ಭಾರತದಲ್ಲಿ ಹಿಂದೂಗಳದ್ದೇ ಹೆಚ್ಚಿನ ಮತಾಂತರ ! – ‘ಪ್ಯೂ ರಿಸರ್ಚ್ ಸೆಂಟರ್’ನ ಸಮೀಕ್ಷೆ

ಕ್ರೈಸ್ತ ಮಿಷನರಿಗಳು ಸಮಾಜಸೇವೆಯ ಹೆಸರಿನಲ್ಲಿ ಕೇವಲ ಹಿಂದೂಗಳನ್ನು ಮತಾಂತರಿಸಲು ಭಾರತದಲ್ಲಿ ಕಾರ್ಯನಿರತವಾಗಿವೆ. ಅದರ ಆಚೆಗೆ ಅವರಿಗೆ ಯಾವುದೇ ಉದ್ದೇಶವಿರುವುದಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಈ ಬಗ್ಗೆ ತಥಾಕಥಿತ ಜಾತ್ಯತೀತವಾದಿಗಳು ಮತ್ತು ಪ್ರಗತಿ(ಅಧೋಗತಿ)ಪರರು ಎಂದಾದರೂ ಬಾಯಿ ತೆರೆಯುವರೇ ?

ಭಯೋತ್ಪಾದನಾ ಚಟುವಟಿಕೆಗಳಿಗೆ ಡ್ರೋನ್‍ಅನ್ನು ಬಳಸುವ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅದನ್ನು ತಡೆಗಟ್ಟುವುದು ಅವಶ್ಯಕ !

ಭಯೋತ್ಪಾದಕ ಚಟುವಟಿಕೆಗಳಿಗಾಗಿ ಡ್ರೋನ್‍ಅನ್ನು ಉಪಯೋಗಿಸುವುದರ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಭವಿಷ್ಯದಲ್ಲಿ ಅದರ ಮೇಲೆ ಹಿಡಿತ ಸಾಧಿಸಲು ಕಠಿಣವಾಗಬಹುದು, ಎಂದ್ಲು ಭಾರತವು ಇಲ್ಲಿಯ ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಅಂಶವನ್ನು ಮಂಡಿಸಿತು.

ಪಾಕಿಸ್ತಾನಿ ಚಿತ್ರರಂಗದ ನಿರ್ಮಾಪಕರು ಅಶ್ಲೀಲತೆಯನ್ನು ಪ್ರಸಾರ ಮಾಡುವ ಭಾರತೀಯ ಚಿತ್ರರಂಗದ ಅನುಕರಣೆಯನ್ನು ಮಾಡುವುದನ್ನು ನಿಲ್ಲಿಸಬೇಕು ! – ಪಾಕ್ ಪ್ರಧಾನಿ ಇಮ್ರಾನ್ ಖಾನ್

ಅಶ್ಲೀಲತೆಯ ಪ್ರಸಾರವನ್ನು ಮಾಡುವ ಭಾರತೀಯ ಚಿತ್ರರಂಗದ ಅನುಕರಣೆಯನ್ನು ಪಾಕಿಸ್ತಾನಿ ಚಿತ್ರರಂಗವು ನಿಲ್ಲಿಸಬೇಕು, ಎಂದು ಪಾಕ್‍ನ ಪ್ರಧಾನಿ ಇಮ್ರಾನ್ ಖಾನ್ ಕರೆ ನೀಡಿದ್ದಾರೆ. ಅವರು ಇಲ್ಲಿ ‘ಶಾರ್ಟ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮಾತಾಡುತ್ತಿದ್ದರು.

ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಆಶ್ರಯ ನೀಡುವ ದೇಶವು ಅಪರಾಧಿ !

