ಇಸ್ಲಾಮಾಬಾದ್ (ಪಾಕಿಸ್ತಾನ) – ಇಲ್ಲಿನ ಸರ್ವೋಚ್ಚ ನ್ಯಾಯಾಲಯದ ಎದುರು ಪಾಕಿಸ್ತಾನದ ಪಶ್ತೂನ್ ಪ್ರದೇಶದ ನಾಯಕರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. `ಪಶ್ತೂನ್ ಜನರ ಧ್ವನಿಯನ್ನು ಕೇಳದಿದ್ದರೆ, ಸ್ವಾತಂತ್ರ್ಯಕ್ಕಾಗಿ ಯುದ್ಧ ನಡೆಯುವುದು’ ಎಂದು ಈ ನಾಯಕರು ಬೆದರಿಕೆ ಹಾಕಿದ್ದಾರೆ. “ನಮ್ಮನ್ನು ಬೇರೆ ರೀತಿಯಲ್ಲಿ ಇಸ್ಲಾಮಾಬಾದ್ ಗೆ ಬರುವಂತೆ ಒತ್ತಾಯಿಸಬೇಡಿ. ಪಾಕಿಸ್ತಾನ ಸೇನೆಗೆ ಕೇವಲ ಗೂಂಡಾಗಿರಿ ಮೇಲೆ ವಿಶ್ವಾಸವಿದೆ. ಇಂತಹ ಸೈನ್ಯಕ್ಕೆ ನಾವು ಏನು ಮಾಡುತ್ತೇವೆ ಎಂದು ನೀವು ನೋಡುತ್ತೀರಿ. 1971 ರಲ್ಲಿ, ಬಂಗಾಳಿ ಜನರು ಸೈನ್ಯವನ್ನು ಹೇಳ ಹೆಸರಿಲ್ಲದಂತೆ ಮಾಡಿದ್ದರು; ಆದರೆ ಪಶ್ತೂನ್ ಜನರು ಸೇನೆಯ ಚರ್ಮವನ್ನು ಸುಲಿದು ತೆಗೆಯುತ್ತಾರೆ,’ ಎಂದು ಎಚ್ಚರಿಸಿದ್ದಾರೆ.
पश्तूनों ने पाकिस्तान से की आजादी की मांग, सेना को दी खुलेआम धमकी, कहा- ‘बांग्लादेशियों ने सिर्फ पतलून उतारी, हम चमड़ी उतार देंगे’#Pakistan #PashteenProtest #SupremeCourthttps://t.co/9qGxSam2il
— ABP News (@ABPNews) August 20, 2023
`ಪಶ್ತೂನ್ ತಹಫುಜ್ ಮೂವಮೆಂಟ್’ಈ ಸಂಗಟನೆಯ ಮುಖ್ಯಸ್ಥ ಮಂಜೂರ್ ಪಶ್ತೀನ್ ಇವರು, ಬಲೂಚಿಸ್ತಾನ್, ಸಿಂಧ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಪಂಜಾಬ್ ಪ್ರಾಂತ್ಯಗಳ ಅಂಚಿನಲ್ಲಿರುವ ಪ್ರಾಂತ್ಯಗಳ ನಿರ್ಲಕ್ಷಿತ ಪಂಗಡದವರು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದರು.