಸೆಯುವವರು ದ್ವಿಚಕ್ರ ವಾಹನದಲ್ಲಿ ಬಂದಿದ್ದರು. ಪೊಲೀಸರು ನೀಡಿದ ಮಾಹಿತಿಯನುಸಾರ ವಿ.ಕೆ.ಕೆ. ಮೆನನ್ ಮಾರ್ಗದಲ್ಲಿ ಕೆಲವರು ಅನುಮಾನಾಸ್ಪದ ಜನರು ತಿರುಗುತ್ತಿರುವುದರ ಮಾಹಿತಿ ದೊರೆತಿದೆ. ಸಿಸಿಟಿವಿಯ ಆಧಾರದ ಮೇಲೆ ಅವರ ಗುರುತು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.