ಭಾರತವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ !

  • ಪಾಕಿಸ್ತಾನದ ಆರೋಪ; ಆದರೆ ರಕ್ಷಣಾ ಸಚಿವಾಲಯದಿಂದ ನಿರಾಕರಣೆ

  • ನಾಳೆ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದರೂ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವಲ್ಲಿ ಪಾಕಿಸ್ತಾನ ಅಸಮರ್ಥವಾಗಿದೆ. ಎನ್ನುವುದೂ ಅಷ್ಟೇ ಸತ್ಯ !

(ಸರ್ಜಿಕಲ್ ಸ್ಟ್ರೈಕ್ ಎಂದರೆ ನಿಗದಿತ ಸ್ಥಳದಲ್ಲಿ ಸೇನಾ ದಾಳಿ, ಇದರಿಂದ ಅಕ್ಕ ಪಕ್ಕದ ಪರಿಸರದ ಹಾನಿಯಾಗುವುದಿಲ್ಲ.)

ನವ ದೆಹಲಿ – ಒಂದು ಹಿಂದಿ ದಿನಪತ್ರಿಕೆಯಲ್ಲಿ ನೀಡಿರುವ ಮಾಹಿತಿಯನುಸಾರ ಆಗಸ್ಟ್ 19 ರ ರಾತ್ರಿ ಭಾರತವು ಪಾಕಿಸ್ತಾನದ ಗಡಿಯನ್ನು ಪ್ರವೇಶಿಸಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ. ಭಾರತೀಯ ಸೇನೆಯ ವಿಶೇಷ ಪಡೆಗಳ 12 ರಿಂದ 15 ಕಮಾಂಡೋಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ತಾರಕುಂಡಿ ಸೆಕ್ಟರ್ ಮತ್ತು ಪೂಂಛನ ಭಿಂಭರ್ ಗಲ್ಲಿಯಲ್ಲಿ ರಾತ್ರಿಯ ಸಮಯದಲ್ಲಿ ನಡೆದುಕೊಂಡು ಪ್ರತ್ಯಕ್ಷ ನಿಯಂತ್ರಣ ರೇಖೆಯನ್ನು ದಾಟಿದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸುಮಾರು 2.5 ಕಿಮೀ ಪ್ರವೇಶಿಸಿದ ನಂತರ ಕೋಟ್ಲಿ ಜಿಲ್ಲೆಯಲ್ಲಿರುವ ಭಯೋತ್ಪಾದಕರ 4 ‘ಲಾಂಚಿಂಗ್ ಪ್ಯಾಡ್’ (ಶಸ್ತ್ರಾಸ್ತ್ರಗಳು ಅಥವಾ ರಾಕೆಟ ಹಾರಿಸುವ ನಿಯೋಜಿತ ಸ್ಥಳ)ಗಳನ್ನು ನಾಶಪಡಿಸಿದರು. ಕನಿಷ್ಠ 7-8 ಭಯೋತ್ಪಾದಕರನ್ನು ಹತ್ಯೆ ಮಾಡಿದರು ಎಂದು ಹೇಳಿದೆ. ಆದರೆ ಕೇಂದ್ರ ರಕ್ಷಣಾ ಸಚಿವಾಲಯ ಈ ಕ್ರಮವನ್ನು ನಿರಾಕರಿಸಿ ಹೇಳಿದೆ ಅಂತಹ ‘ಸರ್ಜಿಕಲ್ ಸ್ಟ್ರೈಕ್’ ನಡೆದಿಲ್ಲ. ಪಾಕಿಸ್ತಾನದಿಂದ ಭಾರತದೊಳಗೆ ನುಸುಳುವ ಭಯೋತ್ಪಾದಕರ ಯತ್ನವನ್ನು ಭಾರತ ವಿಫಲಗೊಳಿಸಿದೆ ಎಂದು ಹೇಳಿದರು.

ಸಚಿವಾಲಯವು ನೀಡಿದ ಮಾಹಿತಿಯನುಸಾರ ಜಮ್ಮು ಮತ್ತು ಕಾಶ್ಮೀರದ ಬಾಲಾಕೋಟ್ ಸೆಕ್ಟರ್ ನಲ್ಲಿ ಭಯೋತ್ಪಾದಕರ ಗುಂಪೊಂದು ನುಸುಳಲು ಪ್ರಯತ್ನಿಸುತ್ತಿತ್ತು. ಆಗಸ್ಟ್ 21 ರ ಬೆಳಿಗ್ಗೆ, ಹವಾಮಾನ ವೈಪರಿತ್ಯದ ಲಾಭವನ್ನು ಪಡೆದುಕೊಂಡು ಎಲ್ಒಸಿ ದಾಟಲು ಪ್ರಯತ್ನಿಸುತ್ತಿರುವುದನ್ನು ಭಾರತೀಯ ಸೈನಿಕರು ಗಮನಿಸಿದರು. ಈ ವೇಳೆ ಯೋಧರು ಭಾರಿ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದರು. ಕನಿಷ್ಠ 1 ಭಯೋತ್ಪಾದಕ ಸ್ಥಳದಲ್ಲೇ ಕೊಲ್ಲಲ್ಪಟ್ಟನು ಮತ್ತು ಇತರ ಭಯೋತ್ಪಾದಕರು ಹಿಂದಕ್ಕೆ ಸರಿದರು. ಇದಾದ ಬಳಿಕ ಯೋಧರು ಶೋಧ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಒಂದು ಎಕೆ-47, ಎರಡು ಮ್ಯಾಗಜೀನ್ಗಳು, ಎರಡು ಗ್ರೆನೇಡ್ ಗಳು, 30 ಜೀವಂತ ಕಾಟ್ರಿಡ್ಜ್ಗಳು ಮತ್ತು ಪಾಕಿಸ್ತಾನದಲ್ಲಿ ತಯಾರಿಸಿದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಮೂಲದಲ್ಲಿ ಪಾಕಿಸ್ತಾನದಿಂದ ನಿರಂತರವಾಗಿ ನಡೆಯುತ್ತಿರುವ ಭಯೋತ್ಪಾದಕರ ಒಳನುಸುಳುವಿಕೆಯನ್ನು ‘ಸರ್ಜಿಕಲ್ ಸ್ಟ್ರೈಕ್’ ಇತ್ಯಾದಿ ಮಾಡುವುದಕ್ಕಿಂತ ಪಾಕಿಸ್ತಾನಕ್ಕೆ ಒಂದೇ ಸಲಕ್ಕೆ ಕೊನೆಗೊಳಿಸಲು ಪ್ರಯತ್ನಿಸಬೇಕು.