ಕಳೆದ ಕೆಲವು ದಶಕಗಳಿಂದ ಗಡಿಯಲ್ಲಾಗುತ್ತಿರುವ ಭಯೋತ್ಪಾದನೆಗೆ ಭಾರತವು ಬಲಿ ಆಗುತ್ತಿದೆ. ಭಯೋತ್ಪಾದನೆಯನ್ನು ಬೆಂಬಲಿಸುವ ಹಾಗೂ ಅವರಿಗೆ ಆಶ್ರಯ ನೀಡುವ ದೇಶವು ಇದಕ್ಕೆ ಕಾರಣಕರ್ತವಾಗಿದೆ ಎಂದು ಭಾರತವು ವಿಶ್ವ ಸಂಸ್ಥೆಯಲ್ಲಿ ಪಾಕ್‍ನ ಹೆಸರನ್ನು ಹೇಳದೇ ಟೀಕಿಸಿದೆ.

ಜರ್ಮನಿಯಲ್ಲಿ ಚಾಕೂನಿಂದ ದಾಳಿ ನಡೆಸಿದ ಯುವಕ : ಕೆಲವರ ಸಾವು !

ಜರ್ಮನಿಯ ವುರ್ಜಬರ್ಗ್ ಪಟ್ಟಣದ ಬಾರ್ಬಾರೊಸಾ ವೃತ್ತದಲ್ಲಿ ಜೂನ್ ೨೬ ರಂದು ಸಂಜೆ ಓರ್ವ ಯುವಕನು ಚಾಕೂವಿನಿಂದ ದಾಳಿ ನಡೆಸಿದಾಗ ಕೆಲವರು ಸಾವನ್ನಪ್ಪಿದರು, ಹಾಗೂ ಕೆಲವರು ಗಾಯಗೊಂಡರು. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆತ ಗಾಯಗೊಂಡ ನಂತರ ಆತನನ್ನು ಬಂಧಿಸಲಾಯಿತು.

ಪಾಕ್‍ನಲ್ಲಿ ಭಯೋತ್ಪಾದಕರಿಗೆ ಆಶ್ರಯ ಮತ್ತು ಪಿಂಚಣಿ ನೀಡಲಾಗುತ್ತದೆ !

ಪಾಕಿಸ್ತಾನದಲ್ಲಿ ಪ್ರತಿವರ್ಷ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ೧ ಸಾವಿರಕ್ಕೂ ಹೆಚ್ಚು ಯುವತಿಯರನ್ನು ಬಲವಂತವಾಗಿ ಮತಾಂತರಿಸಲಾಗುತ್ತದೆ. ಹಿಂದು, ಕ್ರೈಸ್ತ, ಅಹಮದಿಯಾ, ಸಿಖ್ ಸಹಿತ ಇತರ ಅಲ್ಪಸಂಖ್ಯಾತರನ್ನು ಕಾನೂನುರೀತ್ಯಾ ನ್ಯಾಯಾಂಗ ವ್ಯವಸ್ಥೆಯ ಬದಲು ಸಮಾನ ನ್ಯಾಯವ್ಯವಸ್ಥೆಯ ಮಾಧ್ಯಮದಿಂದ ಹಿಂಸಿಸಲಾಗುತ್ತದೆ, ಇದು ಪಾಕಿಸ್ತಾನದಲ್ಲಿ ಸರ್ವೆ ಸಾಮಾನ್ಯ ಎಂದು ತಿಳಿಯಲಾಗುತ್ತದೆ.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ‘ಸುಪರಲೆಟಿವ್ ಪ್ರೊಜೆಕ್ಷನ್ ಅವಾರ್ಡ್’ (ಅತ್ಯುತ್ತಮ ಪ್ರಸ್ತುತಿ ಪ್ರಶಸ್ತಿ) !

