ಬಂಗಾಳ : ಭಾಜಪದ ಶಾಸಕರು ಮತ್ತು ಅವರ ಕಾರ್ಯಕರ್ತರ ಮೇಲೆ ದಾಳಿ

ಬಂಗಾಳದಲ್ಲಿ ಪಂಚಾಯತ್ ಚುನಾವಣಾ ಪ್ರಕ್ರಿಯೆಯಲ್ಲಿ ಹಿಂಸಾಚಾರ !

ಚುನಾವಣೆಯ ಪ್ರಕ್ರಿಯೆ ಘೋಷಣೆಯಾದನಂತರ ಹಿಂಸಾಚಾರ

ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಪಂಚಾಯತ್ ಚುನಾವಣೆಯ ಪ್ರಕ್ರಿಯೆ ಘೋಷಣೆಯಾದಾಗಿನಿಂದಲೂ ಹಿಂಸಾಚಾರ ಆರಂಭಗೊಂಡಿದೆ. ನದಿಯಾ ಜಿಲ್ಲೆಯ ನಕ್ಕಾಶಿಪಾಡಾ ಎಂಬಲ್ಲಿ ನಾಡಬಾಂಬ್ ಸ್ಫೋಟಿಸಲಾಯಿತು, ಕಾಂಗ್ರೆಸ್ ಶಾಸಕರ ಮೇಲೂ ದಾಳಿ ನಡೆಸಲಾಗಿದೆ.

ಬಾಂಕುಡಾದಲ್ಲಿನ ಸೋನಮುಖಿ ವಿಧಾನಸಭೆಯ ಮತದಾರ ಸಂಘದ ಭಾಜಪದ ಶಾಸಕರಾದ ದಿಬಾಕರ್ ಘರಾಮಿ ಮತ್ತು ಬಾಜಪದ ಕಾರ್ಯಕರ್ತರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇದರಲ್ಲಿ ಓರ್ವ ಕಾರ್ಯಕರ್ತ ಗಾಯಗೊಂಡಿದ್ದಾರೆ. ದಕ್ಷಿಣ ೨೪ ಪರಗನಾ ಜಿಲ್ಲೆಯ ಕುಲತಲಿಯಲ್ಲಿ ಮಾಕ್ಸವಾದಿ ಕಮ್ಯೂನಿಸ್ಟ ಪಕ್ಷದ ಮಹಿಳಾ ಅಭ್ಯರ್ಥಿಯ ಪತಿಯು ಹಲ್ಲೆ ನಡೆಸಿದ್ದಾರೆ ಇದರಲ್ಲಿ ಒಬ್ಬ ವ್ಯಕ್ತಿಯು ಗಾಯಗೊಂಡಿದ್ದಾನೆ. ಈ ದಾಳಿ ತೃಣಮೂಲ ಕಾಂಗ್ರೆಸ್ ನಡೆಸಿದೆ ಎಂದು ಆರೋಪಿಸಲಾಗಿದೆ.

ಸಂಪಾದಕೀಯ ನಿಲುವು

ಬಂಗಾಳದಲ್ಲಿ ಕಳೆದ ಕೆಲವು ವರ್ಷಗಳಿಂದ ಪರಿಸ್ಥಿತಿ ಹೀಗೆ ಇರುವುದರಿಂದ, ಅದನ್ನು ಸುಧಾರಿಸಲು ನಿಖರ ನಿರ್ಧಾರ ತೆಗೆದುಕೊಳ್ಳದವರು ಜನತಾದ್ರೋಹಿಗಳೇ ಆಗಿದ್ದಾರೆ !