ಶ್ರೀಲಂಕಾದಲ್ಲಿ ನಡೆದ ೭ ನೇ ‘ಜಾಗತಿಕ ಮಹಿಳಾ ಅಧ್ಯಯನ ಪರಿಷತ್ತು ೨೦೨೧’
ಮುಂಬಯಿ – ಶ್ರೀಲಂಕಾದ ‘ದಿ ಇಂಟರನ್ಯಾಶನಲ್ ಇನ್ಸಿಟ್ಯೂಟ್ ಆಫ್ ನಾಲೇಜ ಮ್ಯಾನೆಜಮೆಂಟ್, ಶ್ರೀಲಂಕಾ’ ಇದು ಇತ್ತೀಚೆಗೆ ‘ಆನ್‍ಲೈನ್’ನಲ್ಲಿ ಆಯೋಜಿಸಿದ್ದ ೭ ನೇ ‘ವಲ್ರ್ಡ ಕಾನ್ಫರೆನ್ಸ್ ಆನ್ ವುಮನ್ಸ್ ಸ್ಟಡಿಸ್ ೨೦೨೧ (ಜಾಗತಿಕ ಮಹಿಳಾ ಅಧ್ಯಯನ ಪರಿಷತ್ತು ೨೦೨೧) ಈ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಭಾಗವಹಿಸಿತ್ತು. ವಿಶ್ವವಿದ್ಯಾಲಯ ಅಮೇರಿಕಾದ ಪೂ. (ಸೌ.) ಭಾವನಾ ಶಿಂದೆ ಅವರು ‘ಆಭರಣವು ಆಧ್ಯಾತ್ಮಿಕ ಮಟ್ಟದಲ್ಲಿ ಮಹಿಳೆಯರ ಮೇಲೆ ಯಾವ ಪರಿಣಾಮ ಬೀರುತ್ತದೆ?’ ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಪರಾತ್ಪರ ಗುರು ಡಾ. ಆಠವಲೆಯವರು ಈ ಸಂಶೋಧನಾ ಪ್ರಬಂಧದ ಲೇಖಕರಾಗಿದ್ದು. ಪೂ. (ಸೌ.) ಭಾವನಾ ಶಿಂದೆ ಸಹಲೇಖಕರಾಗದ್ದಾರೆ. ಈ ಶೋಧಪ್ರಬಂಧದ ಪ್ರಸ್ತುತಿಗೆ ಪರಿಷತ್ತು ‘ಸುಪರಲೆಟಿವ್ ಪ್ರೊಜೆಕ್ಷನ್ ಅವಾರ್ಡ್'(ಅತ್ಯುತ್ತಮ ಪ್ರಸ್ತುತಿಕರಣ ಪ್ರಶಸ್ತಿ) ನೀಡಿದೆ.
ಈ ಪರಿಷತ್ತಿನಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂತರ್ಗತ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಪರವಾಗಿ ವಿಡಿಯೋ ತೋರಿಸಲಾಯಿತು. ವೀಡಿಯೊದ ಮೂಲಕ, ಸಂಗೀತ ಮತ್ತು ನೃತ್ಯದ ಒಂದೊಂದು ಸಾತ್ತ್ವಿಕ ಪ್ರಸ್ತುತಿಯನ್ನು ತೋರಿಸಲಾಯಿತು, ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿ ಆಗುವ ಪರಿಣಾಮದ ಬಗ್ಗೆ ಸಂಶೋಧನಾ-ಆಧಾರಿತ ಮಾಹಿತಿಯನ್ನು ತೋರಿಸಲಾಯಿತು. ಕೊರಳಿನಲ್ಲಿ ೩ ವಿಧದ ಹಾರಗಳನ್ನು ಧರಿಸಿದವರ ಮೇಲಾಗುವ ಸೂಕ್ಷ್ಮ ಪರಿಣಾಮಗಳ ಅಧ್ಯಯನಕ್ಕಾಗಿ, ಪ್ರಭಾವಳಿ ಮತ್ತು ಶಕ್ತಿ ಅಳತೆ ಸಾಧನಗಳು ಮತ್ತು ಸೂಕ್ಷ್ಮ ಪರೀಕ್ಷಣಗಳ ಮೂಲಕ ಸಂಶೋಧನೆಯ ಮಾಹಿತಿಯನ್ನು ಪೂ. (ಸೌ.) ಭಾವನಾ ಶಿಂದೆ ಸಭಿಕರಿಗೆ ನೀಡಿದ್ದರು.
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. * ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ. |