ವಿಶ್ವವಿದ್ಯಾಲಯ ಅಮೇರಿಕಾದ ಪೂ. (ಸೌ.) ಭಾವನಾ ಶಿಂದೆ ಅವರು ‘ಆಭರಣವು ಆಧ್ಯಾತ್ಮಿಕ ಮಟ್ಟದಲ್ಲಿ ಮಹಿಳೆಯರ ಮೇಲೆ ಯಾವ ಪರಿಣಾಮ ಬೀರುತ್ತದೆ?’ ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಪರಾತ್ಪರ ಗುರು ಡಾ. ಆಠವಲೆಯವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು. ಪೂ. (ಸೌ.) ಭಾವನಾ ಶಿಂದೆ ಸಹಲೇಖಕರಾಗದ್ದಾರೆ.

ಮೈಕ್ರೋಸಾಫ್ಟ್ ಅಧ್ಯಕ್ಷರಾಗಿ ನೇಮಕಗೊಂಡ ಭಾರತೀಯ ಮೂಲದ ಸತ್ಯಾ ನಾಡೆಲ್ಲಾ !

ವಿಶ್ವದ ಸಾಫ್ಟ್‌ವೇರ್ ತಯಾರಿಕಾ ದೈತ್ಯ ‘ಮೈಕ್ರೋಸಾಫ್ಟ್ ಕಾರ್ಪೊರೇಶನ್’ನ ಅಧ್ಯಕ್ಷರಾಗಿ ಭಾರತೀಯ ಮೂಲದ ಸತ್ಯಾ ನಾಡೆಲಾ ಅವರನ್ನು ನೇಮಿಸಲಾಗಿದೆ. ೫೩ ವರ್ಷದ ನಾಡೆಲಾ ಅವರನ್ನು ೨೦೧೪ ರಲ್ಲಿ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಎಂದು ನೇಮಿಸಲಾಗಿತ್ತು.

ಕೊರೊನಾ ಕಾಲದಲ್ಲಿ ಭಾರತಕ್ಕೆ ಸಹಾಯ ಮಾಡುವ ಹೆಸರಿನಲ್ಲಿ ಪಾಕಿಸ್ತಾನಿ ಸಂಸ್ಥೆಯಿಂದ ಕೋಟಿಗಟ್ಟಲೆ ರೂಪಾಯಿ ಸಂಗ್ರಹ !

ಈ ಸೇವಾ ಸಂಸ್ಥೆಗಳು ಪಾಕಿಸ್ತಾನದ ಸೈನ್ಯದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಾಕಿಸ್ತಾನದ ಸೈನ್ಯದ ಹೇಳಿಕೆಗನುಸಾರ, ಈ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಶಂಕಿಸಲಾಗಿದೆ. ಆದ್ದರಿಂದ ಇದೇ ಕೋಟಿಗಟ್ಟಲೆ ರೂಪಾಯಿಗಳನ್ನು ಭಾರತದ ವಿರುದ್ಧದ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬಳಸುವ ಸಾಧ್ಯತೆಯಿದೆ.

ಕುಲಭೂಷಣ ಜಾಧವ ಅವರಿಗೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಪಾಕಿಸ್ತಾನ ಸಂಸತ್ತಿನಿಂದ ಮಾನ್ಯತೆ

ಅಂತರರಾಷ್ಟ್ರೀಯ ನ್ಯಾಯಾಲಯದ ಒತ್ತಡಕ್ಕೆ ಮಣಿದ ಪಾಕಿಸ್ತಾನದ ‘ನ್ಯಾಶನಲ್ ಅಸೆಂಬ್ಲಿ’ಯು ಭಾರತದ ಮಾಜಿ ನೌಕಾ ಅಧಿಕಾರಿ ಕುಲಭೂಷಣ ಜಾಧವ ಅವರಿಗೆ ಹಿರಿಯ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಮಸೂದೆಗೆ ಅನುಮೋದನೆ ನೀಡಿದೆ. ಇದರಿಂದ ಕುಲಭೂಷಣ್ ಜಾಧವ ಅವರಿಗೆ ದೊಡ್ಡ ಸಾಂತ್ವನ (ಸಮಾಧಾನ) ಸಿಕ್ಕಿದೆ.