ಭಾರತೀಯ ಸೈನ್ಯದಲ್ಲಿ ಗೂರ್ಖಾ ಸೈನಿಕರ ನೇಮಕಾತಿಯ ಬಗ್ಗೆ ನೇಪಾಳ ನಿರ್ದಿಷ್ಟ ನಿರ್ಣಯವನ್ನು ತೆಗೆದುಕೊಂಡಿಲ್ಲ !

ಕಾಠ್ಮಂಡು (ನೇಪಾಳ) – ನೇಪಾಳವು ಅಗ್ನಿಪಥ ಯೋಜನೆಯಡಿ ಭಾರತೀಯ ಸೇನೆಗೆ ತನ್ನ ಗೂರ್ಖಾ ಸೈನಿಕರ ನೇಮಕಾತಿಯನ್ನು ನೇಪಾಳ ಒಂದು ವರ್ಷದ ಹಿಂದೆ ಸ್ಥಗಿತಗೊಳಿಸಿತ್ತು. ಆದರೆ, ಈ ವಿಷಯ ಸಂಪೂರ್ಣವಾಗಿ ಮುಕ್ತಾಯವಾಗಿಲ್ಲ ಎಂದು ಭಾರತದ ನೇಪಾಳ ರಾಯಭಾರಿ ಶಂಕರ ಪ್ರಸಾದ ಶರ್ಮಾ ಇವರು ಹೇಳಿದರು. ಶರ್ಮಾ ತಮ್ಮ ಮಾತನ್ನು ಮುಂದುವರಿಸುತ್ತಾ, ಈ ಅಂಶದ ಬಗ್ಗೆ ಉಭಯ ಸರಕಾರಗಳು ಇನ್ನೂ ಆಳವಾಗಿ ಚರ್ಚಿಸಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಚರ್ಚೆ ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲ ಎಂದು ಹೇಳಿದರು.

ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಮೊದಲಿನ ನಿಯಮಗಳಂತೆಯೇ ಗೂರ್ಖಾ ಸೈನಿಕರ ನೇಮಕಾತಿ ನಡೆಯಬೇಕು ಎಂದು ನೇಪಾಳಕ್ಕೆ ಅನಿಸುತ್ತಿದೆ ಹೇಳಿದರು. ನೇಪಾಳ ಸರಕಾರ ಈ ಬಗ್ಗೆ ಯಾವುದೇ ನಿರ್ದಿಷ್ಟ ನಿರ್ಧಾರವನ್ನು ತೆಗೆದುಕೊಂಡಿಲ್ಲ; ಆದರೆ ಭಾರತೀಯ ಸೇನೆಗೆ ಗೂರ್ಖಾ ಸೈನಿಕರನ್ನು ನೇಮಕ ಮಾಡಿಕೊಳ್ಳಬೇಕೋ ಬೇಡವೋ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.