ರಾಜೌರಿ (ಜಮ್ಮು ಕಾಶ್ಮೀರ) – ಇಲ್ಲಿ ೨೪ ಗಂಟೆಗಿಂತಲೂ ಹೆಚ್ಚಿನ ಕಾಲ ಜಿಹಾದಿ ಭಯೋತ್ಪಾದಕರ ಜೊತೆಗೆ ಭದ್ರತಾ ಪಡೆಯೊಂದಿಗೆ ಚಕುಮಕಿ ನಡೆದಿತ್ತು. ಇಲ್ಲಿಯವರೆಗೆ ಈ ಚಕಮಕಿಯಲ್ಲಿ ೨ ಭಯೋತ್ಪಾದಕರು ಹತ್ತರಾಗಿದ್ದಾರೆ ಹಾಗೂ ಭದ್ರತಾ ಪಡೆಯ ೨ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಈ ಚಕಮಕಿಯ ಮೊದಲು ಇಲ್ಲಿ ಶೋಧ ಕಾರ್ಯಾ ನಡೆಯುತ್ತಿರುವಾಗ ಭಯೋತ್ಪಾದಕರು ನಡೆಸಿರುವ ಗುಂಡಿನ ದಾಳಿಯಲ್ಲಿ ಸೈನ್ಯದ ಶ್ವಾನ ಕೆಂಟ್ ಸಾವನ್ನಪ್ಪಿತು. ಕೆಂಟ್ ಶ್ವಾನ ಇದು ಆಕೆಯ ಹ್ಯಾಂಡಲರಿಗೆ (ಪ್ರಾಣಿಗಳಿಗೆ ಪ್ರಶಿಕ್ಷಿತಗೊಳಿಸಿ ಅವುಗಳ ಮೇಲೆ ನಿಯಂತ್ರಣ ಇಡುವವರು) ರಕ್ಷಿಸುವುದಕ್ಕಾಗಿ ತನ್ನ ಪ್ರಾಣ ನೀಡಿರುವುದೆಂದು ಸೈನ್ಯವು ಹೇಳಿದೆ. ಸೈನ್ಯದಿಂದ ಕೆಂಟ್ ಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸೈನ್ಯದಿಂದ ಕೆಂಟ್ ನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಲಾಯಿತು.
ಈ ವಿಡಿಯೋದಲ್ಲಿ, ಕೆಂಟ್ ಕಾಡಿನಲ್ಲಿ ಅಡಗಿರುವ ನುಸುಳುಕೋರರ ಸುಳಿವು ಹುಡುಕುತ್ತಿತ್ತು. ಆ ಸಮಯದಲ್ಲಿ ಕೆಂಟ್ ಒಂದು ಪೊದೆಯ ಹತ್ತಿರ ನಿಂತಿತು ಅಲ್ಲಿ ಓರ್ವ ನುಸುಳುಕೋರ ಕೈ ಮೇಲೆ ಮಾಡಿ ಹೊರ ಬಂದ ನಂತರ ಕೆಂಟ್ ಬೊಗಳುತ್ತಿತ್ತು ಮತ್ತು ನುಸುಳುಕೋರನ ಮೇಲೆ ಹಾರಿತು. ಅದರ ನಂತರ ಸೈನಿಕರು ಆ ನುಸುಳುಕೊರನನ್ನು ಸುತ್ತುವರೆದರು. ಅದರ ನಂತರ ಕೆಂಟ್ ಅದರ ಪ್ರಶಿಕ್ಷಕನ ಹತ್ತಿರ ಹಿಂತಿರುಗಿತು.
J-K: Army bids sombre farewell to soldier killed in Rajouri encounter
Read @ANI Story | https://t.co/tp7SjJgQDd#Rajouri #wreathlaying #soldier #encounter pic.twitter.com/y35VeEtr5w
— ANI Digital (@ani_digital) September 13, 2023