ಮೇಘಾಲಯದಲ್ಲಿ ಸಮೂಹದಿಂದ ಗಡಿ ಭದ್ರತಾ ಪಡೆಯ ಠಾಣೆಯ ಮೇಲೆ ದಾಳಿ

ಮೇಘಾಲಯದ ಪೂರ್ವಕ್ಕೆ ಖಾಸಿ ಹಿಲ್ಸ್ ಜಿಲ್ಲೆಯ ಉಮಸಿಎಮ್ ಗ್ರಾಮದಲ್ಲಿನ ನಾಗರಿಕರು ಗಡಿ ಭದ್ರತಾ ಪಡೆಯ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ೨ ಸೈನಿಕರ ಜೊತೆಗೆ ೫ ಜನರು ಗಾಯಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಗಡಿ ಭದ್ರತಾ ಪಡೆಯಿಂದ ಕೆಲವು ಕಳ್ಳ ಸಾಗಾಣಿಕೆದಾರರನ್ನು ಬಂಧಿಸಿದ್ದರು. ಆದ್ದರಿಂದ ಈ ದಾಳಿ ನಡೆದಿದೆ ಎಂದು ಸೈನಿಕರ ಹೇಳಿಕೆಯಾಗಿದೆ.

ಪೇಶಾವರ (ಪಾಕಿಸ್ತಾನ್) ಇಲ್ಲಿಯ ಸಿಖ್ಕರ ಮೇಲೆ ನಡೆದ ದಾಳಿಯ ಎರಡು ಘಟನೆಯಲ್ಲಿ ಓರ್ವ ಸಾವು ಹಾಗೂ ಓರ್ವನಿಗೆ ಗಾಯ

ಪಾಕಿಸ್ತಾನದ ಸಹಾಯ ಪಡೆದು ಸ್ವತಂತ್ರ ಖಲಿಸ್ತಾನದ ಬೇಡಿಕೆ ಮಾಡುವವರು ಈಗ ಇದರ ಬಗ್ಗೆ ಏಕೆ ಮಾತನಾಡುವುದಿಲ್ಲ ? ಇಂತಹ ಘಟನೆ ಅವರಿಗೆ ಒಪ್ಪಿಗೆಯೇ ?

ಬಾಗೇಶ್ವರಧಾಮದಲ್ಲಿ ನಾಡ ಪಿಸ್ತುಲ ಹಿಡಿದು ನುಗ್ಗಿದ ರಜ್ಜನ ಖಾನ್ ನ ಬಂಧನ !

ಇಲ್ಲಿಯ ಬಾಗೇಶ್ವರಧಾಮದಲ್ಲಿ ಕಾನೂನು ಬಾಹಿರ ಶಸ್ತ್ರ ಹಿಡಿದು ನುಗ್ಗಿರುವ ರಜ್ಜನ ಖಾನ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅವನಿಂದ ಒಂದು ನಾಡ ಪಿಸ್ತುಲ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯ ನಂತರ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇರಾನದಲ್ಲಿ ಭಾರತೀಯ ದಂಪತಿಗಳನ್ನು ಅಪಹರಿಸಿದ ಪಾಕಿಸ್ತಾನಿ ದಲ್ಲಾಳಿಯ ಬಂಧನ !

ಇರಾನ್ನ ರಾಜಧಾನಿ ತೆಹರಾನ್ ಇಲ್ಲಿ ಒಬ್ಬ ಪಾಕಿಸ್ತಾನಿ ದಲ್ಲಾಳಿಯು ಪಟೇಲ್ ಎಂಬ ಗುಜರಾತಿ ದಂಪತಿಗಳನ್ನು ಅಪಹರಿಸಿರುವ ಘಟನೆ ಬೆಳಕಿಗೆ ಬಂದಿದೆ. ದಲ್ಲಾಳಿಯು ಅವರ ಮೇಲೆ ಬ್ಲೇಡಿನಿಂದ ದಾಳಿ ನಡೆಸಿ ಅವರನ್ನು ಗಾಯಗೊಳಿಸಿದನು, ಹಾಗೂ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ . ಭಾರತದಲ್ಲಿನ ಅವರ ಕುಟುಂಬದ ಬಳಿ ಹಣದ ಬೇಡಿಕೆಗಾಗಿ ಥಳಿಸಿರುವ ವಿಡಿಯೋ ಕಳುಹಿಸಿದ್ದಾನೆ.

