ಹಿಂದೂ ಯುವತಿಯೊಬ್ಬಳನ್ನು ಆಕೆಯ ಮನೆಗೆ ನುಗ್ಗಿ ಥಳಿಸಿದ್ದರಿಂದ ಆಕೆ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮುಸಲ್ಮಾನರ ಬಂಧನ

  • ಉತ್ತರ ಪ್ರದೇಶದ ಮುಸಲ್ಮಾನ ಬಹುಸಂಖ್ಯಾತ ಹಳ್ಳಿಯಲ್ಲಿನ ಘಟನೆ !

  • ನಿರ್ಲಕ್ಷ್ಯ ತೋರಿದ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅಮಾನತು !

ಲಖಿಂಪುರ್ ಖಿರಿ (ಉತ್ತರ ಪ್ರದೇಶ) – ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಮುಸೆಪುರ್ ಗ್ರಾಮದಲ್ಲಿ ಹಿಂದೂ ಹುಡುಗಿಯನ್ನು ಥಳಿಸಿದ್ದರಿಂದ ಆಕೆ ಮೃತಪಟ್ಟಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲೀಮುದ್ದೀನ್ ಮತ್ತು ಆಸಿಫ್ ಅಲಿ ಇಬ್ಬರನ್ನೂ ಬಂಧಿಸಿದ್ದಾರೆ. ಸೆಪ್ಟೆಂಬರ್ ೧೨ ರಂದು ಅವಳನ್ನು ಥಳಿಸಲಾಯಿತು. ಇದರಿಂದ ಅವಳು ಗಾಯಗೊಂಡಳು. ಚಿಕಿತ್ಸೆ ಪಡೆಯುತ್ತಿದ್ದಾಗ ಅವಳು ಸೆಪ್ಟೆಂಬರ್ ೧೬ ರಂದು ಸಾವನ್ನಪ್ಪಿದಳು. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುನಿಲ ಕುಮಾರ ಅವರನ್ನು ಅಮಾನತುಗೊಳಿಸಲಾಗಿದೆ. (ಅವರನ್ನು ಅಮಾನತು ಮಾಡುವುದು ಮಾತ್ರವಲ್ಲ, ಅವರನ್ನು ವಜಾ ಮಾಡಿ ಜೈಲಿಗೆ ತಳ್ಳಬೇಕು ! – ಸಂಪಾದಕರು) ಈಗ ಹಳ್ಳಿಯಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ.

ಸಂಪಾದಕೀಯ ನಿಲುವು

ಮುಸಲ್ಮಾನ ಬಹುಸಂಖ್ಯಾತರಾದಾಗ ಏನಾಗಬಹುದು ಎಂಬುದನ್ನು ಜಾತ್ಯಾತೀತವಾದಿಗಳು ಗಮನಿಸಿದ ದಿನವೇ ಸುದಿನ !