|
ಕರ್ಣಾವತಿ (ಗುಜರಾತ) – ಇರಾನ್ನ ರಾಜಧಾನಿ ತೆಹರಾನ್ ಇಲ್ಲಿ ಒಬ್ಬ ಪಾಕಿಸ್ತಾನಿ ದಲ್ಲಾಳಿಯು ಪಟೇಲ್ ಎಂಬ ಗುಜರಾತಿ ದಂಪತಿಗಳನ್ನು ಅಪಹರಿಸಿರುವ ಘಟನೆ ಬೆಳಕಿಗೆ ಬಂದಿದೆ. ದಲ್ಲಾಳಿಯು ಅವರ ಮೇಲೆ ಬ್ಲೇಡಿನಿಂದ ದಾಳಿ ನಡೆಸಿ ಅವರನ್ನು ಗಾಯಗೊಳಿಸಿದನು, ಹಾಗೂ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ . ಭಾರತದಲ್ಲಿನ ಅವರ ಕುಟುಂಬದ ಬಳಿ ಹಣದ ಬೇಡಿಕೆಗಾಗಿ ಥಳಿಸಿರುವ ವಿಡಿಯೋ ಕಳುಹಿಸಿದ್ದಾನೆ. ಕುಟುಂಬದವರು ಈ ಸಂದರ್ಭದಲ್ಲಿ ಗುಜರಾತಿನ ಗೃಹಸಚಿವ ಹರ್ಷ ಸಾಂಗವಿ ಇವರ ಬಳಿ ಸಹಾಯ ಕೇಳಿರುವಾಗ ಅವರು ತಕ್ಷಣ ಕ್ರಮ ಕೈಗೊಂಡು ದಂಪತಿಗಳ ಬಿಡುಗಡೆಗೆ ಸಹಾಯ ಮಾಡಿದರು.
೧. ಸಾಂಗವಿ ಇವರು ಈ ಸಂದರ್ಭದಲ್ಲಿ ಇರಾನಿನ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದರು ರಾಯಭಾರಿ ಕಚೇರಿಯು ತಕ್ಷಣ ತೆಹರಾನ್ ಪೋಲಿಸರಿಗೆ ತಿಳಿಸಿತು. ಆದ್ದರಿಂದ ಪೊಲೀಸರು ಪಾಕಿಸ್ತಾನಿ ದಲ್ಲಾಳಿಯನ್ನು ಮತ್ತು ಅವನ ಜೊತೆಗಾರರನ್ನು ಬಂಧಿಸಿದರು ಮತ್ತು ಅಪಹರಿಸಿರುವ ದಂಪತಿಗಳನ್ನು ಬಿಡುಗಡೆಗೊಳಿಸಿದರು.
೨. ಪಂಕಜ್ ಮತ್ತು ಅವನ ಪತ್ನಿ ನಿಶಾ ಪಟೇಲ್ ಇವರಿಗೆ ವಾಸ್ತವದಲ್ಲಿ ಅಮೇರಿಕಾಕ್ಕೆ ಹೋಗಲಿಕ್ಕಿತ್ತು. ಇವರ ಬಳಿ ಅದಕ್ಕೆ ಬೇಕಾಗಿರುವ ಅವಶ್ಯಕ ದಾಖಲೆಗಳು ಇರಲ್ಲಿಲ್ಲ . ಇಂತಹದರಲ್ಲಿ ಭಾಗ್ಯನಗರದಲ್ಲಿನ ಒಬ್ಬ ದಲ್ಲಾಳಿಯು ಅವರಿಗೆ ಮೋಸ ಮಾಡಿ ಇರಾನ್ ಗೆ ಕಳುಹಿಸಿ ಅಲ್ಲಿಂದ ಅಮೆರಿಕಕ್ಕೆ ಕಳಿಸುವ ವ್ಯವಸ್ಥೆ ಮಾಡುವುದಾಗಿ ಆಶ್ವಾಸನೆ ನೀಡಿದನು. ಅದರ ಪ್ರಕಾರ ಈ ದಂಪತಿಗಳು ಇರಾನ್ನ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಸಂಬಂಧಿತ ಪಾಕಿಸ್ತಾನಿ ದಲ್ಲಾಳಿಯು ಅವರನ್ನು ಅಪಹರಿಸಿದನು ಮತ್ತು ಬಿಡುಗಡೆ ಗೊಳಿಸಲು ಅವನ ಭಾರತೀಯ ಕುಟುಂಬದ ಬಳಿ ಹಣದ ಬೇಡಿಕೆಯನ್ನಿಟ್ಟನು.
#Gujarat #couple seeking to enter #US illegally held captive in #Iran by #Pakistani agent: Policehttps://t.co/riDCaBEonF
— The Tribune (@thetribunechd) June 20, 2023