ಸೀರಿಯಾದಲ್ಲಿ ರಷ್ಯಾದ ವೈಮಾನಿಕ ದಾಳಿಯಲ್ಲಿ 13 ಮಂದಿ ಸಾವು

ದಮಾಸ್ಕಸ (ಸೀರಿಯಾ) – ರಷ್ಯಾ ಜೂನ್ 25 ರಂದು ಸೀರಿಯಾದ ಬಂಡಖೋರರ ಹಿಡಿತದಲ್ಲಿರುವ ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಇದರಲ್ಲಿ 2 ಮಕ್ಕಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ಸೀರಿಯಾ ಈ ದಾಳಿಯನ್ನು ನರಸಂಹಾರದೊಂದಿಗೆ ಹೋಲಿಸಿದೆ. ಕಳೆದ ಕೆಲವು ದಿನಗಳಲ್ಲಿ ಹಮಾ ಮತ್ತು ಲತಾಕಿಯಾ ಪ್ರಾಂತ್ಯಗಳಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ಸಿರಿಯಾದ ರಕ್ಷಣಾ ಸಚಿವಾಲಯವು ಒಂದು ಮನವಿ ಹೊರಡಿಸಿದೆ.