ಸಂಬಂಧ ಸುಧಾರಿಸಲು ಲಡಾಖ ಗಡಿಯಲ್ಲಿ ಶಾಂತಿ ನಿರ್ಮಾಣ ಮಾಡುವುದು ಆವಶ್ಯಕ !

ಬ್ರಿಕ್ಸ್ ಪರಿಷತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಶೀ ಜೀನಪಿಂಗ ಇವರ ಭೇಟಿ

ಪ್ರಧಾನಮಂತ್ರಿ ಮೋದಿ ಇವರ ಮತ್ತು ಜೀನಪಿಂಗ ಇವರ ಪ್ರತಿಪಾದನೆ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾದ ರಾಷ್ಟ್ರಪತಿ ಶೀ ಜೀನಪಿಂಗ

ನವ ದೆಹಲಿ – ದಕ್ಷಿಣ ಆಫ್ರಿಕಾದಲ್ಲಿನ ಜೋಹಾನ್ಸಬರ್ಗದಲ್ಲಿ ಬ್ರಿಕ್ಸ್ ದೇಶದ ಸಭೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾದ ರಾಷ್ಟ್ರಪತಿ ಶೀ ಜೀನಪಿಂಗ ಇವರಲ್ಲಿ ತ್ವರಿತ ಭೇಟಿ ನಡೆಯಿತು. ಆ ಸಮಯದಲ್ಲಿ ಶಿ ಜೀನಪಿಂಗ ಇವರ ಜೊತೆ ಮಾತನಾಡುವಾಗ ಪ್ರಧಾನಮಂತ್ರಿ ಮೋದಿ ಇವರು ‘ಭಾರತ ಮತ್ತು ಚೀನಾ ಇವರಲ್ಲಿನ ಸಂಬಂಧ ಸುಧಾರಿಸುವುದಕ್ಕಾಗಿ ಲಡಾಖನ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಶಾಂತಿ ಪ್ರಸ್ತಾಪಿತವಾಗುವುದು ಅವಶ್ಯಕವಾಗಿದೆ’, ಎಂದು ಪ್ರತಿಪಾದಿಸಿದರು. ‘ಈ ಭೇಟಿಯಲ್ಲಿ ಅಧಿಕಾರಿಸ್ತರದಲ್ಲಿ ನಡೆಯುವ ದ್ವಿಪಕ್ಷಿಯ ಚರ್ಚೆಯ ವ್ಯಾಪ್ತಿ ಹೆಚ್ಚಿಸುವುದರ ಬಗ್ಗೆ ಇಬ್ಬರಲ್ಲಿ ಒಮ್ಮತವಾಗಿದೆ’, ಎಂದು ವಿದೇಶಾಂಗ ಸಚಿವಾಲಯದ ಸಚಿವ ವಿನಯ ಕ್ವಾತ್ರ ಇವರು ಮಾಹಿತಿ ನೀಡಿದರು.

ಕ್ವಾತ್ರ ಇವರು, ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡುವುದು ಮತ್ತು ಪ್ರತ್ಯಕ್ಷ ನಿಯಂತ್ರಣ ರೇಖೆಯನ್ನು ಗೌರವಿಸುವುದು, ಇದು ಭಾರತ-ಚೀನಾ ಸಂಬಂಧ ಸುಧಾರಿಸುವುದಕ್ಕಾಗಿ ಆವಶ್ಯಕವಾಗಿದೆ, ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. ಈ ಹಿನ್ನೆಲೆಯಲ್ಲಿ ಗಡಿಯಲ್ಲಿನ ಬಿಗುವಿನ ವಾತಾವರಣ ಕಡಿಮೆ ಮಾಡಲು ನಡೆಯುತ್ತಿರುವ ಸೈನ್ಯದ ಅಧಿಕಾರಿ ಮಟ್ಟದಲ್ಲಿ ಚರ್ಚೆಯ ಗತಿ ಹೆಚ್ಚಿಸುವುದಕ್ಕೆ ಪರಸ್ಪರರ ಅಧಿಕಾರಿಗಳಿಗೆ ಆದೇಶ ನೀಡುವುದರ ಬಗ್ಗೆ ಇಬ್ಬರು ನಾಯಕರು ಒಪ್ಪಿಗೆ ಸೂಚಿಸಿದ್ದಾರೆ.