ರಾಜಸಮಂದ(ರಾಜಸ್ಥಾನ)ದಲ್ಲಿ ದೇವಸ್ಥಾನದ ಗೋಡೆಯನ್ನು ಬೀಳಿಸಿದ್ದರಿಂದ ಹಿಂದುತ್ವನಿಷ್ಠರು ಆಕ್ರೋಶಗೊಂಡಿದ್ದಾರೆ !

ರಾಜಸಮಂದ (ರಾಜಸ್ಥಾನ) – ಇಲ್ಲಿನ ಸ್ಥಳೀಯ ಆಡಳಿತವು ಸಪ್ಟೆಂಬರ್‌ ೧೬ರಂದು ಸಂಜೆ ರೆಲಮಗರಾ ಕ್ಷೇತ್ರದಲ್ಲಿರುವ ಪಂಚಮುಖಿ ಹನುಮಾನ ದೇವಸ್ಥಾನದ ಒಂದು ಗೋಡೆಯನ್ನು ಕೆಡವಿದೆ. ಆಡಳಿತವು ‘ಈ ಗೋಡೆಯನ್ನು ಅತಿಕ್ರಮಣವಾದ ಭೂಮಿಯಲ್ಲಿ ಕಟ್ಟಲಾಗಿರುವುದಿಂದ ಈ ಕಾರ್ಯಾಚರಣೆಯನ್ನು ಮಾಡಲಾಗಿದೆ’ ಎಂದು ಹೇಳಿದೆ. ಈ ಸಮಯದಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ಘಟನಾಸ್ಥಳವನ್ನು ತಲುಪಿ ವಿರೋಧ ವ್ಯಕ್ತಪಡಿಸಿದವು. ಘಟನಾಸ್ಥಳದಲ್ಲಿ ಉಪಸ್ಥಿತರಿದ್ದ ಪೊಲೀಸರು ಹಿಂದುತ್ವನಿಷ್ಠರನ್ನು ವಶಕ್ಕೆ ಪಡೆದಾಗ ಅದಕ್ಕೆ ಬಹಳ ವಿರೋಧವಾಯಿತು. ಇದರಿಂದಾಗಿ ಪೊಲೀಸರು ವಶಕ್ಕೆ ಪಡೆದವರನ್ನು ಬಿಟ್ಟರು. ಪೊಲೀಸರು ಹಿಂದುತ್ವನಿಷ್ಠರನ್ನು ವಶಕ್ಕೆ ಪಡೆದಿರುವ ಆರೋಪವನ್ನು ತಿರಸ್ಕರಿಸಿದ್ದಾರೆ.


ನಾಥದ್ವಾರದ ಪೊಲೀಸ ಅಧಿಕಾರಿಯಾದ ಛಗನ ಪುರೋಹಿತರವರು, ದೇವಸ್ಥಾನದ ಹತ್ತಿರ ಅಂಗಡಿಗಳನ್ನು ನಿರ್ಮಿಸಲಾಗಿದ್ದರಿಂದ ಕೆಲವರು ದೇವಸ್ಥಾನದ ಪರಿಸರದಲ್ಲಿ ಅತಿಕ್ರಮಣವಾಗಬಾರದು ಎಂಬ ಉದ್ದೇಶದಿಂದ ಈ ಗೋಡೆಯನ್ನು ನಿರ್ಮಿಸಿದ್ದರು. ಸ್ಥಳೀಯ ಆಡಳಿತವು ಇದರ ಮೇಲೆ ಕಾರ್ಯಾಚರಣೆಯನ್ನು ಮಾಡಿ ಅದನ್ನು ಕೆಡವಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ದೇಶದಾದ್ಯಂತ ಅನೇಕ ಕಡೆಗಳಲ್ಲಿ ಅಲ್ಪಸಂಖ್ಯಾತರು ಅನಧೀಕೃತ ಧಾರ್ಮಿಕ ಸ್ಥಳಗಳನ್ನು ಕಟ್ಟಿದ್ದಾರೆ. ನಗರಗಳಲ್ಲಿ ರಸ್ತೆಗಳ ನಡುಮಧ್ಯದಲ್ಲಿಯೇ ಧಾರ್ಮಿಕ ಸ್ಥಳಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳ ವಿರುದ್ಧ ಯಾವುದೇ ಸರಕಾರವು ಏನೂ ಮಾಡುತ್ತಿಲ್ಲ. ಇದರಿಂದಾಗಿ ಯಾರಾದರೂ ‘ಹಿಂದೂಗಳು ಅತೀಸಹಿಷ್ಣುಗಳಾಗಿರುವುದರಿಂದಲೇ ಪೊಲೀಸರು ಹಾಗೂ ಸರಕಾರ ಅವರ ಮೇಲೆ ಕಾನೂನಿನ ದೊಣ್ಣೆಯನ್ನು ಹೊಡೆಯುತ್ತಿದೆ’, ಎಂದು ಹೇಳಿದರೆ ಅದರಲ್ಲಿ ತಪ್ಪೇನು ?