ಭಯೋತ್ಪಾದನಾ ಚಟುವಟಿಕೆಗಳಿಗೆ ಡ್ರೋನ್‍ಅನ್ನು ಬಳಸುವ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅದನ್ನು ತಡೆಗಟ್ಟುವುದು ಅವಶ್ಯಕ !

ಭಯೋತ್ಪಾದಕರಿಂದ ಡ್ರೋನ್ ಬಳಕೆಯಾಗುತ್ತಿರುವ ಅಂಶವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಿದ ಭಾರತ !

ನ್ಯುಯಾರ್ಕ್ (ಅಮೇರಿಕಾ) – ರಕ್ಷಣಾ ಮತ್ತು ಆಸ್ತಿಯ ಮೇಲೆ ಸಶಸ್ತ್ರ ಡ್ರೋನ್‍ಗಳನ್ನು ಬಳಸುತ್ತಿರುವ ಬಗ್ಗೆ ಗಮನ ವಹಿಸುವುದು ಅಗತ್ಯವಿದೆ. ಭಯೋತ್ಪಾದಕರು ಗಡಿಯಿಂದ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡಲು ಡ್ರೋನ್‍ಅನ್ನು ಉಪಯೋಗಿಸುತ್ತಿರುವುದು ತಪಾಸಣೆಯ ಸಮಯದಲ್ಲಿ ಬೆಳಕಿಗೆ ಬಂದಿದೆ. ಭಯೋತ್ಪಾದಕ ಚಟುವಟಿಕೆಗಳಿಗಾಗಿ ಡ್ರೋನ್‍ಅನ್ನು ಉಪಯೋಗಿಸುವುದರ ಬಗ್ಗೆ ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಭವಿಷ್ಯದಲ್ಲಿ ಅದರ ಮೇಲೆ ಹಿಡಿತ ಸಾಧಿಸಲು ಕಠಿಣವಾಗಬಹುದು, ಎಂದ್ಲು ಭಾರತವು ಇಲ್ಲಿಯ ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ಅಂಶವನ್ನು ಮಂಡಿಸಿತು.

ವಿಶ್ವ ಸಂಸ್ಥೆಯ ಸದಸ್ಯ ದೇಶಗಳ ಭಯೋತ್ಪಾದನಾ ವಿರೋಧಿ ಪಡೆಯ ಮುಖ್ಯಸ್ಥರ ಎರಡನೇ ಉನ್ನತಮಟ್ಟದ ಸಮ್ಮೇಳನದಲ್ಲಿ ಭಾರತದ ಗೃಹಸಚಿವಾಲಯದ ವಿಶೇಷ ಸಚಿವರಾದ ವಿ.ಎಸ್.ಕೆ. ಕೌಮುದಿಯವರು ಈ ಅಂಶವನ್ನು ಮಂಡಿಸಿದರು. ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಇಂದು ಇಂಟರನೆಟ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಭಯೋತ್ಪಾದಕರು ಮತ್ತು ಭಯೋತ್ಪಾದನೆಯಲ್ಲಿ ದುರುಪಯೋಗಿಸಲಾಗುತ್ತಿದೆ. ಅದಕ್ಕಾಗಿ ಈ ಡ್ರೋನ್‍ನ ಉಪಯೋಗಿಸಲಾಗುತ್ತಿದೆ. ಕಡಿಮೆ ಖರ್ಚಿನಲ್ಲಿ ಡ್ರೋನ್‍ಅನ್ನು ಉಪಯೋಗಿಸಬಹುದು ಮತ್ತು ಸಹಜವಾಗಿ ಲಭ್ಯವಿರುತ್ತವೆ. ಇದರ ಮೂಲಕ ಶಸ್ತ್ರ ಮತ್ತು ಸ್ಪೋಟಕಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸಲಾಗುತ್ತಿದೆ. ಇದು ಜಗತ್ತಿಗೇ ಒಂದು ಸವಾಲಾಗಿ ಪರಿಣಮಿಸಿದೆ.