ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪರಿಷತ್ತಿನಲ್ಲಿ ಭಾರತದಿಂದ ಪಾಕಿಸ್ತಾನದ ಮೇಲೆ ಟೀಕೆ !
ಭಾರತವು ಇಂತಹ ಟೀಕೆಗಳನ್ನು ಮಾಡುವ ಬದಲು ಪಾಕ್‍ಗೆ ಶಾಶ್ವತವಾದ ಪಾಠ ಕಲಿಸುವುದು ಅಗತ್ಯವಿದೆ ! ಇಂತಹ ಟೀಕೆಯಿಂದ ಯಾವುದೇ ರೀತಿಯ ವಿಶೇಷ ಪರಿಣಾಮ ಬೀರಿರುವುದು ಕಂಡು ಬಂದಿಲ್ಲ !
ಜೆನೆವಾ (ಸ್ವಿಜರಲ್ಯಾಂಡ್) – ಪಾಕಿಸ್ತಾನವು ತನ್ನ ರಾಷ್ಟ್ರೀಯ ಧೋರಣೆಯ ಹೆಸರಿನಡಿಯಲ್ಲಿ ಅಪಾಯಕಾರಿ ಮತ್ತು ಭಯೋತ್ಪಾದಕರೆಂದು ಘೋಷಿಸಲ್ಪಟ್ಟವರಿಗೆ ಪಿಂಚಣಿ ನೀಡುತ್ತದೆ. ಅದೇರೀತಿ ಅದು ಇಂತಹವರಿಗೆ ಆಶ್ರಯವನ್ನೂ ನೀಡುತ್ತದೆ. ಇದರಿಂದ ಇನ್ನು ಪಾಕಿಸ್ತಾನವನ್ನು ಭಯೋತ್ಪಾದಕರಿಗೆ ಸಹಾಯ ಮಾಡುವುದು ಮತ್ತು ಭಯೋತ್ಪಾದನೆ ಹೆಚ್ಚಾಗಲು ಕಾರಣಕರ್ತರೆಂದು ನಿರ್ಧರಿಸುವ ಸಮಯ ಬಂದಿದೆ, ಈ ರೀತಿ ಭಾರತವು ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಷತ್ತಿನ ಒಂದು ಸತ್ರದಲ್ಲಿ ಪಾಕಿಸ್ತಾನದ ಬಗ್ಗೆ ಕಠೋರವಾಗಿ ಟೀಕೆಯನ್ನು ಮಾಡಿದೆ. ಕಾಶ್ಮೀರದ ಬಗ್ಗೆ ಒಂದು ವರದಿಯ ಬಗ್ಗೆ ಭಾರತವು ತನ್ನ ಪಕ್ಷವನ್ನು ಮಂಡಿಸಿತು.
Pakistan providing pension to terrorists, must be held accountable: India https://t.co/GgmEryGHCX
— Hindustan Times (@HindustanTimes) June 23, 2021
ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತವಾದ ಅಭಿಯಾನದ ಮೊದಲನೇ ಸಚಿವ ಪವನ್ ಕುಮಾರ್ ಬಾಧೆ ಇವರು ಭಾರತದ ನಿಲುವನ್ನು ಸ್ಪಷ್ಟಪಡಿಸಿದರು ಅವರು, ನಾವು ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಯುವತಿಯರ ಅಪಹರಣ, ಅತ್ಯಾಚಾರ ಮತ್ತು ಬಲವಂತದ ಮತಾಂತರ, ಅದೇರೀತಿ ವಿವಾಹದ ವಾರ್ತೆಯನ್ನು ಕೇಳಿದ್ದೇವೆ. ಪಾಕಿಸ್ತಾನದಲ್ಲಿ ಪ್ರತಿವರ್ಷ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ೧ ಸಾವಿರಕ್ಕೂ ಹೆಚ್ಚು ಯುವತಿಯರನ್ನು ಬಲವಂತವಾಗಿ ಮತಾಂತರಿಸಲಾಗುತ್ತದೆ. ಹಿಂದು, ಕ್ರೈಸ್ತ, ಅಹಮದಿಯಾ, ಸಿಖ್ ಸಹಿತ ಇತರ ಅಲ್ಪಸಂಖ್ಯಾತರನ್ನು ಕಾನೂನುರೀತ್ಯಾ ನ್ಯಾಯಾಂಗ ವ್ಯವಸ್ಥೆಯ ಬದಲು ಸಮಾನ ನ್ಯಾಯವ್ಯವಸ್ಥೆಯ ಮಾಧ್ಯಮದಿಂದ ಹಿಂಸಿಸಲಾಗುತ್ತದೆ, ಇದು ಪಾಕಿಸ್ತಾನದಲ್ಲಿ ಸರ್ವೆ ಸಾಮಾನ್ಯ ಎಂದು ತಿಳಿಯಲಾಗುತ್ತದೆ. ಪಾಕ್‍ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಪವಿತ್ರ ಹಾಗೂ ಪ್ರಾಚೀನ ಸ್ಥಳಗಳ ಮೇಲೆ ದಾಳಿ ಮಾಡಿ ಅದನ್ನು ಧ್ವಂಸ ಮಾಡಲಾಗುತ್ತಿರುವ ಘಟನೆಗಳೂ ನಡೆದಿವೆ ಎಂದು ಹೇಳಿದ್ದಾರೆ.