ಪಾಕಿಸ್ತಾನವನ್ನು ಬದಿಗಿರಿಸುವ ಆವಶ್ಯಕತೆ ! – ಕೇಂದ್ರ ರಾಜ್ಯ ಸಚಿವ ಮತ್ತು ಮಾಜಿ ಸೈನ್ಯದಳ ಪ್ರಮುಖ ವಿ.ಕೆ. ಸಿಂಹ !

ಕಾಶ್ಮೀರದ ಅನಂತನಾಗದಲ್ಲಿನ ಚಕಮಕಿಯಲ್ಲಿ ಭಾರತದ ೫ ಸೈನ್ಯಾಧಿಕಾರಿ ಮತ್ತು ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆಯ ನಂತರ ಮಾಜಿ ಸೈನ್ಯದಳ ಪ್ರಮುಖ ಮತ್ತು ಕೇಂದ್ರ ರಾಜ್ಯ ಸಚಿವ ವಿ.ಕೆ. ಸಿಂಹ ಇವರು, ‘ಪಾಕಿಸ್ತಾನವನ್ನು ಒಬ್ಬಂಟಿಯಾಗಿ ಮಾಡುವ ಅವಶ್ಯಕತೆ ಇದೆ.

ರಾಜೌರಿ (ಜಮ್ಮು ಕಾಶ್ಮೀರ) ಇಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಸೈನ್ಯದ ಶ್ವಾನ ವೀರ ಮರಣ !

ಇಲ್ಲಿ ೨೪ ಗಂಟೆಗಿಂತಲೂ ಹೆಚ್ಚಿನ ಕಾಲ ಜಿಹಾದಿ ಭಯೋತ್ಪಾದಕರ ಜೊತೆಗೆ ಭದ್ರತಾ ಪಡೆಯೊಂದಿಗೆ ಚಕುಮಕಿ ನಡೆದಿತ್ತು. ಇಲ್ಲಿಯವರೆಗೆ ಈ ಚಕಮಕಿಯಲ್ಲಿ ೨ ಭಯೋತ್ಪಾದಕರು ಹತ್ತರಾಗಿದ್ದಾರೆ ಹಾಗೂ ಭದ್ರತಾ ಪಡೆಯ ೨ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.

ಸಂಬಂಧ ಸುಧಾರಿಸಲು ಲಡಾಖ ಗಡಿಯಲ್ಲಿ ಶಾಂತಿ ನಿರ್ಮಾಣ ಮಾಡುವುದು ಆವಶ್ಯಕ !

ಬ್ರಿಕ್ಸ್ ಪರಿಷತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಶೀ ಜೀನಪಿಂಗ ಇವರ ಭೇಟಿ

ಭಾರತವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ !

ಒಂದು ಹಿಂದಿ ದಿನಪತ್ರಿಕೆಯಲ್ಲಿ ನೀಡಿರುವ ಮಾಹಿತಿಯನುಸಾರ ಆಗಸ್ಟ್ 19 ರ ರಾತ್ರಿ ಭಾರತವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ. ಭಾರತೀಯ ಸೇನೆಯ ವಿಶೇಷ ಪಡೆಗಳ 12 ರಿಂದ 15 ಕಮಾಂಡೋಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ತಾರಕುಂಡಿ ಸೆಕ್ಟರ್ ಮತ್ತು ಪೂಂಛನ ಭಿಂಭರ್ ಗಲ್ಲಿಯಲ್ಲಿ ರಾತ್ರಿಯ ಸಮಯದಲ್ಲಿ ನಡೆದುಕೊಂಡು ಪ್ರತ್ಯಕ್ಷ ನಿಯಂತ್ರಣ ರೇಖೆಯನ್ನು ದಾಟಿದರು.

ಪುಲ್ವಾಮದಲ್ಲಿ ಓರ್ವ ಭಯೋತ್ಪಾದಕನ ಹತ್ಯೆ

ಪುಲ್ವಾಮದಲ್ಲಿ ಆಗಸ್ಷ ೨೦ ರ ಸಂಜೆ ಪ್ರಾರಂಭವಾದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಒಬ್ಬ ಭಯೋತ್ಪಾದಕನನ್ನು ಕೊಂದಿದ್ದು ಇನ್ನೂ ಗುಂಡಿನ ಚಕಮಕಿ ಮುಂದುವರೆದಿದೆ. ಹತ್ಯೆಗೀಡಾದ ಭಯೋತ್ಪಾದಕನು ಮನೆಯ ಒಳಗೆ ಅಡಗಿಕೊಂಡು ಗುಂಡು ಹಾರಿಸುತ್ತಿದ್ದ.

ನಾವು ನಿಮ್ಮ ಚರ್ಮವನ್ನು ಸುಲಿಯುತ್ತೇವೆ ! – ಪಶ್ತೂನ್ ನಾಯಕನಿಂದ ಪಾಕಿಸ್ತಾನ ಸೇನೆಗೆ ಬೆದರಿಕೆ

ಇಲ್ಲಿನ ಸರ್ವೋಚ್ಚ ನ್ಯಾಯಾಲಯದ ಎದುರು ಪಾಕಿಸ್ತಾನದ ಪಶ್ತೂನ್ ಪ್ರದೇಶದ ನಾಯಕರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. `ಪಶ್ತೂನ್ ಜನರ ಧ್ವನಿಯನ್ನು ಕೇಳದಿದ್ದರೆ, ಸ್ವಾತಂತ್ರ್ಯಕ್ಕಾಗಿ ಯುದ್ಧ ನಡೆಯುವುದು’ ಎಂದು ಈ ನಾಯಕರು ಬೆದರಿಕೆ ಹಾಕಿದ್ದಾರೆ.