ಬಂಗಾಲದಲ್ಲಿ ಕೇಂದ್ರ ಸಚಿವ ನಿಶಿಥ ಪ್ರಮಾಣಿಕ ಅವರ ಬೆಂಗಾವಲು ವಾಹನಗಳ ಮೇಲೆ ದಾಳಿ

ಈ ಹಿಂದೆಯೂ ೨೫ ಫೆಬ್ರವರಿಯಂದು ಇಂತಹದ್ದೇ ದಾಳಿಯನ್ನು ನಡೆಸಲಾಗಿತ್ತು. ಇದರಲ್ಲಿ ಕೆಲವು ಭಾಜಪದ ಕಾರ್ಯಕರ್ತರು ಗಾಯಗೊಂಡಿದ್ದರು.

ಉಗಾಂಡಾದಲ್ಲಿ ಜಿಹಾದಿ ಭಯೋತ್ಪಾದಕರಿಂದ ಶಾಲೆಯ ಮೇಲಾದ ದಾಳಿಯಲ್ಲಿ 40 ಮಂದಿ ಬಲಿ !

ಜಗತ್ತಿನಾದ್ಯಂತ ಇಸ್ಲಾಮ್ ಹೆಸರಿನಡಿಯಲ್ಲಿ ಜಿಹಾದಿ ಭಯೋತ್ಪಾದಕರು ದುಷ್ಕೃತ್ಯಗಳನ್ನು ನಡೆಸುತ್ತಾರೆ; ಆದರೆ ಮುಸ್ಲಿಂ ಸಂಘಟನೆಗಳು ಮತ್ತು ಅವರ ಧರ್ಮಗುರುಗಳು ಎಂದಿಗೂ ಅವರನ್ನು ವಿರೋಧಿಸುವುದಿಲ್ಲ ಎನ್ನುವುದನ್ನು ಗಮನದಲ್ಲಿಡಿ !

ಮಣಿಪುರದಲ್ಲಿ ಇದುವರೆಗೆ ೯೦೦ ಶಸ್ತ್ರಾಸ್ತ್ರಗಳು ವಶ

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದ ನಂತರ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಇದುವರೆಗೆ ಒಟ್ಟು ೯೦೦ ಶಸ್ತ್ರಾಸ್ತ್ರಗಳು ಮತ್ತು ೧೧ ಸಾವಿರದ ೫೧೮ ನಾಡು ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಿಬಿಸಿಯಿಂದ ೪೦ ಕೋಟಿ ರೂಪಾಯಿ ತೆರಿಗೆ ವಂಚನೆಯ ಸ್ವೀಕೃತಿ !

‘ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್’ ಅಂದರೆ ಬಿಬಿಸಿ ಈ ಬ್ರಿಟಿಷ್ ಪ್ರಸಾರ ಮಾಧ್ಯಮವು ಭಾರತಕ್ಕೆ ೪೦ ಕೋಟಿ ರೂಪಾಯಿ ತೆರಿಗೆ ವಂಚಿಸಿರುವುದನ್ನು ಒಪ್ಪಿಕೊಂಡಿದೆ. ಇದರ ಹಿನ್ನೆಲೆಯ ಸುದ್ದಿಯನ್ನು ಇಂಗ್ಲಿಷ್ ದೈನಿಕದಲ್ಲಿ ಪ್ರಕಟಿಸಲಾಗಿದೆ.