ಕೊಲಕಾತಾ (ಬಂಗಾಲ) – ಬಂಗಾಲದಲ್ಲಿ ಪಂಚಾಯತ್ ಚುನಾವಣೆ ಘೋಷಣೆಯಾದಾಗಿನಿಂದ ಅಲ್ಲಿ ಹಿಂಸಾಚಾರ ಆರಂಭವಾಗಿದೆ. ಜೂನ್ ೧೭ ರಂದು ಕೇಂದ್ರ ಸಚಿವ ನಿಶಿಥ ಪ್ರಮಾಣಿಕ ಅವರ ಬೆಂಗಾವಲು ವಾಹನಗಳ ಮೇಲೆ ದಾಳಿ ನಡೆಸಲಾಯಿತು. ಈ ಘಟನೆಯ ವೇಳೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು ಕೇಂದ್ರ ಸಚಿವ ಪ್ರಮಾಣಿಕ ಅವರು ಆರೋಪಿಸಿದ್ದಾರೆ. ಭಾಜಪದ ಬಂಗಾಲದ ರಾಜ್ಯಾಧ್ಯಕ್ಷ ಸುಕಾಂತ ಮಜುಮದಾರ್ ಅವರು ‘ಮಮತಾ ಬ್ಯಾನರ್ಜಿ ಸರಕಾರದಲ್ಲಿ ಪೊಲೀಸರು ಅಸಹಾಯಕರಾಗಿದ್ದಾರೆ’ ಎಂದು ಟೀಕಿಸುತ್ತಾ, ಪ್ರಮಾಣಿಕ ಅವರ ವಾಹನದ ಮೇಲೆ ಬಾಂಬ್ ಎಸೆದಿರುವುದಾಗಿ ಹೇಳಿದ್ದಾರೆ.
‘Bombs hurled at us’: Union minister Nisith Pramanik alleges attack on his convoy in West Bengal’s Cooch https://t.co/3bq2U30i8O
— The Times Of India (@timesofindia) June 17, 2023
ಈ ಹಿಂದೆಯೂ ೨೫ ಫೆಬ್ರವರಿಯಂದು ಇಂತಹದ್ದೇ ದಾಳಿಯನ್ನು ನಡೆಸಲಾಗಿತ್ತು. ಇದರಲ್ಲಿ ಕೆಲವು ಭಾಜಪದ ಕಾರ್ಯಕರ್ತರು ಗಾಯಗೊಂಡಿದ್ದರು.