ಸೈನ್ಯದ ಪೂರೈಕೆಗಾಗಿ ಚೀನಾದಿಂದ ಅಕ್ಸಾಯಿ ಚೀನಾದಲ್ಲಿ ರಸ್ತೆಗಳು, ಹೆಲಿಪೋರ್ಟ್ ಇತ್ಯಾದಿಗಳ ನಿರ್ಮಾಣ !

ನವ ದೆಹಲಿ – ಬ್ರಿಟನ್ ನ ‘ಚಿಥಮ ಹೌಸ್’ ಈ ಸಂಸ್ಥೆಯು, ಚೀನಾ ಅಕ್ಸಾಯ್ ಚೀನಾದವರೆಗೆ ರಸ್ತೆಗಳು, ಚೌಕಿಗಳು, ಹೆಲಿಪೋರ್ಟ್‌ಗಳು ಮತ್ತು ಡೇರೆಗಳನ್ನು ನಿರ್ಮಿಸಿದೆ ಎಂದು ದಾವೆ ಮಾಡಿದೆ. ಚೀಥಮ್ ಹೌಸ್ ಕಳೆದ ೬ ತಿಂಗಳಿನ ಉಪಗ್ರಹಗಳ ಛಾಯಾಚಿತ್ರಗಳ ವಿಶ್ಲೇಷಣೆಯನ್ನು ಆಧರಿಸಿ ವರದಿಯನ್ನು ಬಿಡುಗಡೆ ಮಾಡಿದೆ. ೧೯೬೨ ರ ಯುದ್ಧದ ನಂತರ, ಚೀನಾ ಲಡಾಖ್‌ನಲ್ಲಿನ ಯಾವ ಭೂಮಿಯನ್ನು ಕಬಳಿಸಿದೆ, ಅದನ್ನು ಅಕ್ಸಾಯ್ ಚೀನಾ ಎನ್ನಲಾಗುತ್ತದೆ.

೧. ಈ ವರದಿಯ ಪ್ರಕಾರ, ಅಕ್ಸಾಯ್ ಚೀನಾ ಸರೋವರದ ಬಳಿಯಿರುವ ವಿವಾದಿತ ಪ್ರದೇಶದಲ್ಲಿ ಹೆಲಿಪೋರ್ಟ್ ನಿರ್ಮಿಸಲಾಗಿದೆ. ಚೀನಾ ಇಲ್ಲಿ ೧೮ ‘ಹ್ಯಾಂಗರ್’ (ವಿಮಾನಗಳನ್ನು ನಿಲ್ಲಿಸುವ ಸ್ಥಳ) ಗಳು ಮತ್ತು ಸಣ್ಣ ರನ್‌ವೇಯನ್ನೂ ನಿರ್ಮಿಸುತ್ತಿದೆ. ತುರ್ತು ಸಂದರ್ಭದಲ್ಲಿ ಇಲ್ಲಿಂದ ಡ್ರೋನ್, ಹೆಲಿಕಾಪ್ಟರ್ ಮತ್ತು ಉದ್ಧ ವಿಮಾನಗಳನ್ನು ಹಾರಿಸಬಹುದು.

೨. ಅಕ್ಸಾಯ್ ಚೀನಾದಲ್ಲಿ ನಿರ್ಮಿಸಲಾದ ರಸ್ತೆಗಳೂ ಅಗಲವಾಗಿವೆ. ಚೌಕಿಗಳು, ಹವಾಮಾನ ನಿರೋಧಕ ಆಧುನಿಕ ಡೆರೆಗಳು, ಅಲ್ಲಿ ವಾಹನ ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಸೌರಶಕ್ತಿ ಪಡೆಯುವ ವ್ಯವಸ್ಥೆಯನ್ನೂ ಮಾಡಿದೆ. ೨೦೩೫ ರ ಹೊತ್ತಿಗೆ, ಚೀನಾ ಶಿನ್‌ಜಿಯಾಂಗ್ ಮತ್ತು ಟಿಬೆಟ್ ಅನ್ನು ಸಂಪರ್ಕಿಸುವ ಹೆದ್ದಾರಿಯನ್ನು ರೂಪಿಸುವ ಸಿದ್ಧತೆಯಲ್ಲಿದೆ. ಈ ರಸ್ತೆಯು ಅಕ್ಸಾಯ್ ಚೀನಾ ಮೂಲಕ ಹಾದು ಹೋಗಲಿದೆ.

ಸಂಪಾದಕರ ನಿಲುವು

ಚೀನಾ ಇಂದಲ್ಲನಾಳೆ ಭಾರತದ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುತ್ತದೆ ಎಂಬುದರಲ್ಲಿ ಯಾವದೇ ಸಂದೇಹವಿಲ್ಲ. ಇದಕ್ಕಾಗಿ ಭಾರತವು ಹೆಚ್ಚು ಜಾಗರೂಕರಾಗಿದ್ದೂ ‘ಅದಕ್ಕೆ ತಕ್ಕಂತೆ’ ಉತ್ತರಿಸಲು ಸಿದ್ಧತೆ ಮಾಡಬೇಕಾಗಿದೆ !