ಒರ್ವ ಸೈನ್ಯಾಧಿಕಾರಿಯ ಅನುಮಾನಾಸ್ಪದ ಸಾವು ಹಾಗೂ ಒರ್ವ ಹಿರಿಯ ಅಧಿಕಾರಿ ಮತ್ತು ವಿದೇಶಾಂಗ ಸಚಿವ ನಾಪತ್ತೆ ಆಗಿರುವ ಆಘಾತಕಾರಿ ಘಟನೆ !
ಬೀಜಿಂಗ್ (ಚೀನಾ) – ಚೀನಾದ ‘ಪೀಪಲ್ಸ್ ರಿಲಿಬ್ರೇಶನ್ ಆರ್ಮಿ’ಯ ಸಂದರ್ಭದಲ್ಲಿ ಜಗತ್ತಿನಾದ್ಯಂತ ತಜ್ಞರಿಂದ ಬಹಳಷ್ಟು ವಿಷಯ ಕೇಳಿ ಬರುತ್ತಿದೆ. ಚೀನಾ ಸೈನ್ಯದಲ್ಲಿ ‘ರಾಕೆಟ್ ಫೋರ್ಸ್’ ಇಲಾಖೆಯ ಹಿರಿಯ ಅಧಿಕಾರಿ ವೂ ಗೋವೋಹುವಾ ಇವರು ಜೂನ್ ೬ ರಂದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣ ಚೀನಾ ಸೈನ್ಯವು ಮುಚ್ಚಿ ಹಾಕಿದೆ ಮತ್ತು ಮೃತ್ಯುವಿನ ಹಿಂದಿನ ನಿಜವಾದ ಕಾರಣ ಬೆಳಕಿಗೆ ಬರಲು ಬಿಡಲಿಲ್ಲ. ಅದರ ಮೊದಲೇ ‘ರಾಕೆಟ್ ಫೋರ್ಸ; ನ ಲೆಫ್ಟಿನೆಂಟ್ ಜನರಲ್ ಲೀ ಯುಚಾವೊ ಇವರು ಅನಿರೀಕ್ಷಿತವಾಗಿ ಕಣ್ಮರೆಯಾದರೂ. ಈ ಹಿಂದೆ ಅಂದರೆ ಸುಮಾರು ಜೂನ್ ೨೦೨೩ ರ ಕೊನೆಯ ವಾರದಿಂದ ಚೀನಾದ ವಿದೇಶಾಂಗ ಸಚಿವರು ಕೂಡ ನಾಪತ್ತೆಯಾಗಿದ್ದಾರೆ. ಈ ಎಲ್ಲಾ ಘಟನೆಗಳು ಚೀನಾದ ರಾಷ್ಟ್ರಾಧ್ಯಕ್ಷ ಶೀ ಜಿನಪಿಂಗ ಇವರ ವಿರುದ್ಧ ಸೈನ್ಯದಲ್ಲಿನ ವಾತಾವರಣ ಉದ್ರೇಕಗೊಂಡಿದೆ ಎಂದು ಹೇಳಲಾಗುತ್ತಿದೆ. ಒಬ್ಬ ಭಾರತೀಯ ರಕ್ಷಣಾ ತಜ್ಞರು, ಇದೆಲ್ಲವೂ ನೋಡಿದರೆ, ಚೀನಾ ಸೈನ್ಯದಲ್ಲಿ ಏನೋ ಸಂಚಲನ ನಡೆಯುತ್ತಿದೆ. ಪ್ರತಿ ದಿನ ಏನಾದರೂ ಒಂದು ಘಟನೆ ಘಟಿಸುತ್ತಿದ್ದು ಬೇರೆ ಬೇರೆ ಅನುಮಾನಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಚೀನಾ ನೇತೃತ್ವದ ವಿರುದ್ಧ ಸೈನ್ಯದಲ್ಲಿ ವಿದ್ರೋಹದ ವಾತಾವರಣ ನಿರ್ಮಾಣವಾಗಿರುವ ಸಾಧ್ಯತೆಗಳು ಇವೆ ಎಂದು ಹೇಳಿದರು.
೧. ಚೀನಾ ೨೦೧೫ ರಲ್ಲಿ ಅದರ ಕಾರ್ಯತಂತ್ರ ಕ್ಷೇಪಣಿ ಅಸ್ತ್ರ ಇಲಾಖೆಯ ಹೆಸರು ‘ಪಿಎಲ್ಎ ರಾಕೆಟ್ ಫೋರ್ಸ್’ ಎಂದು ಇಟ್ಟಿದ್ದರು. ಪರಮಾಣು ಕ್ಷಿಪಣಿಯ ನೇತೃತ್ವ ಕೂಡ ಈ ಇಲಾಖೆಯ ಬಳಿ ಇದೆ. ಚೀನಾ ೨೦೨೮ ರ ವರೆಗೆ ೧ ಸಾವಿರ ನಕಲಿ ಕ್ಷಿಪಣಿ ತಯಾರಿಸುವ ಧ್ಯೇಯ ಇಟ್ಟಿದೆ.
೨. ಚೀನಾ ಸರಕಾರವು ಲೀ ಯುಚಾವೊ ಇವರನ್ನು ಬಂಧಿಸಿದ್ದು ಅವರ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದೆ. ಲೀ ಯುಚಾವೊ ಇವರ ಪುತ್ರ ಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದು ಅವನು ಚೀನಾ ಸೈನ್ಯದ ರಹಸ್ಯಗಳು ಅಮೆರಿಕಕ್ಕೆ ಮಾರಿದ್ದಾನೆ ಎಂದು ಕೂಡ ಹೇಳಲಾಗುತ್ತಿದೆ.
೩. ಚೀನಾ ಸೈನ್ಯದಲ್ಲಿನ ಅನೇಕ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ‘ರಾಕೆಟ್ ಫೋರ್ಸ್’ ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಮೀಕ್ಷೆ ಕೂಡ ನಡೆಯುತ್ತಿದೆ.