ಪಾಕಿಸ್ತಾನವನ್ನು ಬದಿಗಿರಿಸುವ ಆವಶ್ಯಕತೆ ! – ಕೇಂದ್ರ ರಾಜ್ಯ ಸಚಿವ ಮತ್ತು ಮಾಜಿ ಸೈನ್ಯದಳ ಪ್ರಮುಖ ವಿ.ಕೆ. ಸಿಂಹ !

ನವ ದೆಹಲಿ – ಕಾಶ್ಮೀರದ ಅನಂತನಾಗದಲ್ಲಿನ ಚಕಮಕಿಯಲ್ಲಿ ಭಾರತದ ೫ ಸೈನ್ಯಾಧಿಕಾರಿ ಮತ್ತು ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆಯ ನಂತರ ಮಾಜಿ ಸೈನ್ಯದಳ ಪ್ರಮುಖ ಮತ್ತು ಕೇಂದ್ರ ರಾಜ್ಯ ಸಚಿವ ವಿ.ಕೆ. ಸಿಂಹ ಇವರು, ‘ಪಾಕಿಸ್ತಾನವನ್ನು ಒಬ್ಬಂಟಿಯಾಗಿ ಮಾಡುವ ಅವಶ್ಯಕತೆ ಇದೆ. ಕೆಲವು ಸಮಯ ಕ್ರಿಕೆಟ್ ಆಟಗಾರರು ಮುಂದೆ ಬರುತ್ತಾರೆ, ಕೆಲವು ಸಮಯ ಚಲನಚಿತ್ರ ನಿರ್ಮಾಪಕರು ಮುಂದೆ ಬರುತ್ತಾರೆ; ಆದರೆ ಪಾಕಿಸ್ತಾನವನ್ನು ಒಬ್ಬಂಟಿಯಾಗಿ ಮಾಡುವುದು ಅವಶ್ಯಕವಾಗಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಪಂದ್ಯ ಆಡುವುದು ಹಾಗೂ ಭಾರತೀಯ ಚಲನಚಿತ್ರ ನಿರ್ಮಾಪಕರ ಮೂಲಕ ಪಾಕಿಸ್ತಾನಿ ಕಲಾವಿದರಿಗೆ ಭಾರತೀಯ ಚಲನಚಿತ್ರದಲ್ಲಿ ಕೆಲಸ ನೀಡುವುದು, ಇದನ್ನು ಯಾರು ಬೆಂಬಲಿಸುತ್ತಾರೆ ಅವರನ್ನು ಟೀಕಿಸಿದರು.

ವಿ.ಕೆ .ಸಿಂಹ ಮಾತು ಮುಂದುವರಿಸುತ್ತಾ, ಪಾಕಿಸ್ತಾನ ಎಲ್ಲಿಯವರೆಗೆ ಒಬ್ಬಂಟಿ ಮಾಡುವುದಿಲ್ಲ, ಅಲ್ಲಿಯವರೆಗೆ ‘ಭಯೋತ್ಪಾದಕರ ದಾಳಿ ನಡೆಯುವುದು ಸಾಮಾನ್ಯ ವಿಷಯವಾಗಿದೆ’, ಎಂದು ಅದಕ್ಕೆ ಅನಿಸುತ್ತದೆ. ಎಲ್ಲಿಯವರೆಗೆ ನನ್ನ (ಪಾಕಿಸ್ತಾನದ) ಪರಿಸ್ಥಿತಿ ಸಾಮಾನ್ಯವಾಗುವುದಿಲ್ಲ, ಅಲ್ಲಿಯವರೆಗೆ ಇತರರ ಜೊತೆಗೆ ಅದರ ಸಂಬಂಧ ಸಾಮಾನ್ಯವಾಗುವುದಿಲ್ಲ ಇದನ್ನು ಅದು ಗಮನದಲ್ಲಿಟ್ಟುಕೊಳ್ಳಬೇಕು.

ಸಂಪಾದಕೀಯ ನಿಲುವು

ವಿ.ಕೆ. ಸಿಂಹ ಏನು ಹೇಳುತ್ತಿದ್ದಾರೆ, ಅದೇ ಸಾಮಾನ್ಯ ಜನರಿಗೆ ಕೂಡ ಅನಿಸುತ್ತಿದೆ. ಸರಕಾರ ಇದನ್ನು ಮಾಡುವುದಕ್ಕಾಗಿ ಹೆಜ್ಜೆ ಇಡುವುದು ಅಪೇಕ್ಷಿತವಾಗಿದೆ !