ಲಡಾಖನಲ್ಲಿ ಭಾರತೀಯ ಸೈನ್ಯದ ವಾಹನ ಆಳವಾದ ಕಂದಕಕ್ಕೆ ಉರುಳಿ ೯ ಸೈನಿಕರ ಸಾವು

ಆಗಸ್ಟ್ ೧೯ ರಂದು ಇಲ್ಲಿ ಸಂಜೆ ಸೈನ್ಯದ ವಾಹನ ಆಳವಾದ ಕಂದಕಕ್ಕೆ ಉರುಳಿದ್ದರಿಂದ ೯ ಸೈನಿಕರು ಸಾವನ್ನಪ್ಪಿದ್ದಾರೆ. ಮೃತ ಸೈನಿಕರಲ್ಲಿ ಓರ್ವ ಅಧಿಕಾರಿಯ ಸಮಾವೇಶ ಕೂಡ ಇದೆ. ಕೆಲವು ಸೈನಿಕರು ಗಾಯಗೊಂಡಿದ್ದಾರೆ.

ಚೀನಾದ ಸೈನ್ಯದಿಂದ ರಾಷ್ಟ್ರಾಧ್ಯಕ್ಷ ಶೀ ಜಿನಪಿಂಗ ಇವರ ವಿರುದ್ಧ ವಿದ್ರೋಹದ ಸಂಕೇತ !

ಚೀನಾದ ‘ಪೀಪಲ್ಸ್ ರಿಲಿಬ್ರೇಶನ್ ಆರ್ಮಿ’ಯ ಸಂದರ್ಭದಲ್ಲಿ ಜಗತ್ತಿನಾದ್ಯಂತ ತಜ್ಞರಿಂದ ಬಹಳಷ್ಟು ವಿಷಯ ಕೇಳಿ ಬರುತ್ತಿದೆ. ಚೀನಾ ಸೈನ್ಯದಲ್ಲಿ ‘ರಾಕೆಟ್ ಫೋರ್ಸ್’ ಇಲಾಖೆಯ ಹಿರಿಯ ಅಧಿಕಾರಿ ವೂ ಗೋವೋಹುವಾ ಇವರು ಜೂನ್ ೬ ರಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು.

ಭಾರತೀಯ ಸೈನ್ಯದಲ್ಲಿ ಗೂರ್ಖಾ ಸೈನಿಕರ ನೇಮಕಾತಿಯ ಬಗ್ಗೆ ನೇಪಾಳ ನಿರ್ದಿಷ್ಟ ನಿರ್ಣಯವನ್ನು ತೆಗೆದುಕೊಂಡಿಲ್ಲ !

ನೇಪಾಳವು ಅಗ್ನಿಪಥ ಯೋಜನೆಯಡಿ ಭಾರತೀಯ ಸೇನೆಗೆ ತನ್ನ ಗೂರ್ಖಾ ಸೈನಿಕರ ನೇಮಕಾತಿಯನ್ನು ನೇಪಾಳ ಒಂದು ವರ್ಷದ ಹಿಂದೆ ಸ್ಥಗಿತಗೊಳಿಸಿತ್ತು. ಆದರೆ, ಈ ವಿಷಯ ಸಂಪೂರ್ಣವಾಗಿ ಮುಕ್ತಾಯವಾಗಿಲ್ಲ ಎಂದು ಭಾರತದ ನೇಪಾಳ ರಾಯಭಾರಿ ಶಂಕರ ಪ್ರಸಾದ ಶರ್ಮಾ ಇವರು ಹೇಳಿದರು.

ಸೈನ್ಯದ ಪೂರೈಕೆಗಾಗಿ ಚೀನಾದಿಂದ ಅಕ್ಸಾಯಿ ಚೀನಾದಲ್ಲಿ ರಸ್ತೆಗಳು, ಹೆಲಿಪೋರ್ಟ್ ಇತ್ಯಾದಿಗಳ ನಿರ್ಮಾಣ !

ಬ್ರಿಟನ್ ನ ‘ಚಿಥಮ ಹೌಸ್’ ಈ ಸಂಸ್ಥೆಯು, ಚೀನಾ ಅಕ್ಸಾಯ್ ಚೀನಾದವರೆಗೆ ರಸ್ತೆಗಳು, ಚೌಕಿಗಳು, ಹೆಲಿಪೋರ್ಟ್‌ಗಳು ಮತ್ತು ಡೇರೆಗಳನ್ನು ನಿರ್ಮಿಸಿದೆ ಎಂದು ದಾವೆ ಮಾಡಿದೆ. ಚೀಥಮ್ ಹೌಸ್ ಕಳೆದ ೬ ತಿಂಗಳಿನ ಉಪಗ್ರಹಗಳ ಛಾಯಾಚಿತ್ರಗಳ ವಿಶ್ಲೇಷಣೆಯನ್ನು ಆಧರಿಸಿ ವರದಿಯನ್ನು ಬಿಡುಗಡೆ ಮಾಡಿದೆ.