ಬಿಬಿಸಿಯಿಂದ ೪೦ ಕೋಟಿ ರೂಪಾಯಿ ತೆರಿಗೆ ವಂಚನೆಯ ಸ್ವೀಕೃತಿ !

ನವ ದೆಹಲಿ – ‘ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್’ ಅಂದರೆ ಬಿಬಿಸಿ ಈ ಬ್ರಿಟಿಷ್ ಪ್ರಸಾರ ಮಾಧ್ಯಮವು ಭಾರತಕ್ಕೆ ೪೦ ಕೋಟಿ ರೂಪಾಯಿ ತೆರಿಗೆ ವಂಚಿಸಿರುವುದನ್ನು ಒಪ್ಪಿಕೊಂಡಿದೆ. ಇದರ ಹಿನ್ನೆಲೆಯ ಸುದ್ದಿಯನ್ನು ಇಂಗ್ಲಿಷ್ ದೈನಿಕದಲ್ಲಿ ಪ್ರಕಟಿಸಲಾಗಿದೆ. ಈ ವಾರ್ತೆಯ ಪ್ರಕಾರ’ ‘ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಆಕ್ಸಿಸ್’ ನ 2 ಅಧಿಕಾರಿಗಳು ಹೆಸರು ಮುದ್ರಿಸದೆ ಇರುವ ಷರತ್ತಿನ ಮೇಲೆ ಈ ಮಾಹಿತಿ ನೀಡಿದ್ದಾರೆ. ‘ಬಿಬಿಸಿಯು ನಮ್ಮ ಕಾರ್ಯಾಲಯಕ್ಕೆ ಈ ಮೇಲ್ ಮುಖಾಂತರ ತೆರಿಗೆ ವಂಚಿಸಿರುವ ಸ್ವೀಕೃತಿ ನೀಡಿದೆ’, ಎಂದು ಅವರು ಹೇಳಿದರು, ಅದೇ ಸಮಯದಲ್ಲಿ ‘ಈ ಮೇಲ್’ ಗೆ ಕಾನೂನಿನ ಯಾವುದೇ ಆಧಾರವಿಲ್ಲ. ‘ಬಿಬಿಸಿ ತೆರಿಗೆ ತುಂಬುವ ಬಗ್ಗೆ ಗಂಭೀರವಿದ್ದರೆ, ಅದು ಸುಧಾರಿತ ತೆರಿಗೆ ತುಂಬಬೇಕು’, ಎಂದು ಕೂಡ ಈ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

೧. ಅಧಿಕಾರಿಯು, ನಮ್ಮ ದೇಶದಲ್ಲಿನ ಕಾನೂನು ಎಲ್ಲರಿಗೂ ಒಂದೇಯಾಗಿದೆ. ಯಾವುದಾದರೂ ಪ್ರಸಾರ ಮಾಧ್ಯಮ ಕಂಪನಿಗೆ ಅಥವಾ ವಿದೇಶಿ ಕಂಪನಿಗೆ ವಿಶೇಷ ಸೌಲಭ್ಯ ನೀಡುವುದಿಲ್ಲ. ಆದ್ದರಿಂದ ಬಿಬಿಸಿ ಎಲ್ಲಿಯವರೆಗೆ ಕಾನೂನುರಿತ್ಯ ಈ ಪ್ರಕರಣ ಬಗೆಹರಿಸುವುದಿಲ್ಲ ಅಲ್ಲಿಯವರೆಗೆ ಅದರ ವಿರುದ್ಧ ಕ್ರಮ ಕೈಗೊಳ್ಳುವುದು ಮುಂದುವರೆಯುವುದು, ಎಂದು ಕೂಡ ಸ್ಪಷ್ಟಪಡಿಸಿದರು.

೨. ಕೆಲವು ವಾರಗಳ ಹಿಂದೆ ಬಿಬಿಸಿಯ ನವದೆಹಲಿ ಮತ್ತು ಮುಂಬಯಿಯ ಕಾರ್ಯಾಲಯಗಳ ಮೇಲೆ ತೆರಿಗೆ ಇಲಾಖೆಯಿಂದ ದಾಳಿ ನಡೆದಿತ್ತು. ಆ ಸಮಯದಲ್ಲಿ ಬಿಬಿಸಿಯು ಈ ದಾಳಿ ಗುಜರಾತ್ ಗಲಭೆಯಿಂದ ಮೋದಿ ಅವರನ್ನು ಗುರಿ ಮಾಡಿರುವ ಸಾಕ್ಷ್ಯಚಿತ್ರ ನಿರ್ಮಿಸಿರುವುದರಿಂದ ದಾಳಿ ನಡೆದಿದೆ ಎಂದು ದಾವೆ ಮಾಡಿತ್ತು; ಆದರೆ ಈಗ ತೆರಿಗೆ ವಂಚನೆಯ ಸ್ವೀಕೃತಿ ನೀಡಿದ ನಂತರ ಅದು ಸುಳ್ಳು ಬೊಬ್ಬೆ ಹಾಕಿರುವುದು ಸ್ಪಷ್ಟವಾಗಿದೆ.

೩. ತೆರಿಗೆ ಇಲಾಖೆಯಿಂದ ಈ ವರ್ಷ ಫೆಬ್ರುವರಿಯಲ್ಲಿ ಬಿಬಿಸಿಯ ತೆರಿಗೆ ಪರಿಶೀಲನೆ ನಡೆಸಿತ್ತು. ಅದರಲ್ಲಿ ೨೦೧೬ ರಿಂದ ತೆರಿಗೆ ವಂಚನೆ ಕಂಡುಬಂದಿದೆ. ಬಿಬಿಸಿಯು ತೆರಿಗೆ ವಂಚನೆ ನಡೆದಿರುವುದು ಮೊದಲು ನಿರಾಕರಿಸಿತ್ತು ಆದರೆ ಈಗ ಅದನ್ನು ಒಪ್ಪಿಕೊಂಡಿದೆ. ಈಗ ಬಿಬಿಸಿಯಿಂದ ಬಾಕಿ ಉಳಿದಿರುವ ತೆರೆಗೆ ನೀಡುವುದಕ್ಕಾಗಿ ಅರ್ಜಿ ನೀಡಿದೆ, ಆದರೆ ಹಣ ನೀಡಿಲ್ಲ.

ಸಂಪಾದಕರ ನಿಲುವು

ತೆರಿಗೆ ವಂಚನೆ ನಡೆಸಿರುವುದು ಮೊದಲು ನಿರಾಕರಿಸಿ, ಕಿರುಕುಳ ನೀಡಲಾಗುತ್ತಿದೆ ಎಂದು ಬೊಬ್ಬೆ ಹಾಕುವ ಬಿಬಿಸಿಯ ಮೇಲೆ ಕಾನೂನರೀತ್ಯ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ, ಅಂದರೇನೆ ಇಂತಹ ಬ್ರಿಟಿಷ್ ಕಂಪನಿಗಳ ಮೇಲೆ ಅಂಕುಶ ಇಡಲು ಸಾಧ್ಯ !