ಮುರಾದಾಬಾದ (ಉತ್ತರಪ್ರದೇಶ) ಇಲ್ಲಿಯ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ

ಹುಡುಗಿಯನ್ನು ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಓಡಿಸಿದ್ದು !

ಮುರಾದಾಬಾದ (ಉತ್ತರಪ್ರದೇಶ) – ಇಲ್ಲಿಯ ಕೆಲವು ಕಾಮುಕ ಮತಾಂಧರು ಕ್ರೂರತೆಯ ಎಲ್ಲಾ ಮಿತಿಯನ್ನು ಉಲ್ಲಂಘಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಭೋಜಪುರದ ಇಸ್ಲಾಂ ನಗರದಲ್ಲಿನ ಕೆಲವು ಮತಾಂಧರು ಒಬ್ಬ ೧೫ ವರ್ಷ ವಯಸ್ಸಿನ ಅಪ್ರಾಪ್ತ ಹುಡುಗಿಯನ್ನು ಅಪಹರಿಸಿದರು. ಆಕೆಯನ್ನು ಕಾಡಿಗೆ ಕೊಂಡೊಯ್ದು ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆಸಿದರು. ಅದರ ನಂತರ ಕೂಡ ಕಾಮುಕರ ಕಾಮುಕತೆ ನಿಲ್ಲಲಿಲ್ಲ. ಆ ಬಲಾತ್ಕಾರಿಗಳು ಆ ಅಮಾಯಕ ಅಪ್ರಾಪ್ತ ಹುಡುಗಿಯನ್ನು ವಿವಸ್ತ್ರಳಾಗಿ ರಸ್ತೆಯ ಮೇಲೆ ಓಡುವಂತಹ ಅನಿವಾರ್ಯತೆಯನ್ನು ಒಡ್ಡಿದರು. ಹಾಗೆ ವಿವಸ್ತ್ರಳಾಗಿ ಆಕೆ ಕಿರುಚುತ್ತಾ ರಸ್ತೆಯ ಮೇಲೆ ಓಡುತ್ತಿರುವಾಗ ಕೂಡ ಬಲಾತ್ಕಾರಿ ನೌಶೆ ಅಲಿ, ಇಮ್ರಾನ್ ಮುಂತಾದವರು ಆಕೆಯನ್ನು ಚುಡಾಯಿಸುವುದು ಮುಂದುವರೆಸಿದ್ದರು. ಮನಸನ್ನು ಕದಡಿಸುಂತಹ ಘಟನೆಯ ವಿಡಿಯೋ ಟ್ವಿಟ್ಟರಿನಲ್ಲಿ ಪ್ರಸಾರಗೊಂಡಿದೆ.

ಈ ಪ್ರಕರಣದಲ್ಲಿ ಪೊಲೀಸ ಅಧಿಕಾರಿಯ ಆದೇಶದ ಮೇರೆಗೆ ಮುರಾದಾಬಾದ್ ಪೊಲೀಸರು ಕಾಮುಕರ ವಿರುದ್ಧ ಸಾಮೂಹಿಕ ಬಲಾತ್ಕಾರದ ಆರೋಪ ದಾಖಲಿಸಿದರು. ಪೊಲೀಸರು ನೌಶೆ ಅಲಿಯನ್ನು ಬಂಧಿಸಿದ್ದಾರೆ ಈ ಪ್ರಕರಣದಲ್ಲಿ ಮುಂದಿನ ಅನ್ವೇಷಣೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಇದು ಮಾನವೀಯತೆಗೆ ಮಸಿ ಬಳಿಯುವ ಘಟನೆಯಾಗಿದೆ. ಇದರಿಂದ ಕಾಮುಕ ಮತಾಂಧರ ರಾಕ್ಷಸಿ ಮಾನಸಿಕತೆಯೇ ಕಂಡು ಬರುತ್ತದೆ !