ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಆಶ್ರಯ ನೀಡುವ ದೇಶವು ಅಪರಾಧಿ !

ವಿಶ್ವಸಂಸ್ಥೆಯಲ್ಲಿ ಭಾರತದಿಂದ ಪಾಕ್‍ನ ಹೆಸರು ಹೇಳದೇ ಟೀಕೆ !

ಜಾಗತಿಕ ಮಟ್ಟದಲ್ಲಿ ಪಾಕ್‍ನ ಹೆಸರನ್ನು ಸಹ ಹೇಳದಿರುವ ಭಾರತವು ಎಂದಾದರೂ ಪಾಕ್‍ಪುರಸ್ಕೃತ ಭಯೋತ್ಪಾದನೆಯನ್ನು ಮತ್ತು ಪಾಕ್‍ಅನ್ನು ನಾಶ ಮಾಡುವ ಧೈರ್ಯ ತೋರುವುದೇ ? ಭಾರತದ ಈ ರೀತಿಯ ನಿಲುವಿನಿಂದ ದೇಶದಲ್ಲಿ ಕಳೆದ ೩ ದಶಕಗಳಿಂದ ನಡೆಯುತ್ತಿರುವ ಜಿಹಾದಿ ಭಯೋತ್ಪಾದನೆ ನಾಶವಾಗಲಿಲ್ಲ, ಇದುವೇ ನೈಜಸ್ಥಿತಿಯಾಗಿದೆ !

ನ್ಯೂಯಾರ್ಕ್ – ಕಳೆದ ಕೆಲವು ದಶಕಗಳಿಂದ ಗಡಿಯಲ್ಲಾಗುತ್ತಿರುವ ಭಯೋತ್ಪಾದನೆಗೆ ಭಾರತವು ಬಲಿ ಆಗುತ್ತಿದೆ. ಭಯೋತ್ಪಾದನೆಯನ್ನು ಬೆಂಬಲಿಸುವ ಹಾಗೂ ಅವರಿಗೆ ಆಶ್ರಯ ನೀಡುವ ದೇಶವು ಇದಕ್ಕೆ ಕಾರಣಕರ್ತವಾಗಿದೆ ಎಂದು ಭಾರತವು ವಿಶ್ವ ಸಂಸ್ಥೆಯಲ್ಲಿ ಪಾಕ್‍ನ ಹೆಸರನ್ನು ಹೇಳದೇ ಟೀಕಿಸಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಸ್ಥಾಯಿ ಪ್ರತಿನಿಧಿಯಾಗಿರುವ ರಾಯಭಾರಿ ಟಿ.ಎಸ್. ತಿರುಮೂರ್ತಿಯವರು ಈ ಟೀಕೆಯನ್ನು ಮಾಡಿದ್ದಾರೆ. ‘ಕೊವಿಡ್-19 ನಂತರದ ಪರಿಸ್ಥಿತಿಯಲ್ಲಿ ಭಯೋತ್ಪಾದನೆಯ ಆರ್ಥಿಕ ಸಹಾಯವನ್ನು ತಡೆಗಟ್ಟುವುದು’ ಈ ವಿಷಯದಲ್ಲಿ ನಡೆದ ಚರ್ಚೆಯಲ್ಲಿ ಅವರು ಮಾತನಾಡುತ್ತಿದ್ದರು. ‘ಭಯೋತ್ಪಾದನೆಯ ವಿಪತ್ತನ್ನು ಯಶಸ್ವೀಯಾಗಿ ನಾಶ ಮಾಡಲು ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಸಿಗುವುದನ್ನು ತಡೆಗಟ್ಟುವುದು ಮಹತ್ವದ್ದಾಗಿದೆ’, ಎಂದೂ ಕೂಡ ತಿರುಮೂರ್ತಿಯವರು ಹೇಳಿದರು.